ವಿಶಿಷ್ಟ ಅನುಭವ ಒದಗಿಸುವ ಕೆಎ 16 ರೂಫ್ ಟಾಪ್ ರೆಸ್ಟೋರೆಂಟ್ ಆರಂಭಿಸಿದ ಐಬಿಸ್ ಸ್ಟೈಲ್ಸ್ ಮೈಸೂರು

KannadaprabhaNewsNetwork | Published : Apr 5, 2025 12:46 AM

ಸಾರಾಂಶ

ಅಕಾರ್ ಗ್ರೂಪ್‌ ನ ಭಾಗವಾಗಿರುವ ಐಬಿಸ್ ಸ್ಟೈಲ್ಸ್ ಮೈಸೂರು ಹೋಟೆಲ್ ಇದೀಗ ಕೆಎ 16 ಎಂಬ ರೂಫ್ ಟಾಪ್ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದೆ. ಇದು 40 ಆಸನಗಳುಳ್ಳ ಆಕರ್ಷಕ ರೂಫ್‌ ಟಾಪ್ ರೆಸ್ಟೋರೆಂಟ್ ಆಗಿದ್ದು, ಆಧುನಿಕ ಸೌಂದರ್ಯ ಮತ್ತು ಕರ್ನಾಟಕದ ಶ್ರೀಮಂತ ಆಹಾರ ಪದ್ಧತಿಯನ್ನು ಹೊಂದಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಕಾರ್ ಗ್ರೂಪ್‌ ನ ಭಾಗವಾಗಿರುವ ಐಬಿಸ್ ಸ್ಟೈಲ್ಸ್ ಮೈಸೂರು ಹೋಟೆಲ್ ಇದೀಗ ಕೆಎ 16 ಎಂಬ ರೂಫ್ ಟಾಪ್ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದೆ.

ಇದು 40 ಆಸನಗಳುಳ್ಳ ಆಕರ್ಷಕ ರೂಫ್‌ ಟಾಪ್ ರೆಸ್ಟೋರೆಂಟ್ ಆಗಿದ್ದು, ಆಧುನಿಕ ಸೌಂದರ್ಯ ಮತ್ತು ಕರ್ನಾಟಕದ ಶ್ರೀಮಂತ ಆಹಾರ ಪದ್ಧತಿಯನ್ನು ಹೊಂದಿದೆ. ಸೊಗಸಾದ ದೃಶ್ಯಾವಳಿ, ತಂಪಾದ ಓಪನ್ ಏರ್ ವಾತಾವರಣ ಮತ್ತು ನವೀನ ಮೆನು ಹೊಂದಿರುವ ಕೆಎ 16 ನಗರದಲ್ಲಿ ರೂಫ್‌ ಟಾಪ್ ಡೈನಿಂಗ್ ವಿಭಾಗದಲ್ಲಿ ಸಂಚಲನ ಉಂಟು ಮಾಡಲಿದೆ.

ಐಬಿಸ್ ಸ್ಟೈಲ್ಸ್ ಮೈಸೂರು ಹೋಟೆಲ್ ನ ಮೇಲ್ಭಾಗದಲ್ಲಿ ಇರುವ ಕೆಎ 16 ರೆಸ್ಟೋರೆಂಟ್ ಆರಾಮದಾಯಕ ಆಸನ ವ್ಯವಸ್ಥೆ ಹೊಂದಿದ್ದು, ಆಕರ್ಷಕವಾದ ಪ್ಯಾಟಿಯೋ ವಾತಾವರಣವನ್ನು ಹೊಂದಿದೆ. ಸೂರ್ಯಾಸ್ತದ ಸಮಯದಲ್ಲಿ ಆಪ್ತರೊಂದಿಗಿನ ಡಿನ್ನರ್ ಇರಲಿ, ಒಳಾಂಗಣದಲ್ಲಿ ಭೋಜನ ಇರಲಿ ಅಥವಾ ಸ್ನೇಹ ಬಳಗದ ಜೊತೆಗಿನ ಭೇಟಿಯೇ ಆಗಿರಲಿ ಎಲ್ಲಕ್ಕೂ ಈ ಸೂಕ್ತವಾಗುವಂತೆ ಮತ್ತು ಉತ್ತಮ ಅನುಭವವನ್ನು ಒದಗಿಸುವಂತೆ ಈ ಸ್ಥಳವನ್ನು ವಿನ್ಯಾಸಗೊಂಡಿದೆ.

ಗ್ರಾಹಕರು ಇಲ್ಲಿ ತಂಪಾದ ಓಪನ್ ಏರ್ ವಾತಾವರಣದಲ್ಲಿ ಕರ್ನಾಟಕದ ವೈವಿಧ್ಯಮಯ ರುಚಿಗಳನ್ನು ಸವಿಯಬಹುದು ಮತ್ತು ಪ್ರತೀ ಕ್ಷಣವನ್ನು ಸ್ಮರಣೀಯಗೊಳಿಸಬಹುದು.

ಕೆಎ 16ರ ಮೆನುವಿನಲ್ಲಿ ಕರ್ನಾಟಕದ ಪಾರಂಪರಿಕ ರುಚಿಕರ ಆಹಾರ ಖಾದ್ಯ ಮತ್ತು ಕಂಟೆಂಪರರಿ ಆಹಾರ ಖಾದ್ಯಗಳೂ ದೊರೆಯಲಿದೆ. ಕೆಎ-16 ನಲ್ಲಿ ಘೀ ರೋಸ್ಟ್ ಚಿಕನ್, ತುಪ್ಪ ಮೀನ್ ಮಸಾಲ ಅನ್ನ, ಪೊಡಿ ಮಸಾಲ ಟೋಸ್ಟಿ, ಕಡಾಯ್ ವೆಜ್ ಔ ಗ್ರಾಟಿನ್, ಮೈಸೂರು ಬೋಂಡ ಸೂಪ್ ಮತ್ತು ಇತ್ಯಾದಿ ಖಾದ್ಯಗಳನ್ನು ಸವಿಯಬಹುದಾಗಿದೆ.

ಕೆಎ 16 ರೆಸ್ಟೋರೆಂಟ್ ನಲ್ಲಿ ವೈವಿಧ್ಯಮಯವಾದ ಪಾನೀಯ ಆಯ್ಕೆಗಳೂ ಲಭ್ಯವಿದೆ. ಬ್ಲ್ಯಾಕ್-ಹೆಡೆಡ್ ಐಬಿಸ್, ಇಂಡಿಯನ್ ರೋಲರ್ ಮತ್ತು ಸ್ಟಾರ್ಕ್-ಬಿಲ್ಡ್ ಕಿಂಗ್‌ ಫಿಶರ್‌ ನಂತಹ ವಿಶಿಷ್ಟ ಕಾಕ್‌ ಟೇಲ್‌ ಗಳನ್ನು ಸವಿಯಬಹುದಾಗಿದೆ. ಬೃಂದಾವನ ಬ್ಲಿಸ್, ಸ್ಯಾಂಡಲ್‌ ವುಡ್ ಸ್ಪ್ರಿಟ್ಜರ್ ಮತ್ತು ಲಲಿತ್ ಮಹಲ್ ಫಿಜ್‌ ನಂತಹ ಆಹ್ಲಾದಕರ ಮಾಕ್‌ ಟೇಲ್‌ ಗಳು ಲಭ್ಯವಿವೆ. ಮಾರ್ಗರೀಟಾ, ನೆಗ್ರೋನಿ ಮತ್ತು ಲಾಂಗ್ ಐಲ್ಯಾಂಡ್ ಐಸ್ಡ್ ಟೀಯಂತಹ ಕ್ಲಾಸಿಕ್‌ ಪಾನೀಯಗಳೂ ಮೆನುವಿನಲ್ಲಿ ಇವೆ.

ಈ ಕುರಿತು ಐಬಿಸ್ ಸ್ಟೈಲ್ಸ್ ಮೈಸೂರಿನ ಹೋಟೆಲ್ ವ್ಯವಸ್ಥಾಪಕ ಗಣೇಶ್‌ ರಾಮ್ ಅಯ್ಯರ್ ಮಾತನಾಡಿ, ಕೆಎ 16 ರೆಸ್ಟೋರೆಂಟ್ ಕರ್ನಾಟಕದ ಶ್ರೀಮಂತ ಆಹಾರ ಪರಂಪರೆಯನ್ನು ಆಧುನಿಕ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಸ್ಥಳೀಯ ಫ್ಲೇವರ್ ಮತ್ತು ಕಂಟೆಂಪರರಿ ಖಾದ್ಯಗಳ ರುಚಿಯನ್ನು ಒದಗಿಸಲಾಗುತ್ತದೆ. ಆಕರ್ಷಕ ವಾತಾವರಣ, ಸೊಗಸಾದ ದೃಶ್ಯಾವಳಿ ಮತ್ತು ವಿಶೇಷವಾಗಿ ರೂಪಿಸಲಾದ ಮೆನುವಿನ ಮೂಲಕ ಕೆಎ ಮೈಸೂರಿನ ರೂಫ್ ಟಾಪ್ ಡೈನಿಂಗ್ ವಿಭಾಗದಲ್ಲಿ ಸಂಚಲನ ಮೂಡಿಸಲಿದೆ ಎಂದು ತಿಳಿಸಿದರು.

ಕೆಎ 16 ಕೇವಲ ರೆಸ್ಟೋರೆಂಟ್ ಮಾತ್ರವಲ್ಲ, ಇದು ಕರ್ನಾಟಕದ ಶ್ರೀಮಂತ ಆಹಾರ ಪದ್ಧತಿಯ ಸಂಭ್ರಮಾಚರಣೆಯಾಗಿದೆ. ಕರ್ನಾಟಕದ ಆಹಾರ ಖಾದ್ಯಗಳ ಅಭಿಮಾನಿಗಳಾಗಿರಲಿ ಅಥವಾ ಹೊಸ ರುಚಿಗಳನ್ನು ಬಯಸುವ ಉತ್ಸುಕ ಪ್ರಯಾಣಿಕರಾಗಿರಲಿ ಎಲ್ಲರಿಗೂ ಕೆಎ 16 ಸ್ಮರಣೀಯ ರೂಫ್‌ ಟಾಪ್ ಡೈನಿಂಗ್ ಅನುಭವವನ್ನು ಒದಗಿಸುತ್ತದೆ.

ಹೆಚ್ಚಿನ ವಿವರಗಳು ಅಥವಾ ಮಾಹಿತಿಗಾಗಿ, ಮೊ. 9606959149 ಸಂಪರ್ಕಿಸಬಹುದು.

Share this article