ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ಸಂಘದಿಂದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಮೈಸೂರು ಚಲೋ ಅಥವಾ ಅರಮನೆ ಚಲೋ ಹಾಗೂ ಟಿ.ಮರಿಯಪ್ಪ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ರಾಜಕಾರಣಿಗಳು ಸ್ವಾರ್ಥ ಮನೋಭಾವದವರು, ಕುಟುಂಬದ ಹಿತಕ್ಕಾಗಿ ರಾಜಕಾರಣ ಮಾಡುವವರು. ಮೊದಲು ಎಂಎಎಲ್‌ಎ ಆಗಿ ನಂತರ ಮಂತ್ರಿ ಖಾತೆಗೆ ಜಗಳವಾಡುತ್ತಾರೆ. ಮಂತ್ರಿ ಖಾತೆಯಿಂದ ಬರುವ ಆದಾಯವನ್ನು ಗುರಿಯಾಗಿಸಿಕೊಳ್ಳುವರೇ ವಿನಃ ಸಮಾಜ ಮತ್ತು ಜನರ ಹಿತವನ್ನು ಮರೆತೇಬಿಡುತ್ತಾರೆ ಎಂದು ವಿಷಾದಿಸಿದರು.ಟಿ.ಮರಿಯಪ್ಪ, ಕೆ.ವಿ.ಶಂಕರಗೌಡ, ಎಚ್.ಕೆ.ವೀರಣ್ಣಗೌಡ, ಸಾಹುಕಾರ್ ಚನ್ನಯ್ಯ ಸೇರಿದಂತೆ ಹಲವಾರು ರಾಜಕಾರಣಿಗಳು ಜನಪರವಾದ ಕೆಲಸಕ್ಕೆ ರಾಜಕಾರಣವನ್ನು ಮೀಸಲಿಟ್ಟಿದ್ದರು. ಎಂದಿಗೂ ಕುಟುಂಬದವರ ಬೆಳವಣಿಗೆಗೆ ಅಧಿಕಾರ ನಡೆಸಲಿಲ್ಲ, ರಾಜಕೀಯಕ್ಕೆ ಕರೆತರಲೂ ಇಲ್ಲ. ಆದರೆ, ಈಗಿನ ರಾಜಕಾರಣಿಗಳು ತಮ್ಮ ಹೆಂಡತಿ, ಮಗ, ಮಗಳು, ಮೊಮ್ಮಗ, ಅಳಿಯ ಎಲ್ಲರನ್ನೂ ರಾಜಕೀಯಕ್ಕೆ ಕರೆತಂದು ರಾಜಕಾರಣವನ್ನು ಕಲುಷಿತಗೊಳಿಸಿದ್ದಾರೆ. ಸೇವಾ ಮನೋಭಾವ ಎನ್ನುವುದು ರಾಜಕಾರಣದಲ್ಲಿ ಮರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು..
ಸಮಾಜದ ಹಿತವನ್ನೇ ಗುರಿಯಾಗಿಸಿಕೊಂಡಿದ್ದ ಟಿ.ಮರಿಯಪ್ಪನವರು ಬೆಳಗ್ಗೆಯಿಂದ ಸಂಜೆಯವರೆಗೆ ಸರ್ಕಾರದ ಕೆಲಸ ಮಾಡಿ ಸಂಜೆ ೫ ಗಂಟೆಯ ನಂತರ ಜನರನ್ನು ಭೇಟಿಯಾಗಿ ಅವರ ಅವಶ್ಯಕತೆಗಳನ್ನು ಪೂರೈಸುವ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಡೆ ಕಾರ್ಯೋನ್ಮುಖರಾಗುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಯಾವ ರಾಜಕಾರಣಿಯಲ್ಲಿ ಇಂತಹದೊಂದು ಕಾರ್ಯದಕ್ಷತೆ, ಕರ್ತವ್ಯಬದ್ಧತೆಯನ್ನು ಕಾಣಲು ಸಾಧ್ಯ. ಹಿಂದೆಲ್ಲಾ ತತ್ವ-ಸಿದ್ಧಾಂತದ ಮೇಲೆ ರಾಜಕಾರಣ ನಡೆಯುತ್ತಿತ್ತು. ಈಗ ಸಮಾಜಕ್ಕಾಗಿ ರಾಜಕಾರಣ ನಡೆಸುವಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ಟಿ.ಮರಿಯಪ್ಪ ರವರ ಸುಪುತ್ರ ಟಿ.ಎಂ.ರಾಜಕುಮಾರ್, ತಗ್ಗಹಳ್ಳಿ ವೆಂಕಟೇಶ್, ಹುಲ್ಕೆರೆ ಮಹದೇವ, ಕುರುಬರ ಸಂಘದ ದೊಡ್ಡಯ್ಯ ಇತರರಿದ್ದರು.