ಕಲ್ಲೋಳಿಕರಗೆ ಇನ್ನೂ 10 ಸಲ ಟಿಕೆಟ್ ತಪ್ಪಿಸುತ್ತೇನೆ

KannadaprabhaNewsNetwork |  
Published : Apr 28, 2024, 01:24 AM ISTUpdated : Apr 28, 2024, 01:25 AM IST
27-ಕಾಗವಾಡ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕಾಗವಾಡ: ಶಂಭು ಕಲ್ಲೋಳಿಕರಗೆ ಇನ್ನೂ 10 ಸಲ ಟಿಕೆಟ್ ತಪ್ಪಿಸುತ್ತೇನೆ ಎಂದು ಸಚಿವ ಸತೀಶ ಜಾರಕಿಹೊಳಿ ಗುಡುಗಿದರು. ತಾಲೂಕಿನ ಉಗಾರ ಖುರ್ದ ಗ್ರಾಮದ ಶ್ರೀಹರಿ ಮಹಾವಿದ್ಯಾಲಯ ಆವರಣದಲ್ಲಿ ನಿರ್ಮಿಸಿದ ಬೃಹತ್ ಟೆಂಟ್ ಸಿದ್ಧತೆಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಶಂಭು ಕಲ್ಲೋಳಿಕರಗೆ ಇನ್ನೂ 10 ಸಲ ಟಿಕೆಟ್ ತಪ್ಪಿಸುತ್ತೇನೆ ಎಂದು ಸಚಿವ ಸತೀಶ ಜಾರಕಿಹೊಳಿ ಗುಡುಗಿದರು.

ತಾಲೂಕಿನ ಉಗಾರ ಖುರ್ದ ಗ್ರಾಮದ ಶ್ರೀಹರಿ ಮಹಾವಿದ್ಯಾಲಯ ಆವರಣದಲ್ಲಿ ನಿರ್ಮಿಸಿದ ಬೃಹತ್ ಟೆಂಟ್ ಸಿದ್ಧತೆಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಂಭು ಕಲ್ಲೋಳಿಕರಗೆ ಟಿಕೆಟ್ ತಪ್ಪಿಸಿದ್ದು ನೀವೇ ಎನ್ನುವ ಮಾಧ್ಯಮದವರು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದೇನಿದ್ದರೂ ಬಿಜೆಪಿಯೊಂದಿಗೆ ನೇರ ಹಣಾಹಣಿ ಇದ್ದು, ಇನ್ನುಳಿದಂತೆ 18 ಜನ ಪಕ್ಷೇತರ ಅಭ್ಯರ್ಥಿಗಳಲ್ಲಿ ಶಂಭು ಕಲ್ಲೋಳಿಕರ ಕೂಡ ಒಬ್ಬರು. ಕ್ಷೇತ್ರಕ್ಕೆ ಅವರ ಕೊಡುಗೆ ಏನು ಪ್ರಶ್ನಿಸಿದರು.

ನಾವು 30 ವರ್ಷಗಳಿಂದ ದೀನದಲಿತರ ಪರವಾಗಿ ಕಾರ್ಯನಿರ್ವಹಿಸಿದ್ದೇವೆ. ಮತದಾರರು ಕಾಂಗ್ರೆಸ್ ಪಕ್ಷದ ಕಡೆ ಹೆಚ್ಚಿನ ಒಲವು ತೋರುತ್ತಿದೆ. ದೀನದಲಿತರ ಮತ್ತು ಮಹಿಳೆಯರ ಒಲವು ಕಾಂಗ್ರೆಸ್ ಪಕ್ಷದ ಕಡೆಗೆ ಇದ್ದು, ನಮ್ಮ ಅಭ್ಯರ್ಥಿ ಐತಿಹಾಸಿಕ ಮತ ಪಡೆಯುವುದರೊಂದಿಗೆ ಜಯಭೇರಿ ಪಡೆಯುವ ವಿಶ್ವಾಸ ಇದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಾಜಿ ಡಿಸಿಎಂ, ಶಾಸಕ‌ ಲಕ್ಷ್ಮಣ ಸವದಿ, ಶಾಸಕ ರಾಜು ಕಾಗೆ ಸೇರಿದಂತೆ ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಎಲ್ಲ ಮುಂಚೂಣಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಸೇರಲಿದ್ದಾರೆ. ಕಾಗವಾಡ, ಅಥಣಿ, ರಾಯಬಾಗ, ಕುಡಚಿ ಈ 4 ಮತಕ್ಷೇತ್ರದ ಜನರು ನಾಳೆ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಕಾಗವಾಡ, ಅಥಣಿ, ಕುಡಚಿ ಹಾಗೂ ರಾಯಬಾಗ ವಿಧಾನಸಭಾ ಮತಕ್ಷೇತ್ರದಿಂದ ಸುಮಾರು 1 ಲಕ್ಷ ಕಾರ್ಯಕರ್ತರು ಪಾಲ್ಗೊಳ್ಳುವ ನೀರಿಕ್ಷೆ ಇದೆ. ಸಮಾರಂಭದಲ್ಲಿ ಶಾಸಕರಾದ ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ, ಮಹೇಶ ತಮ್ಮಣ್ಣವರ, ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿರುವರು ಎಂದು ಎಂದು ಮಾಹಿತಿ ನೀಡಿದರು.

ಈ ವೇಳೆ ರಾವಸಾಬ್‌ ಐಹೊಳಿ, ದಿಗ್ವಿಜಯ ಪವಾರದೇಸಾಯಿ, ವಿನಾಯಕ ಬಾಗಡಿ, ಚಂದ್ರಕಾಂತ ಇಮ್ಮಡಿ, ರಮೇಶ ಸಿಂದಗಿ, ಉಮೇಶಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, 300 ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

--------

ಕೋಟ್‌...

ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪ್ರಚಾರಾರ್ಥ ಉಗಾರ ಖುರ್ದಗೆ ಏ.28 ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿದ್ದಾರೆ. ಉಗಾರ ಖುರ್ದನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಐತಿಹಾಸಿಕ ಜನ ಸೇರುವ ನಿರೀಕ್ಷೆ ಇದೆ.

- ಸತೀಶ ಜಾರಕಿಹೊಳಿ, ಸಚಿವ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ