ಕನ್ನಡಪ್ರಭ ವಾರ್ತೆ ರಾಮನಗರರಾಜಕಾರಣದಲ್ಲಿ ಸವಾಲನ್ನು ಸ್ವೀಕರಿಸುವುದು ನನಗೆ ಇಷ್ಟ. ನೀವು ಅಭಿವೃದ್ಧಿ ಪಟ್ಟಿಕೊಡಿ ನಾನು ಮಾಡದಿದ್ದರೆ ಮತ ಕೇಳಲು ಬರುವುದಿಲ್ಲ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ವಿರೋಧಿಗಳಿಗೆ ಸವಾಲು ಹಾಕಿದರು.ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಾನೇನು ಸುಮ್ಮನೆ ಕುಳಿತುಕೊಂಡವನಲ್ಲ. ಆದರೆ ನಾನು ಮಾಡಿದ ಕೆಲಸ ಹೇಳಿಕೊಂಡು ಪ್ರಚಾರ ಪಡೆಯುತ್ತಿಲ್ಲ ಎಂದರು.
ಈ ಭಾಗದಲ್ಲಿ ಹಳ್ಳಗಳಿಗೆ ಚೆಕ್ ಡ್ಯಾಂ ನಿರ್ಮಾಣ ಮಾಡಲು ಯೋಜನೆ ಮಾಡುತ್ತಿದ್ದೇನೆ. ಗ್ರಾಮ ಠಾಣಾ ವ್ಯಾಪ್ತಿಯಿಂದ ಹೊರಗಡೆ ಮನೆ ನಿರ್ಮಾಣ ಮಾಡಿರುವ ಪ್ರದೇಶಗಳನ್ನು ಉಪಗ್ರಾಮ ಮಾಡಲು ವಡ್ಡರ ದೊಡ್ಡಿ, ಚಾಮನಹಳ್ಳಿ ಗ್ರಾಮಗಳನ್ನು ಸೇರಿಸಿದ್ದೇನೆ. ನಾನು ಕೂಟಗಲ್ ಹೋಬಳಿಯ ಎಲ್ಲ ಗ್ರಾಮಗಳನ್ನು ಅಭಿವೃದ್ಧಿ ಜೊತೆಗೆ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್ ಮಾತನಾಡಿ , ಶಾಸಕರ ಸಹಕಾರದಲ್ಲಿ ಗ್ರಾಪಂ ಕಟ್ಟಡ ನಿರ್ಮಾಣ ಮಾಡಿದ್ದು, ಕೂಟಗಲ್ ಹೋಬಳಿ ವ್ಯಾಪ್ತಿಗೆ ಹೆಚ್ಚಿನ ಅನುದಾನ ನೀಡಿ ಪ್ರಗತಿಯತ್ತ ಕೊಂಡೊಯ್ಯುವ ಕೆಲಸ ಮಾಡಬೇಕು. ವಸತಿ ಮತ್ತು ರೈತರ ಪೋಡಿ ಕೆಲಸಗಳಿಗೆ ವೇಗ ಕೊಡುವಂತೆ ತಿಳಿಸಿದರು.
ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜು ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ತಾಪಂ ಮಾಜಿ ಅಧ್ಯಕ್ಷ ರಾದ ಎಸ್.ಪಿ.ಜಗದೀಶ್, ಡಿ.ಎಂ.ಮಹದೇವಯ್ಯ, ಗ್ರಾಪಂ ಅಧ್ಯಕ್ಷೆ ನಂದಿನಿನಂದೀಶ್, ಉಪಾಧ್ಯಕ್ಷೆ ಜಯಮ್ಮ, ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷೆ ವಿನೋದಮ್ಮ, ಜಿಲ್ಲಾ ಆಸ್ಪತ್ರೆ ಸಮಿತಿ ಸದಸ್ಯೆ ಶೋಭಾದೇವರಾಜು, ಗ್ರಾಪಂ ಸದಸ್ಯರಾದ ನರಸಿಂಹ ಮೂರ್ತಿ, ನಾಗೇಶ್, ಮುಖಂಡರಾದ ಪ್ರೇಮ ಕುಮಾರ್, ಮಂಜುನಾಥ್, ರವಿಕುಮಾರ್, ಪಿಡಿಓ ಎಂ.ರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.ಓಪನ್----------ಬಿಜೆಪಿಯವರಿಗೆ ರಾಜ್ಯ ಬಜೆಟ್ ಸಹಿಸಿಕೊಳ್ಳಲು ಆಗುತ್ತಿಲ್ಲಕನ್ನಡಪ್ರಭ ವಾರ್ತೆ ರಾಮನಗರರಾಜ್ಯ ಸರ್ಕಾರದ ಬಜೆಟ್ ಗಾತ್ರ 4 ಲಕ್ಷ ಕೋಟಿ. ಅಲ್ಪಸಂಖ್ಯಾತರಿಗೆ 4 ಸಾವಿರ ಕೋಟಿ ಅಂದರೆ ಕೇವಲ ಒಂದು ಪರ್ಸೆಂಟ್ ಅಷ್ಟೇ ಕೊಟ್ಟಿದ್ದಾರೆ. ಅಲ್ಪಸಂಖ್ಯಾತರ ಮಾತ್ರವಲ್ಲದೆ ಎಲ್ಲ ವರ್ಗದವರಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಇದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ತಿರುಗೇಟು ನೀಡಿದರು.ತಾಲೂಕಿನ ಶ್ಯಾನುಭೋಗನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಜೊತೆಗೆ ಅಭಿವೃದ್ಧಿಗೂ ಹಣ ನೀಡುತ್ತಿದ್ದೇವೆ. ಎಲ್ಲಾ ರೀತಿಯ ಅಭಿವೃದ್ಧಿಗೂ ಈ ಬಜೆಟ್ ಪೂರಕವಾಗಿದೆ. ಆದರೆ, ಬಿಜೆಪಿವರು ಅಲ್ಪಸಂಖ್ಯಾತರಿಗೆ ಅನುದಾನ ಕೊಟ್ಟಿದ್ದಾರೆಂದು ಹೇಳಿಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಮಾಗಡಿಯಲ್ಲಿ ಆಸ್ಪತ್ರೆ ಅಭಿವೃದ್ಧಿಗೆ 45 ಕೋಟಿ ಅನುದಾನ ಕೊಟ್ಟಿದ್ದಾರೆ. ರಸ್ತೆ, ಮಾರುಕಟ್ಟೆ ಅಭಿವೃದ್ಧಿ, ರೇಷ್ಮೆ ಬೆಳೆಗೆ ಪ್ರೋತ್ಸಾಹ ಎಲ್ಲವನ್ನೂ ನಮ್ಮ ಸರ್ಕಾರ ಕೊಟ್ಟಿದೆ. ಮತ ನೀಡಿರುವ ಜನರಿಗೆ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ 500 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುತ್ತಿದ್ದು, ಇದರಲ್ಲಿ ನಮ್ಮ ಜಿಲ್ಲೆಗೆ 30 ಪಬ್ಲಿಕ್ ಶಾಲೆಗಳು ಸೇರಿವೆ. ನಿಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆಯೂ ಹೇಳಿ ಸರಿ ಮಾಡುತ್ತೇವೆ ಎಂದರು.
ಇದು ಸಿದ್ದರಾಮಯ್ಯರವರ ಕೊನೆಯ ಬಜೆಟ್ ಎಂಬ ಬಿಜೆಪಿ ಟೀಕೆ ಮಾಡುತ್ತಿದೆಯಲ್ಲ ಎಂಬ ಪ್ರಶ್ನೆಗೆ ಬಿಜೆಪಿಯವರಿಗೆ ಮಾತನಾಡುವ ತೆವಲು, ಮಾತನಾಡಲಿ. ಇದು ಕೊನೆಯದ್ದೋ ಅಥವಾ ಮೊದಲದ್ದೋ ಎಂಬುದನ್ನು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈಗ ರಾಜ್ಯದಲ್ಲಿ ನಮ್ಮ ಯಜಮಾನಿಕೆ ನಡೆಯುತ್ತಿದೆ. ಈ ಮೂರು ವರ್ಷ ಅಲ್ಲದೇ ಇನ್ನೂ ಐದು ವರ್ಷ ನಮ್ಮ ಯಜಮಾನಿಕೆ ನಡೆಯುತ್ತೆ. ಕಾಂಗ್ರೆಸ್‌ನವರು ಯಜಮಾನರಾಗಿಯೇ ಇರುತ್ತಾರೆ. ಯಜಮಾನ ಯಾರು ಅಂತ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಉತ್ತರಿಸಿದರು.ಬಿಡದಿಗೆ ಬೆಂಗಳೂರು ಮೆಡಿಕಲ್ ವೇಸ್ಟ್ ತಂದು ಹಾಕುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಪರಿಶೀಲನೆ ಮಾಡಲು ಸೂಚಿಸಿದ್ದೇನೆ. ಯಾರು ಮೆಡಿಕಲ್ ವೇಸ್ಟ್ ತಂದು ಕೆರೆ ಪಕ್ಕ ಹಾಕುತ್ತಿದ್ದಾರೊ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.--------
ಕಾಂಗ್ರೆಸ್ಸನ್ನು ಆರೋಪಿಸಲು ಬಿಜೆಪಿ ನೈತಿಕತೆ ಉಳಿಸಿಕೊಂಡಿಲ್ಲರಾಮನಗರ:ನಟಿ ರನ್ಯಾಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಐಎಡಿಬಿಯಿಂದ ಜಾಗ ನೀಡಿದೆ. ಈಗ ನಮ್ಮ ಮೇಲೆ ಆರೋಪ ಮಾಡಲು ಬಿಜೆಪಿಯವರಿಗೆ ಯಾವ ನೈತಿಕತೆ ಉಳಿಸಿಕೊಂಡಿದ್ದಾರೆ ಎಂದು ಶಾಸಕ ಬಾಲಕೃಷ್ಣ ತಿರುಗೇಟು ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರು ಬಂದು ಸಹಾಯ ಸಹಕಾರ ಕೇಳುತ್ತಾರೆ. ಆಗ ಬಂದವರಲ್ಲಿ ಯಾರು ಕಳ್ಳರು, ಯಾರು ಒಳ್ಳೆಯವರು ಎಂದು ಗೊತ್ತಾಗುವುದಿಲ್ಲ. ಅವರು ಕದ್ದು ಸಿಕ್ಕಿ ಬಿದ್ದಾಗಲೇ ಕಳ್ಳರು ಅಂತ ಗೊತ್ತಾಗೋದು ಎಂದರು. ಎಚ್ ಡಿಕೆ ಕ್ಷುಲ್ಲಕ ಹೇಳಿಕೆ ನೀಡಬಾರದು:ಕುಮಾರಸ್ವಾಮಿ ಏನು ಮಾತಾಡುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ನಾವು ಪಾಟ್ನರ್ಸ್ ಹತ್ತಿರ ಪರ್ಮಿಷನ್ ತೆಗೆದುಕೊಳ್ಳಬೇಕಾ.? ಇವರು ಕೇಂದ್ರದಿಂದ ಕೊಡಿಸಿದರೆ ಆಗೊದಿಲ್ವಾ. ಈ ಮಾತನ್ನು ಅವರು ಮೊದಲು ಹೇಳಿರಲಿಲ್ಲವಲ್ಲ.
ನನಗೆ ಅಧಿಕಾರ ಕೊಡಿ ಅಂತ ಕೇಳಿದ್ದರು. ನಾನು ಸಚಿವನಾದ 24 ಗಂಟೆಯಲ್ಲಿ ಮೇಕೆದಾಟು ಯೋಜನೆಗೆ ಅನುಮೋದನೆ ಕೊಡಿಸುತ್ತೇನೆ ಎಂದು ಹೇಳಿದ್ದರು. ಏಕೆ ಇಲ್ಲಿವರೆಗೂ ಕೊಡಿಸಲಿಲ್ಲ. ಗೋವಾದಲ್ಲಿ ಇವರದೇ ಮಿತ್ರಪಕ್ಷ ಇದೆಯಲ್ಲ, ಮಹಾದಾಯಿಗೆ ಅನುಮತಿ ಕೊಡಿಸಲಿ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಹೀಗೆಲ್ಲ ಸಣ್ಣ ಹೇಳಿಕೆಗಳನ್ನು ಕೊಡಬಾರದು ಎಂದು ಬಾಲಕೃಷ್ಣ ಸಲಹೆ ನೀಡಿದರು.---10ಕೆಆರ್ ಎಂಎನ್ .ಜೆಪಿಜಿ-----