ಕಳಂಕವಿಲ್ಲದೇ ರಾಜಕೀಯ ಮಾಡಿರುವೆ

KannadaprabhaNewsNetwork |  
Published : Nov 19, 2025, 01:00 AM IST
೧೭ಶಿರಾ೧: ಶಿರಾ ತಾಲೂಕಿನ ಐತಿಹಾಸಿಕ ಮದಲೂರು ಕೆರೆಗೆ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಬಾಗಿನ ಅರ್ಪಿಸಿ ಗಂಗಾಪೂಜೆ ನೆರವೇರಿಸಿದರು. ದಿಶಾ ಸಮಿತಿ ಸದಸ್ಯರಾದ ಮದಲೂರು ಮೂರ್ತಿ ಮಾಸ್ಟ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಜಲಗೆರೆ ಮೂರ್ತಿ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಈರಣ್ಣ ಪಟೇಲ್ ಸೇರಿದಂತೆ ಹಲವರು ಹಾಜರಿದ್ದರು.  | Kannada Prabha

ಸಾರಾಂಶ

ರಾಜಕೀಯದಲ್ಲಿ ಯಾವುದೇ ಕಳಂಕವಿಲ್ಲದೆ ಅಧಿಕಾರ ಮಾಡಿದ್ದೇನೆ. ಮುಂದೆಯೂ ಇದೇ ರೀತಿ ಮುಂದುವರೆಯುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ರಾಜಕೀಯದಲ್ಲಿ ಯಾವುದೇ ಕಳಂಕವಿಲ್ಲದೆ ಅಧಿಕಾರ ಮಾಡಿದ್ದೇನೆ. ಮುಂದೆಯೂ ಇದೇ ರೀತಿ ಮುಂದುವರೆಯುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಸೋಮವಾರ ತಾಲೂಕಿನ ಐತಿಹಾಸಿಕ ಮದಲೂರು ಕೆರೆಗೆ ಬಾಗಿನ ಅರ್ಪಿಸಿ ಗಂಗಾಪೂಜೆ ನೆರವೇರಿಸಿ ಮಾತನಾಡಿದರು. ಶಿರಾ ತಾಲೂಕಿನ ಜನತೆ ನನಗೆ ಮುಂದಿನ ದಿನಗಳಲ್ಲಿ ಆರ್ಶೀವದಿಸಿದರೆ ತಾಲೂಕಿನ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಗಳ ಕೆರೆಗಳಿಗೆ ನೀರನ್ನು ಹರಿಸಲು ಶ್ರಮಿಸುತ್ತೇನೆ. ನಾನು ರಾಜಕೀಯ ಹಿನ್ನೆಲೆಯಿಂದ ಬಂದಿರುವವನಲ್ಲ. ನಾನು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಶಿಕ್ಷಣ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಮಹದಾಸೆಯಿಂದ ರಾಜಕೀಯಕ್ಕೆ ಬಂದಿದ್ದೇನೆ. ವಿಧಾನಪರಿಷತ್ ಸದಸ್ಯನಾಗಿ ೫ ವರ್ಷದಲ್ಲಿಯೇ ತಾಲೂಕಿನ ೬ ಸರಕಾರಿ ಶಾಲೆಗಳನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದೇನೆ ಎಂದರು.

ಶಿರಾ ತಾಲೂಕಿಗೆ ಹೇಮಾವತಿ ನೀರು ಹರಿಯಲು ಹಲವರ ಕೊಡುಗೆ ಇದೆ ಎಂದು ಹಲವರನ್ನು ಸ್ಮರಿಸಿದ ಅವರು, ಹಾಗೂ ಪಟ್ಟನಾಯಕನಹಳ್ಳಿ ಶ್ರೀಮಠದ ಶ್ರೀ ನಂಜಾವಧೂತ ಸ್ವಾಮೀಜಿಗಳು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಬೇಕೆಂದು ಹಕ್ಕೊತ್ತಾಯ ಮಾಡಿ ಹೋರಾಟ ಮಾಡಿದ ಫಲವಾಗಿ ನೀರು ಹರಿಯಲು ಸಾಧ್ಯವಾಗಿದೆ. ಹೇಮಾವತಿ ನೀರನ್ನು ಮೊದಲು ಹರಿಸಿದ್ದು ಬಿ.ಎಸ್.ಯಡಿಯೂರಪ್ಪ ಅವರು. ಮದಲೂರು ಕೆರೆಗೆ ಶಿರಾ ತಾಲೂಕಿನ ಪ್ರತಿಯೊಬ್ಬ ಪ್ರಜೆಯೂ ಬಾಗಿನ ಅರ್ಪಿಸುವ ಹಕ್ಕು ಇದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದು ವಿರೋಧಿಗಳಿಗೆ ಟಾಂಗ್‌ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಸರಿನ ದರದಲ್ಲಿ ಅಲ್ಪ ಇಳಿಕೆಗೆ ಸಿಎಂ ಸೂಚನೆ
ಕಬ್ಬು ಬೆಳೆಗಾರರ ಹೋರಾಟ ತೀವ್ರ, ಜೈಲ್‌ ಚಲೋಗೆ ಚಾಲನೆ