ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ವೀರಶೈವ ಲಂಗಾಯತ ಭವನದಲ್ಲಿ ವೀರಶೈವ ಮಹಾಸಭಾ ಶರಣ ಸಾಹಿತ್ಯ ಪರಿಷತ್ ಕದಳಿ ವೇದಿಕೆ ಹಾಗೂ ಯುವ ಘಟಕ ವೀರಶೈವ ಮಹಾಸಭಾ ವಿಜಯಪುರ ಸಂಯುಕ್ತಾಶ್ರಯದಲ್ಲಿ ಲಿಂ.ಶಿವಮ್ಮಗೌಡತಿ ಶಂಕರಗೌಡ ಪಾಟೀಲ ದತ್ತಿ ಕಾಯ೯ಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ 6 ಜಿಲ್ಲಾ ಹಾಗೂ 9 ತಾಲೂಕು ಸಮ್ಮೇಳನ ಮಾಡಿದ ಶ್ರೇಯಸ್ ಕಸಾಪಕ್ಕೆ ಸಲ್ಲುತ್ತದೆ. ಪ್ರತಿ ಭಾನುವಾರ ಸಾಹಿತ್ಯಿಕ ಚಟುವಟಿಕೆ ಮಾಡುವ ಮೂಲಕ ಜಿಲ್ಲೆಯಲ್ಲಿ ಸಾಹಿತ್ಯದ ವಾತಾವರಣ ಸೃಷ್ಟಿಸಿದ್ಡೇವೆ ಎಂದರು.ಶರಣ ಚಿಂತಕ ಎಂ.ಬಿ.ಕಟ್ಟಿಮನಿ ಸಾಥ೯ಕ ಬದುಕಿಗೆ ಶರಣರ ಸಂದೇಶ ಕರಿತು ಉಪನ್ಯಾಸ ನೀಡಿ, ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಂಥನಾಳದ ಶ್ರೀಗಳು, ಡಾ.ಫ.ಗು.ಹಳಕಟ್ಟಿ, ಸಿದ್ದೇಶ್ವರ ಶ್ರೀ, ಹಡೆ೯ಕರ ಮಂಜಪ್ಪ, ತುಮಕೂರು ಶ್ರೀಗಳು, ನಾಲ್ವಡಿ ಕೃಷ್ಣರಾಜ ಒಡೆಯರ, ಸರ್.ವಿಶ್ವೇಶ್ವರಯ್ಯ, ಸಾಥ೯ಕ ಬಡುಕಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ವಿ.ಸಿ.ನಾಗಠಾಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು
ಅತ್ಯುತ್ತಮ ಕಾಯ೯ಮಾಡಿದ್ದು ಶ್ಲಾಘನೀಯವಾಗಿದೆ. ಹಾಸಿಂಪೀರ ವಾಲೀಕಾರ ಸನ್ಮಾನ ಸ್ವಿಕರಿಸಿದ್ದು ತುಂಬ ಸಂತೋಷವಾಗಿದೆ. ಕಸಾಪ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಸಾವಿರಾರು ಜನರಿಗೆ ವೇದಿಕೆ ನೀಡಿದ್ದು ಸಂತೋಷದ ಸಂಗತಿ. ಶರಣ ಸಾಹಿತ್ಯ ಪರಿಷತ್ತಿನಲ್ಲಿ 150ಕ್ಕೂ ಹೆಚ್ಚು ದತ್ತಿಗಳಿವೆ ಎಂದರು.5 ವರ್ಷ ಅವಧಿ ಪೂರೈಸಿದ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹಾಗೂ ಎಂ.ಬಿ.ಕಟ್ಟಿಮನಿ ಅವರಿಗೆ ಸನ್ಮಾನಿಸಲಾಯಿತು.ಜಂಬುನಾಥ ಕಂಚಾಣಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದಭ೯ದಲ್ಲಿ ದತ್ತಿ ದಾನಿಗಳಾದ ಸೋಮನಗೌಡ ಪಾಟೀಲ, ದಾಸೋಹಿ ದಾನಿಗಳಾದ ಸಿದ್ಧನಗೌಡ ಬೀರಗೊಂಡ, ಎಸ್.ವೈ.ಗದಗ, ಅಮರೇಶ ಸಾಲಕ್ಕಿ, ಶರಣಗೌಡ ಪಾಟೀಲ, ಎಂ.ಜಿ.ಯಾದವಾಡ, ಸಂಗಮೇಶ ಬದಾಮಿ, ಶಾರದಾ ಐಹೊಳ್ಳಿ, ಈರಣ್ಣ ತೊಂಡಿಕಟ್ಟಿ, ಬಸವರಾಜ ಸಾರವಾಡ, ಎಸ್.ಜಿ.ನಾಡಗೌಡ, ಪ್ರೊ.ದೊಡ್ಡಣ್ಣ ಬಜಂತ್ರಿ, ಈಶ್ವರಗೊಂಡ ಉಪಸ್ಥಿತರಿದ್ದರು. ಡಾ.ವಿ.ಡಿ.ಐಹೊಳಿ ಸ್ವಾಗತಿಸಿದರು. ಈರಣ್ಣ ತೊಂಡಿಕಟ್ಟಿ ನಿರೂಪಿಸಿದರು.ಜಿಲ್ಲಾ ಕನ್ನಡ ಭವನಕ್ಕೆ ಈಗಾಗಲೇ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ₹1 ಕೋಟಿ ಬಿಡುಗಡೆ ಮಾಡಿದೆ. ಕಸಾಪ ನಿವೇಶನ ಉತಾರಿ
-ಹಾಸಿಂಪೀರ್ ವಾಲೀಕಾರ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ವಿಜಯಪುರ.