ಸಂಸ್ಕೃತಿ ನಾಶವಾದರೆ ಜನಾಂಗ ಅಧಃಪತನ: ಡಾ.ಸೋನಿಯ ಮಂದಪ್ಪ

KannadaprabhaNewsNetwork |  
Published : Oct 28, 2026, 02:30 AM IST
ಚಿತ್ರ : 27ಎಂಡಿಕೆ6 : ಸಾಂಸ್ಕೃತಿಕ ಕಾರ್ಯಕ್ರಮ. | Kannada Prabha

ಸಾರಾಂಶ

ಒಂದು ಜನಾಂಗದ ಹೃದಯ ಬಡಿತವೇ ಆ ಜನಾಂಗದ ಸಂಸ್ಕೃತಿ. ಅದು ನಾಶವಾದರೆ ಆ ಜನಾಂಗವೇ ನಾಶವಾಗಿಹೋಗುತ್ತದೆ ಎಂಬುದನ್ನು ಮನಗಂಡು ಕೊಡವ ಸಂಸ್ಕೃತಿಯನ್ನು ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದ ಮೂಲಕ ಉಳಿಸುವ ಪ್ರಯತ್ನ ಮಾಡುತ್ತಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಈ ಕಾರ್ಯ ಶ್ಲಾಘನೀಯ ಎಂದು ಮೈಸೂರಿನ ಖ್ಯಾತ ವೈದ್ಯೆ ಡಾ. ಅಪ್ಪನೆರವಂಡ ಸೋನಿಯ ಮಂದಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಿಕೇರಿ ; ಒಂದು ಜನಾಂಗದ ಹೃದಯ ಬಡಿತವೇ ಆ ಜನಾಂಗದ ಸಂಸ್ಕೃತಿ. ಅದು ನಾಶವಾದರೆ ಆ ಜನಾಂಗವೇ ನಾಶವಾಗಿಹೋಗುತ್ತದೆ ಎಂಬುದನ್ನು ಮನಗಂಡು ಕೊಡವ ಸಂಸ್ಕೃತಿಯನ್ನು ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದ ಮೂಲಕ ಉಳಿಸುವ ಪ್ರಯತ್ನ ಮಾಡುತ್ತಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಈ ಕಾರ್ಯ ಶ್ಲಾಘನೀಯ ಎಂದು ಮೈಸೂರಿನ ಖ್ಯಾತ ವೈದ್ಯೆ ಡಾ. ಅಪ್ಪನೆರವಂಡ ಸೋನಿಯ ಮಂದಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭೂಲೋಕದಲ್ಲೇ ಸೌಂದರ್ಯ ಹಾಗೂ ಧೈರ್ಯ, ಶೌರ್ಯಕ್ಕೆ ಹೆಸರಾಗಿರುವ ಕೊಡವ ಜನಾಂಗದ ಸಂಸ್ಕೃತಿಯೂ ಬಹಳ ವಿಶೇಷವಾದದ್ದು ಹಾಗೂ ವಿಶ್ವ ಖ್ಯಾತಿ ಪಡೆದದ್ದಾಗಿದ್ದು ಅದರ ಮೌಲ್ಯ ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಟಿ.ಶೆಟ್ಟಿಗೇರಿ ಕೊಡವ ಸಮಾಜದ ಸ್ಥಾಪಕ ಸದಸ್ಯರೂ ಹಿಂದಿನ ಆಡಳಿತ ಮಂಡಳಿಯ ಸಲಹೆಗಾರರೂ ಆಗಿದ್ದ ಮಚ್ಚಮಾಡ ಪಾಪು ಸೋಮಯ್ಯ ಮಾತನಾಡಿ, ಪೆರುಮಾಳ್ ಪಟ್ಟಿಯ ನ್ಯಾಯಪೀಠದೊಂದಿಗೆ ಸ್ಥಾಪನೆಗೊಂಡ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಅಂದು ನ್ಯಾಯ ಪೀಠದಿಂದ ಹೆಸರಾಗಿತ್ತು. ಇಂದು ಕೊಡವ ಸಂಸ್ಕೃತಿ ಉಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಪಂಚ ಖ್ಯಾತಿ ಪಡೆದಿದೆ ಎಂದರು.

ಸಮಾಜದ ಮಾಜಿ ನಿರ್ದೇಶಕ ಬೊಳ್ಳೇರ ಪೊನ್ನಪ್ಪ ಮಾತನಾಡಿ, ಚಂಗ್ರಾಂದಿ ಪತ್ತಲೋದಿ ಹತ್ತನೇ ವರ್ಷಾಚರಣೆ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾಯಪಂಡ ಮೋಹನ್ ಕಾಳಯ್ಯ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ನಿರ್ದೇಶಕಿ ಅಪ್ಪಚಂಗಡ ಲಲಿತ ಮೋಟಯ್ಯ, ಪೆರುಮಾಳೇಶ್ವರ ಆಟೋ ಮಾಲೀಕ ಚಾಲಕರ ಸಂಘದ ಅಧ್ಯಕ್ಷ ಚೊಟ್ಟೆಯಾಂಡಮಾಡ ಪ್ರವೀಣ್ ಮೇದಪ್ಪ, ಬಾಡಗರಕೇರಿ ಮಹಿಳಾ ಸಮಾಜದ ಅಧ್ಯಕ್ಷೆ ಮಲ್ಲೇಂಗಡ ರೀಣ ಶಮ್ಮಿ ಶುಭ ಹಾರೈಸಿದರು.

ಕೊಡವ ಸಮಾಜದ ನಿರ್ದೇಶಕಿ ಚಂಗುಲಂಡ ಅಶ್ವಿನಿ ಸತೀಶ್ ಪ್ರಾರ್ಥಿಸಿದರು. ಸಹ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ ಸ್ವಾಗತಿಸಿ, ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ನಿರ್ದೇಶಕ ಮಾಣೀರ ದೀಪಕ್ ವಂದಿಸಿದರು. ಕೊಡವ ಸಮಾಜದ ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ, ಖಜಾಂಚಿ ಚಂಗುಲಂಡ ಸತೀಶ್,ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಡ ರೇಶ್ಮ ಕಾರ್ಯಪ್ಪ, ಕಾರ್ಯದರ್ಶಿ ಕಳ್ಳಿಚಂಡ ದೀನ ಉತ್ತಪ್ಪ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಕ್ಕೆ: ಆಶ್ಲೇಷ ಬಲಿ ಪೂಜೆ ‘ದಿಟ್ಟಂ’ ಬದಲಾವಣೆಗೆ ವಿರೋಧ
ಮಹಾತ್ಮರ ಜಯಂತಿಯಲ್ಲಿ ಜನಜಾಗೃತಿ: ಪ್ರಮೋದ್ ಕುಮಾರ್