ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧೆ: ರಘುಚಂದನ್

KannadaprabhaNewsNetwork |  
Published : Feb 13, 2024, 12:48 AM ISTUpdated : Feb 13, 2024, 03:21 PM IST
12ಶಿರಾ1: ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮುಖಂಡ ರಘುಚಂದನ್ ಅವರು ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೊಷ್ಠಿಯಲ್ಲಿ ಮುಖಂಡರಾದ ಟಿ.ಹನುಮಂತರಾಯಪ್ಪ, ಸಿ.ಈಶ್ವರ, ಗ್ರಾ.ಪಂ. ಸದಸ್ಯರಾದ ಸಿದ್ದೇಶ, ಗುಂಡಪ್ಪ, ಲೋಕೇಶ, ಎಸ್.ವೆಂಕಟರಾಮಣ್ಣ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಟಿಕೇಟ್ ನೀಡಿದರೆ ಸ್ಪರ್ಧಿಸುವುದಾಗಿ ಬಿಜೆಪಿ ಮುಖಂಡ ರಘುಚಂದನ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಟಿಕೇಟ್ ನೀಡಿದರೆ ಸ್ಪರ್ಧಿಸುವುದಾಗಿ ಬಿಜೆಪಿ ಮುಖಂಡ ರಘುಚಂದನ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಳಲ್ಕೆರೆ ಕ್ಷೇತ್ರದಿಂದ ನಮ್ಮ ತಂದೆಯವರು 5 ಬಾರಿ ಬಿಜೆಪಿ ಪಕ್ಷದಿಂದ ಗೆದ್ದು ಶಾಸಕರಾಗಿದ್ದಾರೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಸಹ ನಾನು ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ಆದರೆ ಪಕ್ಷದ ಹೈಕಮಾಂಡ್ ಎ. ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ನೀಡಿದ ಕಾರಣ ಹೈಕಮಾಂಡ್ ನಿರ್ದೇಶನಕ್ಕೆ ಬದ್ಧನಾಗಿ ಎ. ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಲು ಶ್ರಮಿಸಿದೆನೆ. 

ಈ ಬಾರಿ ನಾನೂ ಸಹ ಒಬ್ಬ ಯುವಕನಾಗಿದ್ದು, ಬಿಜೆಪಿ ಪಕ್ಷ ಯುವಕರಿಗೆ ಹೆಚ್ಚು ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ನನಗೂ ಟಿಕೆಟ್ ನೀಡಿದರೆ ಸ್ಪರ್ಧಿಸಿ ವಿಜಯಶಾಲಿಯಾಗುತ್ತೇನೆ. 

ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಸಹ ಸುಮಾರು ೧.೫೦ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. 

ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಮೈತ್ರಿಯಾಗಿವುದು ಇನ್ನೂ ಅನುಕೂಲವಾಗಿದ್ದು, ಶಿರಾ, ಪಾವಗಡ, ಮೊಳಕಾಲ್ಮೂರು ಈ ಭಾಗದಲ್ಲಿ ಹೆಚ್ಚು ಜೆಡಿಎಸ್ ಮತಗಳು ಬಿಜೆಪಿಗೆ ಅನುಕೂಲವಾಗುತ್ತವೆ ಎಂದರು.

‘ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಆದರೆ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಸಹ ಅವರಿಗೆ ಚುನಾವಣೆ ಮಾಡುತ್ತೇನೆ.

’ ನಮ್ಮದು ರಾಷ್ಟ್ರೀಯ ಪಕ್ಷ ನಾವು ನಮ್ಮ ಮನವಿಯನ್ನು ಸಲ್ಲಿಸುವುದು ನಮ್ಮ ಕೆಲಸ ನಿರ್ಧರಿಸುವುದು ಹೈಕಮಾಂಡ್ ಎಂದರು.

ಪತ್ರಿಕಾಗೊಷ್ಠಿಯಲ್ಲಿ ಮುಖಂಡರಾದ ಟಿ. ಹನುಮಂತರಾಯಪ್ಪ, ಸಿ. ಈಶ್ವರ, ಗ್ರಾಪಂ ಸದಸ್ಯರಾದ ಸಿದ್ದೇಶ, ಗುಂಡಪ್ಪ, ಲೋಕೇಶ, ಎಸ್. ವೆಂಕಟರಾಮಣ್ಣ, ರಂಗನಾಥ್, ಎಚ್. ಮೂರ್ತಿ, ಎಚ್. ಪೆದ್ದರಾಜು, ಗೋವಿಂದರಾಜು, ಮಲ್ಲಿಕಾರ್ಜುನ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ