ವಿರೋದಿಗಳಿಗೆ ಅಬಿವೃದ್ಧಿ ಮೂಲಕವೇ ಉತ್ತರ ನೀಡುವೆ: ಶಾಸಕ ಬೇಳೂರು

KannadaprabhaNewsNetwork |  
Published : Nov 23, 2026, 01:30 AM IST
ಪೋಟೋ: 22ಎಚ್‌ಒಎಸ್01ಹೊಸನಗರ ತಾಲೂಕಿನ ಕಾಳಿಕಾಪುರ ಗ್ರಾಮದಲ್ಲಿ 1.50 ಕೋಟಿ. ರೂ. ವೆಚ್ಚದಲ್ಲಿ ನಡೆಯಲಿರುವ ಪಟಗುಪ್ಪ ರಸ್ತೆ ಮರುಡಾಂಬರೀಕರಣ ಕಾಮಗಾರಿಗೆ ಶಾಸಕ ಬೇಳೂರು ಗೋಪಾಲಕೃಷ್ಣರವರು ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಪ್ರತಿದಿನ ಪತ್ರಿಕಾಗೋಷ್ಠಿ ಕರೆದು ನನ್ನ ವಿರುದ್ಧ ಮಾತನಾಡುವುದೇ ಒಂದು ಕೆಲಸವಾಗಿದೆ, ಮೂರುವರೆ ವರ್ಷದಿಂದ ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ಇವರಿಗೆ ಇನ್ನೂ ಒಂದು ವರ್ಷದಲ್ಲಿ ಕ್ಷೇತ್ರ ಅಭಿವೃದ್ಧಿಪಡಿಸಿ ಉತ್ತರ ನೀಡುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸನಗರ

ಪ್ರತಿದಿನ ಪತ್ರಿಕಾಗೋಷ್ಠಿ ಕರೆದು ನನ್ನ ವಿರುದ್ಧ ಮಾತನಾಡುವುದೇ ಒಂದು ಕೆಲಸವಾಗಿದೆ, ಮೂರುವರೆ ವರ್ಷದಿಂದ ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ಇವರಿಗೆ ಇನ್ನೂ ಒಂದು ವರ್ಷದಲ್ಲಿ ಕ್ಷೇತ್ರ ಅಭಿವೃದ್ಧಿಪಡಿಸಿ ಉತ್ತರ ನೀಡುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.ಹೊಸನಗರ ತಾಲೂಕಿನ ಕಾಳಿಕಾಪುರ ಗ್ರಾಮದಲ್ಲಿ 1.50 ಕೋಟಿ ರು. ವೆಚ್ಚದಲ್ಲಿ ನಡೆಯಲಿರುವ ಪಟಗುಪ್ಪ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಿಎಂಜೆಎಸ್‌ಐ ಹಾಗೂ ಪ್ರಗತಿ ಪಥ ಯೋಜನೆಗಳನ್ನು ಜಾರಿ ಮಾಡಿದೆ. ಇದು ಗ್ರಾಮೀಣ ಪ್ರದೇಶದ ಜನತೆಗೆ ವರದಾನವಾಗಲಿದೆ, ಅನುದಾನಗಳು ಜನಸಾಮಾನ್ಯರಿಗೆ ತಲುಪಬೇಕು ಎನ್ನುವುದು ಸರ್ಕಾರದ ಪ್ರತಿ ಯೋಜನೆಯ ಉದ್ದೇಶವಾಗಿದೆ ಎಂದರು.

ಪ್ರತಿ ಗ್ರಾಪಂ ವ್ಯಾಪ್ತಿಗೂ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ 147 ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. 232 ಕಾಲು ಸಂಕಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಕಿರು ಸೇತುವೆಗಳ ನಿರ್ಮಾಣ ಮಾಡಲಾಗಿದೆ. ಸಾಗರ ನಗರಸಭೆಗೆ 50 ಕೋಟಿ ರು. ಹೊಸನಗರ ಪಟ್ಟಣ ಪಂಚಾಯಿತಿಗೆ 20 ಕೋಟಿ ರು. ಹಾಗೂ ಕಾರ್ಗಲ್ ಪಟ್ಟಣ ಪಂಚಾಯಿತಿಗೆ 20 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದರು.

ಹೊಸನಗರದ ನೂತನ ಬಸ್ ಸ್ಟ್ಯಾಂಡ್ ಶಂಕುಸ್ಥಾಪನೆ ಹಾಗೂ ಬಸ್ಟ್ ಸ್ಟ್ಯಾಂಡ್ ನನ್ನ ಅವಧಿಯಲ್ಲಿಯೇ ಆಗಿದ್ದು, ಕೆಲವರು ನಾನು ಮಾಡಿದ್ದು, ನಾನು ಮಾಡಿದ್ದು ಎಂದು ಪ್ರಚಾರ ಪಡೆಯುತ್ತಿದ್ದಾರೆ, ಶಂಕುಸ್ಥಾಪನೆ ಮಾಡಿರುವ ಕಲ್ಲು ಮತ್ತು ಉದ್ಘಾಟನೆಯ ಚಿತ್ರ ನೋಡಿದರೆ ಯಾರು ಮಾಡಿದ್ದು ಎಂದು ಅರ್ಥವಾಗುತ್ತದೆ ಎಂದರು.

ಗ್ಯಾರೆಂಟಿ ಯೋಜನೆಗಳ ಮೂಲಕ ಬಡವರಿಗೆ ನೇರವಾಗಿ ಹಣ ತಲುಪುತ್ತಿದೆ. ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿದೆ. ಗೃಹಲಕ್ಷ್ಮಿ ಹಣ ಎಷ್ಟೋ ಬಡ ಹಾಗೂ ಅಶಕ್ತ ಕುಟುಂಬಗಳ ಪಾಲಿಗೆ ಬೆಳಕಾಗಿದೆ. ವಿರೋಧಿಗಳು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದರು.

ಹಸಿರುಮಕ್ಕಿ ಸೇತುವೆ ಕಾಮಗಾರಿ ಕಳೆದ ಬಿಜೆಪಿ ಅವಧಿಯಲ್ಲಿ ಕುಂಠಿತಗೊಂಡಿತ್ತು. ಆದರೆ ಈಗ ವೇಗ ದೊರೆತಿದ್ದು, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಐತಿಹಾಸಿಕ ಸೇತುವೆ ನಿರ್ಮಾಣದ ಶ್ರೇಯಸ್ಸು ಮಾಜಿ ಸಚಿವ ಹಾಗೂ ಕಾಗೋಡು ತಿಮ್ಮಪ್ಪ ಹಾಗೂ ನನಗೆ ಸೇರಬೇಕು ಎಂದರು.

ಯೋಜನೆ ಕುಂಠಿತಗೊಳ್ಳಲು ಕೇಂದ್ರ ಸರ್ಕಾರವೇ ಕಾರಣ. ಕೇಂದ್ರದ ಪಾಲಿನ ಶೇ.50ರಷ್ಟು ಅನುದಾನ ಬಿಡುಗಡೆ ಸಕಾಲದಲ್ಲಿ ಆಗದಿರುವುದೇ ಯೋಜನೆ ಪ್ರಗತಿ ಸಾಧಿಸಲು ಆಗುತ್ತಿಲ್ಲ. ಹೊಸನಗರ ತಾಲೂಕಿನಲ್ಲಿ ಬ್ಯಾಂಕ್‌ಗಳ ನಿರ್ಮಾಣ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂದು ಆಪಾದಿಸಿದರು.

ಈ ವೇಳೆ ತಹಸೀಲ್ದಾ‌ರ್ ಭರತರಾಜ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಬಿ.ಚಿದಂಬರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿಗೌಡ, ಏರಿಗೆ ಉಮೇಶ್, ಡಿ.ಆರ್.ವಿನಯ್ ಕುಮಾರ್ ದುಮ್ಮ, ರಾಮಪ್ಪ, ಲಕ್ಷ್ಮಣ, ಜ್ಯೋತಿ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ಬೋರ್‌ವೆಲ್‌ ನೀರು ಬಿಕರಿ: ಚಿಕ್ಕಣ್ಣ
ಹೆಚ್ಚುವರಿ ಹಣ ಪಾವತಿಗೆ ಸೆಸ್ಕಾಂ ನೋಟಿಸ್‌