ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

KannadaprabhaNewsNetwork |  
Published : Jul 19, 2024, 01:03 AM IST
ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ : ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ. | Kannada Prabha

ಸಾರಾಂಶ

ಪ್ರತಿಭೆ ಎನ್ನುವುದು ಯಾರ ಸ್ವತ್ತಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ರಬಕವಿಯ ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪ್ರತಿಭೆ ಎನ್ನುವುದು ಯಾರ ಸ್ವತ್ತಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ರಬಕವಿಯ ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ ಹೇಳಿದರು.

ಅವರು ಬನಹಟ್ಟಿಯ ಜಾಕವೆಲ್ ಹತ್ತಿರ ಶ್ರೀಭ್ರಮರಾಂಭಾ ಮತ್ತು ಮಲ್ಲಿಕಾರ್ಜುನ ದಾಸೋಹ ಸೇವಾ ಸಮಿತಿ ಹಾಗೂ ಶ್ರೀ ಕಾಡಸಿದ್ದೇಶ್ವರ ಅನ್ನ ಪ್ರಸಾದ ಸಮಿತಿ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಓದುವ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿರುತ್ತಾರೆ ಎನ್ನುವುದಕ್ಕೆ ನಾಗೇಶ ಸುಂಕದ ಉದಾಹರಣೆಯಾಗಿದ್ದಾರೆ. ಅಕ್ಷರ ಜಗತ್ತು ಇಂದು ಸಾಂಸ್ಕೃತಿಕ ನೆಲೆಗಳ ಮೇಲೆ ನಿಂತಿದೆ. ಸಾಧಕರು ಬದುಕಿನ ಉತ್ತಮ ನೆಲೆಗಟ್ಟನ್ನು ಕಂಡು ಕೊಂಡರೆ ಉತ್ತಮ ಸಾಧನೆ ಮಾಡಬಹುದು ಎಂದರು.

ಪಂಚಮಹಾ ಭೂತಗಳನ್ನು ಗೌರವದಿಂದ ಕಾಣುವ ಸಂಸ್ಕೃತಿ ಭಾರತೀಯ ಸಂಸ್ಕೃತಿಯಾಗಿದೆ. ಕಾವ್ಯ ಕೃತಿ ದೇವರ ಕೊಡುಗೆ. ಜ್ಞಾನಕ್ಕೆ ನಾವು ತಲೆಬಾಗಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾವ್ಯ ಕೌಸ್ತುಭ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ, ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ನಾಗೇಶ ಸುಕಂದ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಶ್ರೀಶೈಲ ದಬಾಡಿ, ಸಿದ್ದನಗೌಡ ಪಾಟೀಲ, ಮಹಾರುದ್ರಪ್ಪ ಬರಗಲ, ಗುರು ಕಾಡದೇವರ, ಅರುಣ ಕುಲಕರ್ಣಿ, ರವಿ ಪುಂಡೆ, ಗುರು ಗಾಣಿಗೇರ, ಮುತ್ತಪ್ಪ ಗುಂಡಿ, ಭೀಮಸಿ ಮನವಡ್ಡರ, ಬಸಪ್ಪ ಕೊಣ್ಣೂರ, ಶಿವಕುಮಾರ ಜುಂಜಪ್ಪನವರ, ಮಲ್ಲಪ್ಪ ಹನಗಂಡಿ, ಮಹಾನಿಂಗಪ್ಪ ಮಂಡಿ, ಅಶೋಕ ಚಿಂಡಕ, ಈರಪ್ಪ ಬರಗಲ, ಈರಯ್ಯ ಕತ್ತಿ, ಲಕ್ಷ್ಮಣ ಬಾಳಿಗಿಡದ, ಗಣಪತಿ ಮಡ್ಡಿಮನಿ, ಮಹಾದೇವ ಬಾಗಲಕೋಟ, ಬ್ರಿಜ್ ಮೋಹನ ಡಾಗಾ, ಲಲಿತ ಕಾಬರಾ, ಮೋಹನ ಪತ್ತಾರ, ಗುರು ಹೂಗಾರ, ಬಸವರಾಜ ಹೂಗಾರ ಸೇರಿದಂತೆ ಅನೇಕರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌