ಗದಗ: ರೈಲ್ವೆ ನೌಕರರ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣವೇ ಗಮನಕ್ಕೆ ತನ್ನಿ, ಅವುಗಳನ್ನು ಬಗೆಹರಿಸಲು ಸದಾ ಸ್ಪಂದಿಸುತ್ತೇನೆ ಎಂದು ದಕ್ಷಿಣ ಮಧ್ಯ ರೈಲ್ವೆ ಮಜ್ದೂರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕೆ. ವಿ. ರಾಘವೇಂದ್ರ ಭರವಸೆ ನೀಡಿದರು.
ವಿಭಾಗೀಯ ಕಾರ್ಯದರ್ಶಿ ಆರ್. ಕುಮಾರವೆಲ್ವನ್ ಮಾತನಾಡಿ, ಗದಗ ಶಾಖೆಯ ಕಾರ್ಯದರ್ಶಿ ಮಂಜುನಾಥ ಬಾಗಲಕೋಟ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗದಗ ಶಾಖೆಯ ಕಾರ್ಯದರ್ಶಿ ಮಂಜುನಾಥ ಬಾಗಲಕೋಟ ಮಾತನಾಡಿ, ಯೂನಿಯನ್ ಪದಾಧಿಕಾರಿಗಳು ಹಾಗೂ ಸದಸ್ಯರ ಸೌಹಾರ್ದಯುತ ಸಹಕಾರದಿಂದ ಸಂಘಟನೆಯನ್ನು ಮುನ್ನಡೆಸಲು ಶಕ್ತಿ ಸಿಕ್ಕಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರೈಲ್ವೆ ನೌಕರರನ್ನು ಸನ್ಮಾನಿಸಲಾಯಿತು.
ಯೂನಿಯನ್‌ನ ಝೋನಲ್ ಖಜಾಂಚಿ ಜಾಕೀರ್ ಸನದಿ, ಮುಖಂಡರಾದ ಬಸನಗೌಡ, ದೀಪಕ್ ಗಾಗಡೆ, ಹುಚ್ಚಪ್ಪ ಯಲ್ಲಪ್ಪ, ಕನಕಪ್ಪ ದುಲಪನವರ, ಆನಂದ ಹಕಾರಿ, ಮಹಿಳಾ ವಿಭಾಗದ ಅನುಪಮಾ ಕೆ., ಜಯಶ್ರೀ ಹಾಗೂ ಗದಗ ಶಾಖೆಯ ಅಧಿಕಾರಿಗಳು, 300ಕ್ಕೂ ಹೆಚ್ಚು ಸಿಬ್ಬಂದಿ ಉಪಸ್ಥಿತರಿದ್ದರು.