ಕೆಂಭಾವಿ: ಹೆಣ್ಣೊಂದು ಕಲಿತರೆ ಇಡೀ ಸಮಾಜ ಬದಲಾವಣೆ ಮಾಡುವ ಶಕ್ತಿ ಅವರಲ್ಲಿ ಬರುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಸೇರಿದಂತೆ ಬಹುತೇಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಮಹಿಳಾ ಸಂಘಟನೆಗಳಿಗೆ ಇದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಿರೀಶ್ ಕುಲಕರ್ಣಿ ಹೇಳಿದರು.
ಪಿಎಸ್‌ಐ ಹಣಮಂತರಾಯ ಮ್ಯಾಗೇರಿ ಮಾತನಾಡಿ, ಸಾಲವನ್ನು ತೆಗೆದುಕೊಳ್ಳುವವರು ಉತ್ತಮ ಉದ್ದೇಶಕ್ಕಾಗಿ ಅದನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಬೇಕು. ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು. ಬ್ಯಾಂಕ್ ಓಟಿಪಿಯನ್ನು ಅನ್ಯ ವ್ಯಕ್ತಿಗಳಿಗೆ ಹೇಳಬಾರದು ಎಂದು ಕಿವಿಮಾತು ಹೇಳಿದರು.
ಪ್ರಾದೇಶಿಕ ವ್ಯವಸ್ಥಾಪಕ ಶರಣಪ್ಪ ಚಿಂಚೋಳಿ ಅಧ್ಯಕ್ಷತೆ ವಹಿಸಿದ್ದರು. ಉಪ ತಹಸೀಲ್ದಾರ ಪ್ರವೀಣಕುಮಾರ ಸಜ್ಜನ, ಕಲಬುರಗಿಯ ಬಿಎಸ್‌ಐ ಅಧಿಕಾರಿ ಚಂದ್ರಶೇಖರ, ಪ್ರಕಾಶ, ಪಿಎಸ್‌ಐ ರಮೇಶ, ಎಎಸ್‌ಐ ರವೀಂದ್ರ, ಸುರೇಖಾ ಕುಲಕರ್ಣಿ ಸೇರಿದಂತೆ ಹಲವರಿದ್ದರು.ಬ್ಯಾಂಕ್ ವ್ಯವಸ್ಥಾಪಕ ಜಗದೀಶ ಆಲಮೇಲ ನಿರೂಪಿಸಿದರು. ವಲಯ ವ್ಯವಸ್ಥಾಪಕ ಪ್ರಹ್ಲಾದ ಸ್ವಾಗತಿಸಿದರು.