ಕನ್ನಡಪ್ರಭವಾರ್ತೆ ಮಧುಗಿರಿ
ತಾಲೂಕಿನ ಚಿಕ್ಕಮಾಲೂರು ಗ್ರಾಮದಲ್ಲಿ ಅಂಗನವಾಡಿ ಕೇಂದ್ರ, ವೀರಾಪುರ,ಚಿಕ್ಕಮಾಲೂರು ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ಹಾಗೂ 1.10 ಕೋಟಿ ರು.ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ 5 ಕೊಠಡಿ ಒಂದು ರಂಗಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಬಾಲ್ಯದಲ್ಲೇ ಬಡತನದಿಂದ ಬೆಳದ ಪರಿಣಾಮ ಹಸಿವಿನ ಬೆಲೆ ತಿಳಿದಿತ್ತು. ಆದ್ದರಿಂದ ಅವರು 2013ರಲ್ಲಿ ಸಿಎಂ ಆದ ದಿನವೇ ಅನ್ನಭಾಗ್ಯ ಜಾರಿಗೊಳಿಸಿದರು. ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಯಾರು ಸಹ ಹಸಿವಿನಿಂದ ಬಳಲುತ್ತಿಲ್ಲ. ಇದು ಬಡವರ ಪರ ಮಾಡಿದ ಕೆಲಸವಲ್ಲವೇ.? ಉಪಕಾರ ಸ್ಮರಣೆ ಮರೆಯಬಾರದು ಎಂದರು.ಜಿಲ್ಲಾ ಬ್ಯಾಂಕಿನಿಂದ ಸಾಲ ಪಡೆದ ರೈತಾಪಿ ವರ್ಗ ಸಮಪರ್ಕವಾಗಿ ಅದನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಕುಟುಂಬ ಆರ್ಥಿಕವಾಗಿ ಸುಧಾರಣೆ ಕಾಣಬೇಕು.ಅಲ್ಲದೆ ತಮ್ಮ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸಿ ಮಕ್ಕಳನ್ನು ವಿದ್ಯೆಯಿಂದ ವಂಚಿತರನ್ನಾಗಿ ಮಾಡಬೇಡಿ,ವಿದ್ಯೆ ಸಕಲ ಸಂಪತ್ತನ್ನು ತಂದು ಕೊಡುತ್ತದೆ ಎಂದು ಪೋಷಕರಿಗೆ ಕಿವಿ ಮಾತು ಹೇಳಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ಉಚಿತ ಸಮವಸ್ತ್ರ ವಿತರಿಸಲು ಬಜೆಟ್ಟಿನಲ್ಲಿ ಸಿಎಂಗೆ ಒತ್ತಾಯಿಸುತ್ತೇನೆ ಎಂದರು.
ಎಸಿ ಗೋಟೂರು ಶಿವಪ್ಪ ಮಾತನಾಡಿ, ಶಿಕ್ಷಣದಿಂದ ಮಾತ್ರ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಗ್ರಾಮಾಂತರ ಪ್ರದೇಶದಲ್ಲಿ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಆ ನಿಟ್ಟಿನಲ್ಲಿ ಶಾಸಕ ಕೆ.ಎನ್.ರಾಜಣ್ಣ ಅವರು ಚಿಕ್ಕಮಾಲೂರು ಸರ್ಕಾರಿ ಶಾಲೆಗೆ 1.10 ಕೋಟಿ ಲಕ್ಷ ರು.ಅನುದಾನ ನೀಡುವ ಮೂಲಕ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ರೀನಿವಾಸ್,ಡಿಡಿಪಿಐ ಮಾಧವರೆಡ್ಡಿ, ಬಿಇಒ ಕೆ.ಎನ್. ಹನುಮಂತರಾಯಪ್ಪ, ಎಡಿಒ ಧನಂಜಯ್ಯ, ರಾಜಶೇಖರ್, ಅಶ್ವತ್ಥಯ್ಯ,ಉಪಾಧ್ಯಕ್ಷೆ ಪುಷ್ಪ ,ಪಿಡಿಒ ಮುತ್ತುರಾಜ್ ,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಡಾ.ಎಂ.ಜಿ.ಶ್ರೀನಿವಾಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಧಿನಾರಾಯಣರೆಡ್ಡಿ, ಎನ್.ಗಂಗಣ್ಣ, ಚೌಡಪ್ಪ, ನಂಜುಂಡರಾಜು ಸೇರಿದಂತೆ ಅನೇಕರಿದ್ದರು.