ಪತ್ರಕರ್ತರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಒತ್ತಾಯಿಸುವೆ

KannadaprabhaNewsNetwork |  
Published : Jul 28, 2026, 03:00 AM IST
ಜಮಖಂಡಿ ತಾಲುಕು ಕಾರ್ಯನಿರತ ಪತ್ರಕರ್ತರ ಸಂಘ ದಿಂದ ಭಾನುವಾರ ಸಂಜೆ ನಡೆದ ಪತ್ರಿಕಾದಿನಾಚರಣೆ ಕಾರ್ಯಕ್ರಮ ಶಾಸಕ ಜಗದೀಶ ಗುಡಗುಂಟಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿಸರ್ಕಾರದಿಂದ ಪತ್ರಕರ್ತರಿಗೆ ವಿಮೆ ಸೌಲಭ್ಯ, ಸರ್ಕಾರಿ ದರದಲ್ಲಿ ನಿವೇಶನ ಹಾಗೂ ಪಿಂಚಣಿ ಸೇರಿ ಇನ್ನಿತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಶಾಸಕ ಜಗದೀಶ ಗುಡಗುಂಟಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಸರ್ಕಾರದಿಂದ ಪತ್ರಕರ್ತರಿಗೆ ವಿಮೆ ಸೌಲಭ್ಯ, ಸರ್ಕಾರಿ ದರದಲ್ಲಿ ನಿವೇಶನ ಹಾಗೂ ಪಿಂಚಣಿ ಸೇರಿ ಇನ್ನಿತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಶಾಸಕ ಜಗದೀಶ ಗುಡಗುಂಟಿ ಭರವಸೆ ನೀಡಿದರು.

ನಗರದ ಪತ್ರಿಕಾಭವನದ ಆವರಣದಲ್ಲಿ ಭಾನುವಾರ ಸಂಜೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಗಲಿರುಳೆನ್ನದೇ ಜೀವದ ಹಂಗು ತೊರೆದು ಸಮಾಜ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯವಾಗಿದೆ. ನಗರದ ಪತ್ರಿಕಾಭವನದ ಆವರಣದ ದುರಸ್ತಿ, ಶಡ್‌ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ದಿ.ಬಾಬು ರೆಡ್ಡಿ ತುಂಗಳ ಪ್ರಶಸ್ತಿಯ ದತ್ತಿದಾನಿ ಡಾ,ವಿಜಯಲಕ್ಷ್ಮೀ ತುಂಗಳ ಮಾತನಾಡಿ, ದಿ.ಬಾಬುರೆಡ್ಡಿ ಅವರು ಕುರುಕ್ಷೇತ್ರ ಎಂಬ ಪತ್ರಿಕೆ ಪ್ರಾರಂಭಿಸಿ, ಹರಿತವಾದ ಲೇಖನಗಳನ್ನು ಪ್ರಕಟಿಸಿ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿದವರು ಅವರ ಸ್ಮರಣಾರ್ಥ ಪ್ರತಿವರ್ಷ ಪ್ರಶಸ್ತಿ ನೀಡುತ್ತಿರುವುದಾಗಿ ಹೇಳಿದರು.

ತಹಸೀಲ್ದಾರ್‌ ಅನೀಲ ಬಡಿಗೇರ ಮಾತನಾಡಿ, ಸರ್ಕಾರಿ ಯೋಜನೆಗಳ ಜಾಗೃತಿ ಮೂಡಿಸಿ ಜನಸಾಮಾನ್ಯರಿಗೆ ತಲುಪಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು.

ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಮಠ ಮಾತನಾಡಿ, ಎಐನ ಯುಗದಲ್ಲಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಪೈಪೋಟಿ ನೀಡುತ್ತಿದ್ದೇವೆ. ಸುದ್ದಿಗಳಿಗೆ ಭಾವನೆಗಳ ಸ್ಪರ್ಶ ನೀಡಿ ಪ್ರಚುರ ಪಡಿಸುವುದು ಪತ್ರಕರ್ತರಿಂದ ಮಾತ್ರ ಸಾಧ್ಯ. ಪ್ರಶ್ನೆ ಮಾಡುವುದು ನಮ್ಮ ಧರ್ಮ, ಸತ್ಯಾನ್ವೇಷಣೆ ಹಾಗೂ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದೇವೆ. ಪತ್ರಕರ್ತರು ಇಲ್ಲದ ದೇಶಗಳು ನಾಶವಾದ ಅನೇಕ ಉದಾಹರಣೆಗಳಿವೆ. ಪತ್ರಿಕಾರಂಗ ಇರದೇ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲಾರದು. ಪತ್ರಿಕೆಗಳನ್ನು ಓದುವರ ಸಂಖ್ಯೆ ಕ್ಷಿಣಿಸುತ್ತಿರುವುದು ಆತಂತಕಾರಿ ಬೆಳವಣಿಗೆಯಾಗಿದೆ ಎಂದರು.

ದಿ.ಬಾಬುರೆಡ್ಡಿ ತುಂಗಳ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಅಪ್ಪು ಪೋತರಾಜ ಅನಿಸಿಕೆ ಹಂಚಿಕೊಂಡರು. ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿದೆ. ಇದು ಎಲ್ಲ ಸಹೋದ್ಯೋಗಿಗಳಿಗೆ ಸಲ್ಲಿಸಿದ ಗೌರವವಾಗಿದೆ ಎಂದರು. ಪತ್ರಕರ್ತರಲ್ಲಿ ಸಾಕಷ್ಟು ಜನ ಬಡವರಿದ್ದಾರೆ ಎಲ್ಲರಿಗೂ ಸರ್ಕಾರದಿಂದ ಸೌಲಭ್ಯಗಳು ದೊರಕುವಂತಾಗಲು, ಶಾಸಕರು, ಅಧಿಕಾರಿಗಳು ಮುಂದಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಪತ್ರಕರ್ತರ ಸೇವೆ ಶ್ಲಾಘನೀಯವಾಗಿದೆ. ಅವರ ಎಲ್ಲ ಕಷ್ಟಗಳು ಸಮಸ್ಯೆಗಳಿಗೆ ಸಂಧಿಸುವುದಾಗಿ ತಿಳಿಸಿದರು.

ಸನ್ಮಾನ:

ಶೈಕ್ಷಣಿಕವಾಗಿ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಾದ ವೈಷ್ಣವಿ ಗೋಪಾಲ ಪಾಟೀಲ, ಅನುಶ್ರೀ ಅಪ್ಪು ಪೋತರಾಜ, ಚಿರಾಗ ಲಕ್ಷ್ಮೀಕಾಂತ ದುದಗಿ, ಸ್ನೇಹಾ ಪ್ರವೀಣ ಕುಲಕರ್ಣಿ, ಸಾಕ್ಷಿ ಪ್ರವೀಣ ಕುಲಕರ್ಣಿ, ಸೇರಿ ಉದಯೋನ್ಮುಖ ಜಾದೂಗಾರ ಅಯೂಬ ಧನ್ನೂರ, ದಾನಿಗಳಾದ ಆನಂದ ಗೊಂದಿ, ಗುರುನಾಥ ಸುತಾರ, ಪತ್ರಿಕಾ ವಿತರಕರಾದ ಬಸವರಾಜ ಕೊವಳ್ಳಿ, ರಾಹುಲ್‌ ಕ್ಷೀರ ಸಾಗರ, ಪೌರಕಾರ್ಮಿಕ ಶಿವಾಜಿ, ಸಹಾಯಕ ಸದಾಶಿವ ತಳವಾರ, ನಿರೂಪಕ ಶ್ರೀನಿವಾಸ ಕಟ್ಟಿಮನಿ, ಛಾಯಾಗ್ರಾಹಕ ತೌವನಪ್ಪ ಕೌಟಕೊಪ್ಪ, ರಾಹುಲ್‌ ಇಂಗಳೆ ಅವರನ್ನು ಸನ್ಮಾನಿಸಲಾಯಿತು.

ಪ್ರಾರಂಭದಲ್ಲಿ ಅಯೂಬ್‌ ಧನ್ನೂರ ಅವರಿಂದ ಜಾದೂ ಪ್ರದರ್ಶನ, ಪತ್ರಕರ್ತ ಮಲ್ಲುಮಠ ಅವರಿಂದ ಚಲನಚಿತ್ರಗೀತೆಗಳ ಗಾಯನ ಕಾರ್ಯಕ್ರಮಗಳು ನಡೆದವು. ವಿಜಯಲಕ್ಷ್ಮೀ ದುದಗಿ ಪ್ರಾರ್ಥನಾಗೀತೆ ಹಾಡಿದರು. ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ ದುದಗಿ ಅಧ್ಯಕ್ಷತೆ ವಹಿಸಿದ್ದರು. ಎಂ.ಎನ್‌.ನದಾಫ್‌ ಸ್ವಾಗತಿಸಿದರು. ಆರ್‌.ಎಸ್‌.ಹೊನಗೌಡ ಭಿನ್ನವತ್ತಳಿಕೆ ಓದಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ಸಚಿನ ಮಾಚಕನೂರ, ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಸಂತೋಷ ಬಾಡಗಿ, ಕಾರ್ಯಕಾರಿ ಸಮಿತಿ ಸದಸ್ಯ ಗೋಪಾಲ ಪಾಟೀಲ, ಎಂ.ಎನ್‌.ನದಾಫ್‌, ಕೇಶವ ಕುಲಕರ್ಣಿ ಇದ್ದರು.ಪ್ರಜಾಪ್ರಭುತ್ವದ 4ನೇ ಅಂಗವಾಗಿರುವ ಪತ್ರಿಕಾರಂಗಕ್ಕೆ ತನ್ನದೇ ಆದ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಇದೆ. ಸಮಾಜದ ಓರೆ-ಕೊರೆಗಳನ್ನು ತಿದ್ದಿ ಜಾಗೃತಿ ಮೂಡಿಸುವ ಕಾರ್ಯನಿರ್ವಹಿಸುತ್ತ, ಎಲ್ಲ ಸಭೆ-ಸಮಾರಂಭಗಳ ಭಾಗವಾಗಿ, ಸಮಾಜದ ಕಷ್ಟ-ಸುಖಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸುತ್ತಾರೆ. ತಾಲೂಕು ಮಟ್ಟದ ಪತ್ರಕರ್ತರ ಸೇವೆಗೆ ತಕ್ಕ ಸಂಭಾವನೆ ಇರುವುದಿಲ್ಲ ಎಂಬುದು ಅಷ್ಟೇ ಸತ್ಯ.

-ಜಗದೀಶ ಗುಡಗುಂಟಿ, ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾ ಬಲೆಗೆ ಬಿದ್ದ ಉಪಖಜಾನೆ ಅಧಿಕಾರಿಗಳು
ಸ್ಫೋಟಕ ಬಳಕೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ