ಯಾರ ಮೇಲೂ ನನಗೆ ಸೇಡು ಮತ್ತು ದುರುದ್ದೇಶವಿಲ್ಲ : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ

KannadaprabhaNewsNetwork |  
Published : Mar 09, 2025, 01:49 AM ISTUpdated : Mar 09, 2025, 11:25 AM IST
ಯಾರ ಮೇಲೂ ನನಗೆ ಸೇಡು ಮತ್ತು ದುರುದ್ದೇಶವಿಲ್ಲ. ಎಲ್ಲವನ್ನೂ ಯಲ್ಲಮ್ಮ ದೇವಿ ಬಳಿ ನಿವೇದಿಸಿಕೊಂಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ  | Kannada Prabha

ಸಾರಾಂಶ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 19ರಂದು ನಡೆದಿದ್ದು ಅಹಿತಕರ ಘಟನೆ. ನಾನು ಯಾರ ಮೇಲೂ ಆರೋಪ ಹೊರಿಸಲ್ಲ. ಯಾರ ಮೇಲೂ ನನಗೆ ಸೇಡು ಮತ್ತು ದುರುದ್ದೇಶವಿಲ್ಲ. ಎಲ್ಲವನ್ನೂ ಯಲ್ಲಮ್ಮ ದೇವಿ ಬಳಿ ನಿವೇದಿಸಿಕೊಂಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

  ಸವದತ್ತಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ ೧೯ರಂದು ನಡೆದಿದ್ದು ಅಹಿತಕರ ಘಟನೆ. ನಾನು ಯಾರ ಮೇಲೂ ಆರೋಪ ಹೊರಿಸಲ್ಲ. ಯಾರ ಮೇಲೂ ನನಗೆ ಸೇಡು ಮತ್ತು ದುರುದ್ದೇಶವಿಲ್ಲ. ಎಲ್ಲವನ್ನೂ ಯಲ್ಲಮ್ಮ ದೇವಿ ಬಳಿ ನಿವೇದಿಸಿಕೊಂಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಸವದತ್ತಿಯ ಸುಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಶುಕ್ರವಾರ ಭೇಟಿ ನೀಡಿ, ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದ ನಂತರ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು. ಎಲ್ಲರಿಗೂ ಒಳಿತಾಗುವಂತೆ ಪೂಜಿಸುವ ಜತೆಗೆ, ಹರಕೆ ತೀರಿಸಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು. 

ಲಕ್ಷಾಂತರ ಭಕ್ತರ ಮನೆದೇವತೆ ಯಲ್ಲಮ್ಮ ದೇವಿ. ಈ ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಬೇಕು. ಯಲ್ಲಮ್ಮ ದೇವಸ್ಥಾನ ಒಂದು ಪ್ರಮುಖ ಶಕ್ತಿಪೀಠ. ಇಲ್ಲಿಗೆ ಬರುವ ಭಕ್ತರಲ್ಲಿ ಭಕ್ತಿ–ಭಾವ ಮೂಡುವಂತೆ ಸೌಕರ್ಯ ಕಲ್ಪಿಸಬೇಕು. ಅಲ್ಲದೆ ನಿರಂತರವಾಗಿ ಇಲ್ಲಿ ದಾಸೋಹ ನಡೆಯಬೇಕು ಎಂದರು.ಯಲ್ಲಮ್ಮ ದೇವಸ್ಥಾನದ ಪರವಾಗಿ ಸವದತ್ತಿಯ ಬಿಜೆಪಿ ತಾಲೂಕು ಅಧ್ಯಕ್ಷ ವಿರೂಪಾಕ್ಷಣ್ಣ ಮಾಮನಿಯವರು ಸಿ.ಟಿ.ರವಿ ಅವರನ್ನು ಸತ್ಕರಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ, ರತ್ನಾ ಆನಂದ ಮಾಮನಿ, ಸಂಜಯ ಪಾಟೀಲ, ಸುಭಾಷ ಪಾಟೀಲ, ಎಫ್.ಎಸ್.ಸಿದ್ದನಗೌಡರ, ಕುಮಾರಸ್ವಾಮಿ ತಲ್ಲೂರಮಠ, ನಯನಾ ಭಸ್ಮೆ, ಜಗದೀಶ ಕೌಜಗೇರಿ, ಜಿ.ಎಸ್.ಗಂಗಲ, ಈರಣ್ಣ ಚಂದರಗಿ, ಸಿದ್ದಯ್ಯ ವಡಿಯರ, ಪುಂಡಲೀಕ ಮೇಟಿ, ಭರಮಪ್ಪ ಅಣ್ಣಿಗೇರಿ, ರಾಜು ಲಮಾಣಿ, ಬಾಬು ಕಾಳೆ, ಅರ್ಜುನ ಅಮ್ಮೋಜಿ, ಗೌಡಪ್ಪ ಸವದತ್ತಿ, ಮಲ್ಲೇಶ ಸೂಳೆಭಾವಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''