ಪುತ್ತೂರು: ಕರ್ನಾಟಕ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿಯವರ ಪೂರ್ತಿ ತಂಡ ಬಂದರೂ ನಾನು ಸವಾಲು ಸ್ವೀಕರಿಸಲು ಸಿದ್ಧ. ನಾನು ಅವರ ವೇದಿಕೆಗೆ ಹೋಗುವ ಬದಲು. ಜನ ವೇದಿಕೆಯಲ್ಲಿ ಉತ್ತರ ಕೊಡುತ್ತೇನೆ. ಅವರು ಕೂಡಾ ಸಾಮೂಹಿಕ ವೇದಿಕೆಯಲ್ಲೇ ಉತ್ತರ ಕೊಡಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ತಿರುಗೇಟು ನೀಡಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, ನಾರಾಯಣ ಸ್ವಾಮಿ ಅವರ ಹೇಳಿಕೆಗೆ ಉತ್ತರಿಸಿ ಚಲವಾದಿ ನಾರಾಯಣ ಸ್ವಾಮಿ ಅವರ ಪೂರ್ತಿ ತಂಡ ಬಂದರೂ ನಾನು ಚಾಲೆಂಜಿಗೆ ಸಿದ್ಧ. ಅವರು ನನ್ನ ವೇದಿಕೆಗೆ ಬರಬೇಕು. ನಾನು ಇಲ್ಲಿ ಶಾಸಕ. ಅವರ ವೇದಿಕೆಗೆ ನಾನು ಹೋಗುವ ಬದಲು ಅವರು ಒಂದು ಸಾಮೂಹಿಕ ವೇದಿಕೆ ಸೃಷ್ಟಿ ಮಾಡಲಿ. ನಾನು ಉತ್ತರ ಕೊಡುತ್ತೇನೆ. ಅವರು ಕೂಡಿದರೆ ಸಾಮೂಹಿಕ ವೇದಿಕೆಯಲ್ಲಿ ಉತ್ತರ ಕೊಡಲಿ. ಜನರ ವೇದಿಕೆಯಲ್ಲಿ ಉತ್ತರ ಕೊಡುತ್ತೇನೆ ಎಂದು ಹೇಳಿದರು.