- 41ನೇ ಜನ್ಮದಿನ ಕಾರ್ಯಕ್ರಮದಲ್ಲಿ ಸನ್ಮಾನ । ನಾನು ಎಲ್ಲಿಗೂ ಹೋಗೋದಿಲ್ಲ: ಜಿಬಿವಿ - - -
ಒಂದೂವರೆ ವರ್ಷದಿಂದ ನನ್ನೊಂದಿಗೆ ಗಟ್ಟಿಯಾಗಿ ನಿಂತ ನಿಮ್ಮೆಲ್ಲರಿಗೂ ನಾನು ಋಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ದೊಡ್ಡ ನಾಯಕನಾಗಿ ಬೆಳೆದರೆ ಅದೆಲ್ಲಾ ನಿಮ್ಮಿಂದಲೇ ಎಂದು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ, ಬೆಂಗಳೂರಿನ ಇನ್ ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ. ವಿನಯಕುಮಾರ ಹೇಳಿದರು.
ನಗರದ ಪೂಜಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಸ್ವಾಭಿಮಾನಿ ಅಭಿಮಾನಿ ಬಳಗ, ಹಿತೈಷಿಗಳು, ಅಭಿಮಾನಿಗಳು ಏರ್ಪಡಿಸಿದ್ದ ವಿನಯಕುಮಾರ ಅವರ 41ನೇ ಜನ್ಮದಿನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರಾಜಕೀಯ ಪಯಣದಲ್ಲಿ ನನ್ನೊಡನೆ ನಿಲ್ಲಲು ನಿಮಗೂ ಗುಂಡಿಗೆ, ಧೈರ್ಯ, ಸ್ವಾಭಿಮಾನ ಬೇಕಿತ್ತು. ಅದು ನಿಮ್ಮೆಲ್ಲರಲ್ಲೂ ಇದೆ ಎಂದರು.ದಾವಣಗೆರೆ ಲೋಕಸಭೆ ಚುನಾವಣೆ ಬಳಿಕ ನಾನು ಇಲ್ಲಿಂದ ಜಾಗ ಖಾಲಿ ಮಾಡುತ್ತೇನೆಂದು ಕೆಲವರು ಅಂದುಕೊಂಡಿದ್ದರು. ಆದರೆ, ನಾನು ಎಲ್ಲಿಗೂ ಹೋಗಲ್ಲ. ರಾಜಕಾರಣಕ್ಕೆ ಬಂದಿರುವುದು ಹಣ ಮಾಡಲಿಕ್ಕಲ್ಲ. ನನ್ನೊಟ್ಟಿಗೆ ನಾಯಕರನ್ನೂ ಬೆಳೆಸುವ ಸಲುವಾಗಿ ಎಂದರು.
ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಮಾತನಾಡಿ, ಜಿ.ಬಿ. ವಿನಯಕುಮಾರ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಕೆಲಸ ಮಾಡಿದವರು. ಇಂತಹ ಯುವಕರು ಶಾಸಕರಾಗಬೇಕು. ವಿನಯ್ ಅವರ ನಡೆ, ನುಡಿ, ಪ್ರಯತ್ನ, ಜನರ ಪ್ರೀತಿ ಸಂಪಾದನೆ ಮಾಡಿದ್ದಾರೆ. ಅವರು ಮುಂದಿನ ದಿನಗಳಲ್ಲಿ ವಿಧಾನಸಭೆ ಪ್ರವೇಶಿಸುವಂತಾಗಲಿ ಎಂದು ಹಾರೈಸಿದರು.
- - --5ಕೆಡಿವಿಜಿ11: ಜಿ.ಬಿ.ವಿನಯಕುಮಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದರು.