ಸಹನೆಯಿಂದಲೇ ಪ್ರಕರಣ ಎದುರಿಸುತ್ತಿರುವೆ: ಮುರುಘಾ ಶರಣರು

KannadaprabhaNewsNetwork |  
Published : Oct 08, 2024, 01:03 AM IST
ಕ್ಯಾಪ್ಷನಃ7ಕೆಡಿವಿಜಿ43, 44ಃ ದಾವಣಗೆರೆಯ ಶಿವಯೋಗಾಶ್ರಮಕ್ಕೆ ಆಗಮಿಸಿದ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಭಕ್ತರನ್ನು ಭೇಟಿ ಮಾಡಿದರು. | Kannada Prabha

ಸಾರಾಂಶ

ಶರಣರು, ಸ್ವಾಮೀಜಿಗಳು ಮತ್ತು ಸಂತರ ಪ್ರಬಲವಾದ ಅಸ್ತ್ರವೇ ಸಹನೆ. ಆದ್ದರಿಂದ ಆರೋಪವನ್ನು ಸಹ ಅಖಂಡ ಸಹನೆಯಿಂದಲೇ ಎದುರಿಸುತ್ತಿದ್ದೇನೆ. ಸತ್ಯಕ್ಕೆ ಜಯ ಸಿಗುವ ನಿರೀಕ್ಷೆಯಿದೆ ಎಂದು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ದಾವಣಗೆರೆಯಲ್ಲಿ ನುಡಿದಿದ್ದಾರೆ.

- ಪ್ರಕರಣ ಮುಂದುವರೆಯುತ್ತಿದ್ದು, ಈ ಬಗ್ಗೆ ಮಾತನಾಡುವುದಿಲ್ಲ ಎಂದ ಶ್ರೀ

- ಜೈಲಿನಲ್ಲಿದ್ದಾಗ 350 ಪುಸ್ತಕ ಓದಿದ್ದೇನೆ, ಐದು ಪುಸ್ತಕಗಳ ಬರೆದಿದ್ದೇನೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಶರಣರು, ಸ್ವಾಮೀಜಿಗಳು ಮತ್ತು ಸಂತರ ಪ್ರಬಲವಾದ ಅಸ್ತ್ರವೇ ಸಹನೆ. ಆದ್ದರಿಂದ ಆರೋಪವನ್ನು ಸಹ ಅಖಂಡ ಸಹನೆಯಿಂದಲೇ ಎದುರಿಸುತ್ತಿದ್ದೇನೆ. ಸತ್ಯಕ್ಕೆ ಜಯ ಸಿಗುವ ನಿರೀಕ್ಷೆಯಿದೆ ಎಂದು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನುಡಿದರು.

ಸೋಮವಾರ ಸಂಜೆ ದಾವಣಗೆರೆಯ ಶಿವಯೋಗಾಶ್ರಮಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಂಡವಾದ ಸಹನೆಯಿಂದ ಎಂತಹ ಆಪತ್ತನ್ನಾದರೂ ಗೆಲ್ಲಬಹುದು. ಸ್ವಾಮಿಗಳಿಗೆ, ಸಂತರಿಗೆ ಸಹನೆಯಿದ್ದರೆ ಮಾತ್ರ ಎಲ್ಲವನ್ನೂ ಸಹಿಸಬಹುದು. ಎಲ್ಲದರಲ್ಲೂ ಸಹನೆಯಿದೆ ಎಂದರೆ ತೇಜೋವಧೆಯಲ್ಲೂ ಸಹನೆ ತೆಗೆದುಕೊಳ್ಳಬೇಕು. ಸತ್ಯಕ್ಕೆ ಜಯವಿದೆ ಎನ್ನುವ ನಿರೀಕ್ಷೆಯಿದೆ. ಪ್ರಕರಣ ಮುಂದುವರೆಯುತ್ತಿದ್ದು ಈಗಲೇ ಈ ಬಗ್ಗೆ ಮಾತನಾಡುವುದಿಲ್ಲ ಎಂದರು.

350 ಪುಸ್ತಕ ಓದಿದ್ದೇನೆ:

ಜೈಲಿಗೆ ಹೋಗುವ ಮುನ್ನ ಮತ್ತು ಹೊರಬಂದಾಗ ಅದೇ ನಗು ಮುಖವಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶರಣರು, ನೋಡುವವರ ದೃಷ್ಠಿಯಲ್ಲಿ ಹಾಗೆ ಕಾಣಿಸುತ್ತಿರಬೇಕು. ಜೈಲಿನಲ್ಲಿದ್ದಾಗ ಸುಮಾರು 350 ಪುಸ್ತಕಗಳನ್ನು ಓದಿದ್ದೇನೆ. ಜ್ಞಾನ ಸಂಪಾದನೆಗೆ ಹೆಚ್ಚಿನ ಒತ್ತು ಕೊಟ್ಟು ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ. ಐದು ಪುಸ್ತಕಗಳನ್ನು ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ಬರೆದಿದ್ದೇನೆ ಎಂದು ತಿಳಿಸಿದರು.

ಸದ್ಯಕ್ಕೆ ಶಿವಯೋಗಾಶ್ರಮದಲ್ಲಿಯೇ ವಾಸ್ತವ್ಯ ಹೂಡಲಿದ್ದು, ಭಕ್ತರಿಗಾಗಿಯೇ ನಾವಿರುವುದರಿಂದ ಭಕ್ತರ ಭೇಟಿಗೂ ಅವಕಾಶವಿದೆ ಎಂದರು.

ಈ ಸಂದರ್ಭ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಶಿವಯೋಗಾಶ್ರಮ ಟ್ರಸ್ಟ್, ವಿರಕ್ತ ಮಠದ ಪದಾಧಿಕಾರಿಗಳು, ಶ್ರೀಮಠದ ಭಕ್ತರು ಇದ್ದರು.

- - - -7ಕೆಡಿವಿಜಿ43, 44ಃ:

ದಾವಣಗೆರೆಯ ಶಿವಯೋಗಾಶ್ರಮಕ್ಕೆ ಆಗಮಿಸಿದ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಭಕ್ತರನ್ನು ಭೇಟಿ ಮಾಡಿದರು.

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌