ರಜೆ ಸಿಗಲಿಲ್ಲ, ಪುತ್ರನೂ ಉಳಿಯಲಿಲ್ಲ...!

KannadaprabhaNewsNetwork | Published : Mar 5, 2025 12:31 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಕಡೆಗೂ ‌ನನ್ನ ಮಗ ಉಳಿಯಲಿಲ್ಲ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ನನಗೆ ಬಹಳ ನೋವಾಗಿದೆ. ಇಂತಿ ನಿಮ್ಮ ಎ.ಎಸ್.ಬಂಡುಗೋಳ ಎಂದು ವಿಜಯಪುರ ಜಿಲ್ಲಾ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಫೋಟೋದೊಂದಿಗೆ ಮೆಸೇಜ್ ಹಾಕಿದ್ದಾನೆ. ಪೊಲೀಸ್ ಕಾನ್‌ಸ್ಟೇಬಲ್‌ ನಡೆಗೆ ಇದೀಗ ಪರ ವಿರೋಧ ಚರ್ಚೆಗೆ ಕಾರಣ

ಕನ್ನಡಪ್ರಭ ವಾರ್ತೆ ವಿಜಯಪುರ

ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಕಡೆಗೂ ‌ನನ್ನ ಮಗ ಉಳಿಯಲಿಲ್ಲ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ನನಗೆ ಬಹಳ ನೋವಾಗಿದೆ. ಇಂತಿ ನಿಮ್ಮ ಎ.ಎಸ್.ಬಂಡುಗೋಳ ಎಂದು ವಿಜಯಪುರ ಜಿಲ್ಲಾ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಫೋಟೋದೊಂದಿಗೆ ಮೆಸೇಜ್ ಹಾಕಿದ್ದಾನೆ. ಪೊಲೀಸ್ ಕಾನ್‌ಸ್ಟೇಬಲ್‌ ನಡೆಗೆ ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

ವಿಜಯಪುರ ನಗರದ ಗಾಂಧಿಚೌಕ್ ಠಾಣೆಯ ಕಾನ್‌ಸ್ಟೇಬಲ್ ಎ.ಎಸ್.ಬಂಡುಗೋಳರ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಮಗು ಮೃತಪಟ್ಟ ಬಳಿಕ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಮೆಸೇಜ್ ಹಾಕಿದ ಕಾನ್‌ಸ್ಟೇಬಲ್ ರಜೆ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾನೆ. ಇದೀಗ ಆತನ ಮೆಸೆಜ್‌ ಹಾಕಿದ್ದ ವಿಚಾರ ಡಿಜಿಪಿ, ಗೃಹ ಸಚಿವ ಜಿ‌.ಪರಮೇಶ್ವರ ಹಾಗೂ ಮಾಧ್ಯಮಗಳಿಗೆ ಜೊಹೇದ್ ಕಿಂಗ್ ಎಂಬ ಹೆಸರಿನ ಇನ್‌ಸ್ಟಾಗ್ರಾಂನಿಂದ ಟ್ಯಾಗ್ ಕೂಡ ಮಾಡಲಾಗಿದೆ.

ರಜೆ ಕೊಟ್ಟಿದ್ದೇವೆ ಎಂದ ಠಾಣಾ ಬರಹಗಾರ:

ಆತ ಕರ್ತವ್ಯದ ಮೇಲೆ ಇದ್ದಾಗಲೂ ಆಸ್ಪತ್ರೆಗೆ ಹೋಗಲು ಅವಕಾಶ ನೀಡಿದ್ದೇವೆ. ಬೆಳಗಾವಿಗೆ ಟಪಾಲ್ ಕೊಡಲು ಹೋಗಿದ್ದ ಅಕ್ಬರ್ ತನ್ನ ಮಗುವಿನ ಆಸ್ಪತ್ರೆಗೆ ಅಡ್ಮಿಟ್ ಮಾಡಿದ ಹಿನ್ನೆಲೆ ಕರ್ತವ್ಯಕ್ಕೆ ಬರಲ್ಲ ಎಂದು ಕರೆ ಮಾಡಿದ್ದ. ಆಗ ಮಗುವಿನ ಕಾಳಜಿ ವಹಿಸಿ, ನಾವು ಬೇರೆಯವರನ್ನು ಡ್ಯೂಟಿಗೆ ಅಡ್ಜಸ್ಟ್‌ ಮಾಡುತ್ತೇವೆ ಎಂದಿದ್ದೆ. ಮರುದಿನ ರೋಲ್ ಕಾಲ್ ಸಲುವಾಗಿ ಕಾಲ್ ಮಾಡಿದಾಗ ಅಕ್ಬರ್ ಆಸ್ಪತ್ರೆಯಲ್ಲಿ ಇರೋದಾಗಿ ತಿಳಿಸಿದ್ದ. ನೀವು ಮಗುವನ್ನ ನೋಡಿಕೊಳ್ಳಿ ನಾವು ಡ್ಯೂಟಿ ಅಡ್ಜಸ್ಟ್‌ ಮಾಡುತ್ತೇವೆ ಎಂದಿದ್ದೇವು. ಡ್ಯೂಟಿ ಅಡ್ಜಸ್ಟ್‌ ಮಾಡಿ ಠಾಣಾ ಡೈರಿಯಲ್ಲಿ ಈತ ಡ್ಯೂಟಿಯಲ್ಲಿ ಇರುವಂತೆ ತೋರಿಸಿದ್ದೇವೆ. ಈವರೆಗೂ ಅವರು ರಜಾ ಚೀಟಿ ಕೊಟ್ಟಿಲ್ಲ. ಯಾರಿಗೂ ರಜೆಯನ್ನು ಸಹ ಕೇಳಿಲ್ಲ. ನಾವೇ ಅಡ್ಜಸ್ಟ್ ಮಾಡಿ ಆಸ್ಪತ್ರೆಗೆ ಹೋಗಲು ಅವಕಾಶ ಮಾಡಿ ಕೊಟ್ಟಿದ್ದೇವೆ ಎಂದು ಠಾಣೆಯ ಬರಹಗಾರ ಸ್ಪಷ್ಟನೆಯನ್ನು ನೀಡಿದ್ದಾನೆ.

----------

ಬಾಕ್ಸ್‌

ಬಂಡುಗೋಳ ರಜೆಯನ್ನೇ ಕೇಳಿಲ್ಲ: ಎಸ್ಪಿ

ಈ ಕುರಿತು ಮಾಹಿತಿ ನೀಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, ಎ.ಎಸ್.ಬಂಡುಗೋಳ ಯಾವುದೇ ರಜೆ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮೌಖಿಕವಾಗಿ ಹಾಗೂ ಲಿಖಿತವಾಗಿ ಆತ ಗಾಂಧಿಚೌಕ್ ಪೊಲೀಸ್ ಠಾಣಾಧಿಕಾರಿಗಳ ಬಳಿ‌‌ ರಜೆ ಕೇಳಿಲ್ಲ. ಸೋಮವಾರ ಹಾಗೂ ಮಂಗಳವಾರ ಕಾನ್‌ಸ್ಟೇಬಲ್ ಬಂಡುಗೋಳ ಕರ್ತವ್ಯಕ್ಕೆ ಹಾಜರಾಗಿಲ್ಲ. ಬಂಡುಗೋಳ‌ ಪತ್ನಿಗೆ ಇದು ಮೂರನೇ ಹೆರಿಗೆ ಎಂದು ಗೊತ್ತಾಗಿದ್ದು, ರಜೆಗಾಗಿ ಯಾವುದೇ ‌ಮನವಿ‌ ಮಾಡಿರಲಿಲ್ಲ. ಇಲಾಖಾ‌ ಸಿಬ್ಬಂದಿ ಗ್ರೂಪ್‌ನಲ್ಲಿ ಮಂಗಳವಾರ ಆತ ಪೋಸ್ಟ್ ಹಾಕಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ, ಈ ಘಟನೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ವಾಗಿದೆ.

ವಾಗಿದೆ.

Share this article