ಅಮಿತ್ ಶಾಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ

KannadaprabhaNewsNetwork | Published : Dec 24, 2024 12:46 AM

ಸಾರಾಂಶ

ಡಾ. ಅಂಬೇಡ್ಕರ್ ಅವರ ಬಗ್ಗೆ ಸಂಸತ್ ಭವನದಲ್ಲಿಯೇ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಕೊಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಅವರು ಇಡೀ ರಾಷ್ಟ್ರದ ಜನತೆಯ ಕ್ಷಮೆ ಕೇಳಬೇಕು ಎಂದು ಡಿ.ಎಸ್.ಎಸ್. ಸಂಚಾಲಕ ದಿಡಗೂರು ಜಿ.ಎಚ್. ತಮ್ಮಣ್ಣ ಅವರು ಅಗ್ರಹಿಸಿದರು.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಡಾ. ಅಂಬೇಡ್ಕರ್ ಅವರ ಬಗ್ಗೆ ಸಂಸತ್ ಭವನದಲ್ಲಿಯೇ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಕೊಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಅವರು ಇಡೀ ರಾಷ್ಟ್ರದ ಜನತೆಯ ಕ್ಷಮೆ ಕೇಳಬೇಕು ಎಂದು ಡಿ.ಎಸ್.ಎಸ್. ಸಂಚಾಲಕ ದಿಡಗೂರು ಜಿ.ಎಚ್. ತಮ್ಮಣ್ಣ ಅವರು ಅಗ್ರಹಿಸಿದರು.

ಸೋಮವಾರ ತಾಲೂಕು ಮಾದಿಗ ಮತ್ತು ಮಾದಿಗ ಉಪಜಾತಿಗಳ ಹೋರಾಟ ಸಮಿತಿವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಡಾ. ಬಾಬು ಸಾಹೇಬ್ ಅಂಬೇಡ್ಕರ್ ಅವರಂತಹ ಪ್ರತಿಭಾವಂತ ಮಹಾನ್ ನಾಯಕ ಭೂಮಿಯ ಮೇಲೆ ಹುಟ್ಟದಿದ್ದರೆ ತುಳಿತಕ್ಕೆ, ಶೋಷಣೆ, ಅನ್ಯಾಯಕ್ಕೆ, ದೌರ್ಜನ್ಯಕ್ಕೆ ಒಳಗಾದ ದಮನಿತ ಸಮುೂದಾಯಗಳಿಗೆ ಸಮಾಜದಲ್ಲಿ ಬದುಕು ಸಿಗುತ್ತಿರಲಿಲ್ಲ. ಅಲ್ಲದೇ ಎಲ್ಲರಿಗೂ ಸಮ ಬಾಳು, ಸಮಪಾಲುಗಳನ್ನು ಒದಗಿಸುಕೊಡುತ್ತಿರುವ ಸಂವಿಧಾನವನ್ನು ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಡದಿದ್ದರೆ ದಲಿತ, ಹಿಂದುಳಿದವರ್ಗಗಳು, ಹಾಗೂ ಮಹಿಳೆಯರಿಗೆ ಯಾವುದೇ ರೀತಿ ಸ್ಥಾನಮಾನಗಳು ಸಿಗುತ್ತಿರಲಿಲ್ಲ ಎಂದು ಹೇಳಿದರು.ಈ ಭೂಮಿಯ ಮೇಲೆ ಸೂರ್ಯ ಚಂದ್ರರಿರುವಷ್ಟು ಕಾಲ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು, ಅವರ ಸಿದ್ದಾಂತಗಳು, ಆಶಯಗಳು, ಜೀವಂತವಾಗಿರುತ್ತವೆ ಎಂದು ಹೇಳಿದರು.ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಉಮಾುಪತಿ ಮಾತನಾಡಿ, ಕೇಂದ್ರದ ಸರ್ಕಾದ ಒಬ್ಬ ಜವಾಬ್ದಾರಿಯುವ ಗೃಹ ಸಚಿವರಾಗಿ ಸಂಸತ್ ನಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನೇ ಮರೆತು ಮನಸ್ಸಿಗೆ ಬಂದಂತೆ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಸಂವಿಧಾನವನ್ನು ದೇಶಕ್ಕೆ ಕೊಟ್ಟಂತಹ ಒಬ್ಬ ಮಹಾನ್ ಮೇಧಾವಿ ನಾಯಕನ ಬಗ್ಗೆ ಹಗುರವಾದ ಮಾತುಗಳನ್ನು ಬಳಸಿರುವುದು ಸರಿಯಲ್ಲ. ಇದನ್ನು ಕೇವಲ ದಲಿತ ಸಮುದಾಯ ಅಷ್ಟೇ ಅಲ್ಲ, ಇಡೀ ದೇಶದ ಜನತೆ ಖಂಡಿಸಬೇಕು ಎಂದು ಹೇಳಿದರು.ಪಟ್ಟಣದ ಟಿ.ಬಿ.ವೃತ್ತದ ಕನಕದಾಸ ಪ್ರತಿಮೆಯಿಂದ ನೂರಾರು ಮುಖಂಡರು ಅಮಿತ್ ಶಾ ಅವರ ಅಣಕು ಶವಯಾತ್ರೆ ಮಾಡಿಕೊಂಡು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಅಲ್ಲಿ ಅಣಕು ಶವ ದಹನ ನಡೆಸಿ, ನಂತರ ತಾಲೂಕು ಕಚೇರಿಗೆ ಆಗಮಿಸಿ ಅನೇಕ ಮುಖಂಡರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ಶಿರಸ್ತೇದಾರ್ ಮಂಜುನಾಥ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ಪ್ರತಿಭನೆಟನೆಯಲ್ಲಿ ಡಿ.ಎಸ್.ಎಸ್. ಕುರುವ ಮಂಜುನಾಥ್, ಮಾರಿಕೊಪ್ಪದ ಮಂಜಪ್ಪ, ಕರವೇ ಶ್ರೀನಿವಾಸ್, ಮಂಜು, ದೇವು, ರಾಜಪ್ಪ, ಹನುಮಂತಪ್ಪ ಸೇರಿದಂತೆ ಅನೇಕ ದಲಿತ ಮುಖಂಡರು ಇದ್ದರು.

Share this article