- ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ
- ಕೆಮಿಕಲ್ ತ್ಯಾಜ್ಯ ಕಂಪನಿಗಳ ವಿಷಗಾಳಿ ದುರ್ನಾತದ ಎಫೆಕ್ಟ್- ಜನ-ಜಲ ಜೀವನದ ಮೇಲೆ ಅಡ್ಡ ಪರಿಣಾಮ : ಹದಗೆಡುತ್ತಿರುವ ಆರೋಗ್ಯ, ಪರಿಸರ
- ಕನ್ನಡಪ್ರಭ ಸರಣಿ ವರದಿ ಭಾಗ : 100ಆನಂದ.ಎಂ.ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ಹಾಗೂ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುವ ವಿಷಗಾಳಿ ಹಾಗೂ ದುರ್ನಾತದ ಪರಿಣಾಮಗಳಿಂದಾಗಿ ಈ ಭಾಗದ ಹತ್ತಾರು ಹಳ್ಳಿಗಳ ಜನರ ಆರೋಗ್ಯದ ಮೇಲೆ ಆಗುತ್ತಿರುವ ಭಾರಿ ಆತಂಕ ಸೃಷ್ಟಿಸಿದೆ.ಇದ ಸಹಿಸಿಕೊಂಡೇ ನರಕಯಾತನೆಯ ಬದುಕು ಸಾಗಿಸುತ್ತಿರುವ ತಮ್ಮಗಳ ದುಸ್ಥಿತಿ ಹೇಗಿದೆಯಂದರೆ, ರಾತ್ರಿ ಮಲಗಿದವರು ಬೆಳಿಗ್ಗೆ ಜೀವಂತವಾಗಿ ಏಳುತ್ತಿವೆಯೋ ಎಂಬ ಅನುಮಾನ ಮೂಡಿದೆ ಎಂದು ನೊಂದದುಬೆಂದ ಜನರ ಮಾತುಗಳಾಗಿವೆ.
ಈ ಭಾಗದ ಜನ- ಜೀವನವನ್ನು ಅಕ್ಷರಶಳ ಹಾಳು ಮಾಡಿರುವ ಕೆಮಿಕಲ್ ಕಂಪನಿಗಳ ವಿಷಾನಿಲ ದುರ್ನಾತ ವಾತಾವರಣದ ಅಟ್ಟಹಾಸ ನಿದ್ದೆಗೆಡಿಸಿದೆ. ಸದ್ಯ, ಈಗ ಬೆರಳಣಿಕೆ ಕಂಪನಿಗಳ ಆರಂಭದಲ್ಲೇ ಈ ದುಸ್ಥಿತಿ ಇದೆ, ಇನ್ನು ಮುಂದೆ ಸುಮಾರು 34 ಫಾರ್ಮಾ ರಾಸಾಯನಿಕ ಕಂಪನಿಗಳು ಬಂದರೆ ಬದುಕು ಹೇಗಿರಬೇಡ ? ಈ ಭಾಗದ ಜನರ ಮುಂದಿನ ಪೀಳಿಗೆ ಸಂಪೂರ್ಣವಾಗಿ ನಾಶವಾಗುತ್ತದೆ ಅನ್ನೋ ಆತಂಕ ಮೂಡಿಸಿದೆ.-
ಕೋಟ್-1 ನಮ್ಮೂರಿನಲ್ಲಿ ಸ್ಥಾಪಿಸಿದ ಈ ರಾಸಾಯನಿಕ ಕಂಪನಿಗಳು ಅಕ್ಷರಶ: ಜನ-ಜೀವನವನ್ನು ಹಾಳು ಮಾಡಿದೆ, ಇಂತಹ ಕಂಪನಿಗಳು ಬರುತ್ತವೆ ಎಂದು ನಮ್ಮ ಕನಸು -ಮನಸ್ಸಲ್ಲೂ ಅಂದುಕೊಂಡಿರಲಿಲ್ಲ. ಇವುಗಳು ನಮ್ಮ ನೆಲ, ಜಲ ಮತ್ತು ಗಾಳಿಯನ್ನೂ ಕಲುಷಿತ ಮಾಡಿವೆ. ಇದರ ವಿರುದ್ಧ 2-3 ತಿಂಗಳಗಳಿಂದ ನಿರಂತರವಾಗಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತಿದ್ದಂತೆಯೇ, ಕಂಪನಿಗಳು ವಿಷಕಾರಿ ತ್ಯಾಜ್ಯವನ್ನು ಹೊರ ಹಾಕುವುದು ಕಡಿಮೆ ಮಾಡಿವೆ ನಿಜ. ಆದರೆ, ಮುಂದೇನು ? ಇದು ತಾತ್ಕಾಲಿಕವೇ ? ಕಂಪನಿಗಳು ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿ. ಮತ್ತೇ ರಾಸಾಯನಿಕ ಕಂಪನಿಗಳ ಈ ಭಾಗದಲ್ಲಿ ಸ್ಥಾಪನೆಗೆ ಸರಕಾರವು ಅವಕಾಶ ನೀಡಬಾರದು. : ಲಕ್ಷ್ಮೀ ಸಜ್ಜನ್, ಕಡೇಚೂರು. (16ವೈಡಿಆರ್8)-
ಕೋಟ್-2 : ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿ ಸ್ಥಾಪಿತವಾದ ಬಹುತೇಕ ರಾಸಾಯನಿಕ ಕಂಪನಿಗಳು ಪರಿಸರ ನಿಯಮಗಳ ಜತೆಗೆ ಕಾರ್ಮಿಕರ ರಕ್ಷಣೆ ನಿಯಮಗಳನ್ನು ಗಾಳಿಗೆ ತೂರಿವೆ. ಇದರಿಂದಾಗಿ ವಾರಕ್ಕೆ ಕನಿಷ್ಠ ಒಂದಾದರೂ ಅವಘಡಗಳು ಸಂಭವಿಸುತ್ತಿವೆ. ಇವು ಕೇವಲ ಕಂಪನಿಗಳ ಒಳಗೆ ಜರುಗಿದ ಘಟನೆಗಳು ಎಂದು ಸುಮ್ಮನೆ ಕುಳಿತರೆ, ಮುಂದೆ ನಾವು ರಾತ್ರಿ ಮಲಗಿ ಬೆಳಗ್ಗೆಯಾದರೂ ಎದ್ದೇಳಲು ಜೀವ ಇರುವುದೂ ಅನುಮಾನವಾಗಿದೆ. ಏಕೆಂದರೆ ಇಲ್ಲಿ ಸ್ಥಾಪಿಸಿದ ಕಂಪನಿಗಳು ಯಾವ ಸಮಯದಲ್ಲಿಯಾದರೂ ಅತಿ ದೊಡ್ಡ ಅವಘಡಕ್ಕೆ ಸಾಕ್ಷಿಯಾಗಬಹುದು. ಆದರಿಂದ ಇವುಗಳ ವಿರುದ್ಧ ಈ ಭಾಗದ ನಾಯಕರು ಯಾರ ಪ್ರಭಾವ, ಲಾಭಬಿಗೂ ಒಳಗಾಗದೆ ನಮ್ಮ ಜನರ, ಮುಂದಿನ ಪೀಳಿಗೆಯ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡಬೇಕು. : ಕಲ ಎಂ. ಕುಲಕರ್ಣಿ, ಸೈದಾಪುರ. (16ವೈಡಿಆರ್9)-
ಕೋಟ್ - 3 : ಕಡೆಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕೆಮಿಕಲ್ ಕಂಪನಿಗಳು ಹೊರ ಹಾಕುತ್ತಿರುವ ವಿಷಗಾಳಿ ಮತ್ತು ದುರ್ನಾತನಿದಿಂದಾಗಿ ಜನಜೀವನದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಭಾಗದ ಅನೇಕ ಗ್ರಾಮಸ್ಥರು ಇದರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದೆಲ್ಲವೂ ಗೊತ್ತಿದ್ದರೂ ಅಧಿಕಾರಗಳು ಕೆಲ ಪ್ರಭಾವಿ ರಾಜಕೀಯ ಮುಖಂಡರ ಮತ್ತು ಉದ್ಯೋಮಿಗಳ ಪ್ರಭಾವಕ್ಕೆ ಒಳಗಾಗಿ ಮೌನರಾಗಿದ್ದಾರೆ, ಕೇವಲ ಬೆರಳಣಿಕೆ ಕಂಪನಿಗಳು ಪ್ರಾರಂಭವಾದರೆ ಈ ದುಸ್ಥಿತಿ ಇದೆ, ಮುಂದೆ ಸುಮಾರೂ 34 ರಾಸಾಯನಿಕ ಕಂಪನಿಗಳು ಬರುತ್ತದೆ ಎನ್ನುತ್ತಿದ್ದಾರೆ. ಅವುಗಳು ಬಂದರೆ ಈ ಭಾಗದ ಮುಂದಿನ ಪೀಳಿಗೆ ಸಂಪೂರ್ಣವಾಗಿ ನಾಶವಾಗುತ್ತದೆ. ಇವಗಲೆ ನಾವುಗಳು ಎಚ್ಚರಗೊಂಡು ಇವುಗಳ ವಿರುದ್ಧ ರಸ್ತೆಗೆ ಇಳಿಯಬೇಕು. : ಶಿವಾನಂದ ಗೂಡಸ್ಲಿ, ಮುನಗಾಲ್. (16ವೈಡಿಆರ್10)-
16ವೈಡಿಆರ್7 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.