ಕನ್ನಡಪ್ರಭ ವಾರ್ತೆ ಬೆಳಗಾವಿ
ಸಹ್ಯಾದ್ರಿ ನಗರದಲ್ಲಿ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಶಿಕ್ಷಣ, ಕೃಷಿ, ಮೂಲಭೂತ ಸೌಲಭ್ಯ, ಸಾಂಸ್ಕೃತಿಕ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಮಾಡುತ್ತಿರುವುದಾಗಿ ತಿಳಿಸಿದರು. ಯಾವುದೇ ಸರ್ಕಾರ ಇರಲಿ, ಕೆಲಸ ಮಾಡಿಸಿಕೊಂಡು ಬರುವ ಶಕ್ತಿಯನ್ನು ನೀವು ನನಗೆ ಕೊಟ್ಟಿದ್ದೀರಿ. ನಿಮ್ಮಿಂದಾಗಿ ನನಗೆ ಗೌರವ, ಕ್ಷೇತ್ರದ ಕೆಲಸವನ್ನು ತಲೆ ಮೇಲೆ ಹೊತ್ತು ಮಾಡುತ್ತೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 151 ದೇವಸ್ಥಾನ ಕಟ್ಟಿಸಿದ್ದೇನೆ. ಕೆಲವರು ಚುನಾವಣೆ ಬಂದಾಗ ಹತ್ತಿರ ಬರುತ್ತಾರೆ. ಅಂತಹ ವ್ಯಕ್ತಿಗಳಿಂದ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಜನರ ವಿಶ್ವಾಸವೇ ನನ್ನ ಶಕ್ತಿ. ಕ್ಷೇತ್ರದ ಅಭಿವೃದ್ಧಿಗೋಸ್ಕರ ಜೊತೆಗೆ ನಿಲ್ಲಿ, ಕ್ಷೇತ್ರ ಶಾಂತಿಯ ತೋಟ, ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುತ್ತೇನೆ ಎಂದರು.ಈ ವೇಳೆ ಕಾಡಾ ಅಧ್ಯಕ್ಷ ಯುವರಾಜ್ ಕದಂ, ನಾಮದೇವ ಹಟ್ಟಿ, ಎಂ.ಎನ್ ಕಾಡಾಪೂರೆ, ಬಾಳು ದೇಸೂರಕರ್, ಶಂಕರ ಶಿಂಧೆ, ವನಿತಾ ಗೊಂದಳಿ, ಪ್ರೇಮಾ ಅಸೂದಿ, ಸುಕುಮ ಬಕವಾಡ, ಸುಬ್ರಹ್ಮಣ್ಯ ಕಾಂಬಳೆ, ಚಂದ್ರಕಾಂತ ಬೋಸಲೆ, ಮುಸ್ತಾಕ ಮುಲ್ಲಾ, ಕೃಷ್ಣ ಹಣಬೂರ, ಸಂಜಯ್ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು. ---=----
ಬಾಕ್ಸ್....ಕಾರ್ ಅಪಘಾತಕ್ಕೆ ಒಂದು ವರ್ಷ: ಭಾವುಕರಾದ ಸಚಿವೆಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವನಾತ್ಮಕ ಮಾತು ವರ್ಷದ ಹಿಂದೆ ನಡೆದ ತಮ್ಮ ಕಾರು ಅಪಘಾತದ ನೆನಪು ಮಾಡಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಇವತ್ತಿಗೆ ನನ್ನ ಕಾರು ಅಪಘಾತವಾಗಿ ಒಂದು ವರ್ಷವಾಯಿತು. ಅವತ್ತು ಏನಾದರೂ ಸ್ವಲ್ಪ ಹೆಚ್ಚೂಕಮ್ಮಿ ಆಗಿದ್ದರೆ ಒಂದು ವರ್ಷದ ಜಯಂತಿಯನ್ನು ಎಲ್ಲರೂ ಮಾಡುತ್ತಿದ್ದರು. ದೇವರ ಹಾಗೂ ನಿಮ್ಮೆಲ್ಲರ ಆಶೀರ್ವಾದಿಂದ ಬದುಕಿ ಬಂದಿದ್ದೇನೆ ಎಂದು ಭಾವುಕತೆ ವ್ಯಕ್ತಪಡಿಸಿದರು.ಇವತ್ತು ಎಲ್ಲಿಯೋ ಓಡಾಡಬೇಡಿ ಎಂದು ಯುವರಾಜ ಅಣ್ಣಾ ಹೇಳಿದರು. ಆದರೆ, ನನ್ನ ದಾರ ಬಹಳ ಗಟ್ಟಿ ಇದೆ. ಕ್ಷೇತ್ರದಲ್ಲಿ, ರಾಜ್ಯದಲ್ಲಿ ಬಹಳ ಕೆಲಸ ಮಾಡೋದಿದೆ, ಸಾಧನೆ ಮಾಡೋದಿದೆ. ಜನರಿಂದ ನಾನು ಜನನಾಯಕಿ ಎನಿಸಿಕೊಳ್ಳಬೇಕೆಂಬ ಹಂಬಲವಿದೆ. ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಜನಪ್ರಿಯ ನಾಯಕರು ಅಂತಾ ಹೆಮ್ಮೆಯಿಂದ ಹೇಳುತ್ತೇವೆ. ಅದೇ ರೀತಿ ಮಹಿಳೆಯರಲ್ಲಿ ನಾನು ಜನಪ್ರಿಯ ನಾಯಕಿ ಎನಿಸಿಕೊಳ್ಳಬೇಕೆಂಬ ಆಸೆ ಇದೆ ಎಂದರು.
ನಾನು ಎಂಎಲ್ಎ ಆದಮೇಲೆ ಯಾವ ಜಾತಿ ಗಲಭೆ, ಜಾತಿ ರಾಜಕಾರಣ, ಪೊಲೀಸರ ಮೇಲೆ ಒತ್ತಡ ಹಾಕಿಲ್ಲ. ಕುವೆಂಪು ಅವರ ಕವಿವಾಣಿಯಂತೆ ನಮ್ಮ ಕ್ಷೇತ್ರ ಶಾಂತಿಯ ತೋಟವಾಗಿದೆ. ಎಲ್ಲರೂ ಇದೇ ರೀತಿ ಅನ್ಯೋನ್ಯವಾಗಿ ಮುನ್ನಡೆಯೋಣ ಎಂದು ಹೇಳಿದರು.