ಮಠದ ಪರಂಪರೆ ರಕ್ಷಣೆಗೆ ಜೀವನ ಮೀಸಲಿಡುವೆ

KannadaprabhaNewsNetwork |  
Published : Sep 16, 2025, 01:00 AM IST
15ಐಎನ್‌ಡಿ3, ಲಚ್ಯಾಣ ಗ್ರಾಮದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಸುಕ್ಷೇತ್ರ ಲಚ್ಯಾಣದಲ್ಲಿ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರ ಐಕ್ಯ ಸ್ಥಳದ ಕಾರ್ಯ ಪ್ರಗತಿಯತ್ತ ಸಾಗುತ್ತಿದ್ದು, ಈಗಾಗಲೇ ₹ 1 ಕೋಟಿ ಅನುದಾನ ನೀಡಿದ್ದೇನೆ. ಇನ್ನೊಂದು ಕೋಟಿ ನೀಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಇಂಡಿ

ಸುಕ್ಷೇತ್ರ ಲಚ್ಯಾಣದಲ್ಲಿ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರ ಐಕ್ಯ ಸ್ಥಳದ ಕಾರ್ಯ ಪ್ರಗತಿಯತ್ತ ಸಾಗುತ್ತಿದ್ದು, ಈಗಾಗಲೇ ₹ 1 ಕೋಟಿ ಅನುದಾನ ನೀಡಿದ್ದೇನೆ. ಇನ್ನೊಂದು ಕೋಟಿ ನೀಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.

ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸಿದ್ಧಲಿಂಗ ಮಹಾರಾಜರ 98ನೇ ಪುಣ್ಯಾರಾಧನೆಯ ಪುರಾಣ ಮಂಗಲ ಕಾಯಕ್ರಮದಲ್ಲಿ ಮಾತನಾಡಿದರು. ನಾವೆಲ್ಲರು ಇಂದು ಶಾಂತಿಯಿಂದ ಬದುಕಲು ಕಾರಣ ಈ ಮಠದ ಪರಂಪರೆ. ಮಠದ ಪರಂಪರೆ ರಕ್ಷಣೆಗೆ ನನ್ನ ಜೀವನವನ್ನೇ ಮೀಸಲಾಗಿಡುವೆ. ಕ್ಷೇತ್ರದಲ್ಲಿ ಬಿಈಡಿ ಶಿಕ್ಷಣ ತರಬೇತಿ ಕೇಂದ್ರ ಸ್ಥಾಪನೆಗೆ ಶ್ರಮಿಸುವುದಾಗಿ ತಿಳಿಸಿದರು.

ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಈ ಭಾಗದಲ್ಲಿ ವಿದ್ಯುತ್, ರಸ್ತೆ, ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಶ್ರಮಿಸಿದ್ದಾರೆ. ಪ್ರವಚನ ಕೇಳಿದ ಭಕ್ತರು ಜೋಳಿಗೆಗೆ ಹಾಕಿದ ಹಣದಲ್ಲಿ ಬಿಎಲ್‌ಡಿಇ ಸಂಸ್ಥೆಯಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಪೂಜ್ಯರ ಜೀವನ ಚರಿತ್ರೆ ಕುರಿತು ಲಚ್ಯಾಣ ಮಠದಲ್ಲಿ ಪುರಾಣ ಕಾಯಕ್ರಮ ಆಯೋಜಿಸಿದ್ದು ಸಂತೋಷ ತಂದಿದೆ ಎಂದರು. ಯರನಾಳದ ಗುರುಸಂಗನಬಸವ ಮಹಾಸ್ವಾಮೀಜಿ ಮಾತನಾಡಿ, ಈ ಹಿಂದೆ ನಾನು ಇಲ್ಲಿ ಪ್ರವಚನ ಹೇಳಲು ಬಂದಾಗ ಭಾರಿ ಪ್ರಮಾಣದ ಮಳೆ ಆಗಿತ್ತು .ಈ ಕ್ಷೇತ್ರದಲ್ಲಿ ಮಾಣಿಕ್ಯ ರೂಪದಲ್ಲಿ ಬಂದು ನಿಂತವರು ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು ಎಂದರು.

ತುಂಗಳದ ಶಿವಶರಣಿ ಅನಸೂಯಾದೇವಿ ಅಮ್ಮ ಮಾತನಾಡಿ, ಪರಮಾತ್ಮ ಯಾವ ರೂಪದಲ್ಲಿ ಬರುತ್ತಾನೆ ಎಂದು ಹೇಳಲು ಆಗದು. ಸಾಕ್ಷಾತ ಪರಮಾತ್ಮನೆ ಸಿದ್ಧಲಿಂಗನ ರೂಪದಲ್ಲಿ ಬಂದಿದ್ದಾನೆ. ಗುರುಮಹಾತ್ಮನೇ ಪರಮಾತ್ಮ ಎಂದರು.ಹುಣಶ್ಯಾಳ ಪಿ.ಬಿ.ಯ ನಿಜಗುಣದೇವರು, ಪ್ರವಚನಕಾರ ಮುದಗಲ್ನ ಮಹಾಂತ ಸ್ವಾಮೀಜಿ ಮಾತನಾಡಿದರು. ಗವಾಯಿ ಕಲ್ಲೂರಿನ ಶಂಕರಯ್ಯ ಗುರುಮಠ, ತಬಲಾ ವಾದಕ ಬಸವರಾಜ ಹೊನ್ನಿಗನೂರ, ವಯೋಲಿನ್ ಕಲಾವಿದ ಗೂಗವಾಡದ ಕೃಷ್ಣಾ ಅಂದಾನಿ ಅವರನ್ನು ಸನ್ಮಾನಿಸಲಾಯಿತು. ಹೂವಿನಹಿಪ್ಪರಗಿಯ ದ್ರಾಕ್ಷಾಯಣಿ ಅಮ್ಮನವರು, ಜಕನೂರಿನ ಸಿದ್ಧಲಿಂಗದೇವರು, ಅಗರಖೇಡದ ಅಭಿನವ ಪ್ರಭುಲಿಂಗ ಸ್ವಾಮೀಜಿ, ಮದರಖಂಡಿ ಬಸವಯ್ಯ ಸ್ವಾಮೀಜಿ, ಆಳೂರಿನ ಶಂಕರಾನಂದ ಸ್ವಾಮೀಜಿ, ಆತ್ಮಾನಂದ ಮಹಾಸ್ವಾಮೀಜಿ ಸಾನಿಧ್ಯವಹಿಸಿದ್ದರು. ನಿವೃತ್ತ ಪ್ರಾಚಾಯ ಎ.ಪಿ.ಕಾಗವಾಡ ಸ್ವಾಗತಿಸಿದರು. ಡಿ.ಎ.ಮುಜಗೊಂಡ ನಿರೂಪಿಸಿ, ವಂದಿಸಿದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ