ಟೀಕಿಸುವವರಿಗೆ ಅಭಿವೃದ್ಧಿ ಮಾಡಿ ಉತ್ತರ ನೀಡುತ್ತಿದ್ದೇನೆ

KannadaprabhaNewsNetwork |  
Published : Feb 06, 2025, 12:17 AM IST
೨೬ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗೃಹಸಚಿವ ಚಾಲನೆ | Kannada Prabha

ಸಾರಾಂಶ

ಸಿಎಂ ಸಿದ್ದರಾಮಯ್ಯ ಕರ್ನಾಟಕ ಸರ್ಕಾರದ ೧೭ನೇ ಬಜೆಟ್ ಮಂಡನೆ ಮಾಡುತ್ತಾರೆ. ಬಜೆಟ್‌ನಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಸಿಎಂಗೆ ನಾನು ಮನವಿ ಮಾಡಿದ್ದೇನೆ. ಗ್ಯಾರಂಟಿ ಯೋಜನೆಯ ಜೊತೆ ಗ್ರಾಮೀಣ ಭಾಗದ ಅಭಿವೃದ್ಧಿ ಆಗಲಿದೆ. ಟೀಕೆ ಮಾಡೋರಿಗೆ ನಾನು ಅಭಿವೃದ್ಧಿ ಮಾಡಿ ಉತ್ತರ ನೀಡುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಸಿಎಂ ಸಿದ್ದರಾಮಯ್ಯ ಕರ್ನಾಟಕ ಸರ್ಕಾರದ ೧೭ನೇ ಬಜೆಟ್ ಮಂಡನೆ ಮಾಡುತ್ತಾರೆ. ಬಜೆಟ್‌ನಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಸಿಎಂಗೆ ನಾನು ಮನವಿ ಮಾಡಿದ್ದೇನೆ. ಗ್ಯಾರಂಟಿ ಯೋಜನೆಯ ಜೊತೆ ಗ್ರಾಮೀಣ ಭಾಗದ ಅಭಿವೃದ್ಧಿ ಆಗಲಿದೆ. ಟೀಕೆ ಮಾಡೋರಿಗೆ ನಾನು ಅಭಿವೃದ್ಧಿ ಮಾಡಿ ಉತ್ತರ ನೀಡುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.ತಾಲೂಕಿನ ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಜಂಪೇನಹಳ್ಳಿ ಕ್ರಾಸಿನ ಬಳಿ ಪಿಡ್ಲ್ಯೂಡಿ ಇಲಾಖೆಯಿಂದ ಬುಧವಾರ ೨೬ಕೋಟಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಬಜೆಟ್‌ನಲ್ಲಿ ತುಮಕೂರು ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರದ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಸಿಗಲಿದೆ. ಕೊರಟಗೆರೆ ಪಪಂಯನ್ನು ಪುರಸಭೆಯನ್ನಾಗಿ ಮಾಡಲು ಈಗಾಗಲೇ ಸರ್ಕಾರ ಚಿಂತನೆ ನಡೆಸುತ್ತಿದೆ. ಜಂಪೇನಹಳ್ಳಿ ಕ್ರಾಸ್‌ನಲ್ಲಿ ಕುಡಿಯುವ ನೀರು, ಹೈಮಾಸ್ಕ್ ಲೈಟ್ ವ್ಯವಸ್ಥೆ ಮಾಡಿಸುತ್ತೇನೆ. ಸರ್ಕಾರದಲ್ಲಿ ದುಡ್ಡಿಲ್ಲ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ ಎಂಬ ತಪ್ಪು ಸಂದೇಶ ನೀಡುತ್ತಿದ್ದಾರೆ. ೫ ಗ್ಯಾರಂಟಿಯ ಬಗ್ಗೆ ಟೀಕೆ ಮಾಡಿದೋರು ಈಗ ಅದರ ಲಾಭ ಪಡೆಯುತ್ತಿಲ್ಲವೇ ಎಂದು ಕಿಚಾಯಿಸಿದರು. ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಅಶೋಕ್, ಕೊರಟಗೆರೆ ತಹಸೀಲ್ದಾರ್ ಮಂಜುನಾಥ. ಪಿಡ್ಲ್ಯೂಡಿ ಎಇಇ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಗ್ರಾಪಂ ಅಧ್ಯಕ್ಷ ಪುಪ್ಪರವಿಕುಮಾರ್, ಮಾಜಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಮುಖಂಡರಾದ ಮಹಾಲಿಂಗಪ್ಪ, ಟೈಗರ್‌ನಾಗ್, ಪ್ರಸನ್ನಕುಮಾರ್, ಮಂಜುನಾಥ, ಕಿರಣ್, ರಂಗರಾಜು ಸೇರಿದಂತೆ ಇತರರು ಇದ್ದರು.

.....ಕೋಟ್

ನನ್ನ ಪಕ್ಷದ ಗ್ಯಾರಂಟಿ ಯೋಜನೆಯ ಪ್ರಣಾಳಿಕೆ ಬರೆದಿದ್ದು ನಾನು. ಪ್ರತಿವರ್ಷ ಗ್ಯಾರಂಟಿ ಯೋಜನೆಗೆ ೫೮ಸಾವಿರ ಕೋಟಿ ಖರ್ಚಾಗುತ್ತಿದೆ. ಕಳೆದ ೨ವರ್ಷದಿಂದ ಗ್ಯಾರಂಟಿ ಯೋಜನೆಯಯ ಹಣ ಬಡವರಿಗೆ ತಲುಪುತ್ತಿದೆ. ವಿರೋಧ ಪಕ್ಷದವರಿಗೆ ಟೀಕೆ ಮಾಡಲು ಬೇರೆ ಕಾರಣ ಇಲ್ಲದೇ ಅಭಿವೃದ್ಧಿಯ ವಿಚಾರ ಮಾತನಾಡ್ತಾರೆ ಅಷ್ಟೆ.-ಡಾ.ಜಿ.ಪರಮೇಶ್ವರ. ಗೃಹಸಚಿವ ರಾಜ್ಯ ಸರ್ಕಾರ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ