ಪುರುಷರ ಆಲೋಚನೆ ಬದಲಾದರೆ ಮಹಿಳೆ ಇನ್ನಷ್ಟು ಸದೃಢ: ಡಾ.ಎಚ್.ಸಿ.ಹೇಮಲತಾ

KannadaprabhaNewsNetwork |  
Published : Mar 09, 2025, 01:50 AM IST
8ಕೆಎಂಎನ್ ಡಿ27 | Kannada Prabha

ಸಾರಾಂಶ

ಒಂದು ದೇಶದ ಆರ್ಥಿಕ ಪ್ರಗತಿಯ ಸಾಧನೆಯಾಗಿ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾಳೆ. ಇಂದಿರಾಗಾಂಧಿ, ಕಲ್ಪನಾ ಚಾವ್ಲಾ, ಕಿರಣ್ ಮುಜುನ್ದಾರ್, ಸಾಲುಮರದ ತಿಮ್ಮಕ್ಕ ಇನ್ನೂ ಹಲವು ಮಹಿಳೆಯರು ಬಾಹ್ಯಾಕಾಶದಿಂದ ಹಿಡಿದು ಆಟೋ ಚಾಲನೆ ಮಾಡುವವರೆಗೂ ತಮ್ಮ ನೈಪುಣ್ಯತೆ, ಧೈರ್ಯ, ಸವಾಲುಗಳ ಮೂಲಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳೆಯರು ನಾಲ್ಕು ಗೋಡೆಯಲ್ಲಿ ಬದುಕಬೇಕು ಎಂಬ ಭಾವನೆ ಕೆಲವು ಪುರುಷರಲ್ಲಿದೆ. ಅವರ ಆಲೋಚನೆ ಬದಲಾದರೆ ಮಹಿಳೆಯರು ಸಮಾಜದಲ್ಲಿ ಇನ್ನಷ್ಟು ಸದೃಢರಾಗುತ್ತಾರೆ ಎಂದು ಮಹಿಳಾ ಸರ್ಕಾರಿ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಚ್.ಸಿ.ಹೇಮಲತಾ ಅಭಿಪ್ರಾಯಪಟ್ಟರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನ ವರರಂಗದಲ್ಲಿ ಏರ್ಪಡಿಸಿದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ದೇಶ ಪ್ರಗತಿಯಲ್ಲಿ ಪುರುಷ ಮತ್ತು ಮಹಿಳೆಯರ ಬಹಳ ಮುಖ್ಯ. ಆದರೆ, ಭಾರತವು ಪುರುಷ ಪ್ರಧಾನ ದೇಶವಾಗಿದ್ದು, ಇನ್ನೂ ಕೆಲವು ಕಡೆ ಮಹಿಳೆ ಅಬಲೆಯಾಗಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದರು.

ಒಂದು ದೇಶದ ಆರ್ಥಿಕ ಪ್ರಗತಿಯ ಸಾಧನೆಯಾಗಿ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾಳೆ. ಇಂದಿರಾಗಾಂಧಿ, ಕಲ್ಪನಾ ಚಾವ್ಲಾ, ಕಿರಣ್ ಮುಜುನ್ದಾರ್, ಸಾಲುಮರದ ತಿಮ್ಮಕ್ಕ ಇನ್ನೂ ಹಲವು ಮಹಿಳೆಯರು ಬಾಹ್ಯಾಕಾಶದಿಂದ ಹಿಡಿದು ಆಟೋ ಚಾಲನೆ ಮಾಡುವವರೆಗೂ ತಮ್ಮ ನೈಪುಣ್ಯತೆ, ಧೈರ್ಯ, ಸವಾಲುಗಳ ಮೂಲಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಕುಟುಂಬದಲ್ಲಿ ತಾಯಿಯಾಗಿ ಹೆಂಡತಿ ಯಾಗಿ, ಸಹೋದರರಿಯಾಗಿ, ಮಗಳಾಗಿ, ಎಲ್ಲ ಮುಜಲು ಗಳಲ್ಲಿ ಅವಳ ಕಾಣಿಕೆ ದೊಡ್ಡದು. ಸಮಾಜದಲ್ಲಿ ಮಹಿಳೆಗೆ ಸಮಾನ ಅವಕಾಶ, ಸಮಾನತೆ, ಸಮಾನ ಗೌರವ ದೊರೆತರೆ ಆ ದೇಶ ಸಮೃದ್ಧಿಯ ನಾಡಾಗುತ್ತದೆ. ಇಲ್ಲವಾದರೆ ಅಸಮಾನತೆಯ ಗೂಡಾಗುತ್ತದೆ ಎಂದು ಎಂದು ಎಚ್ಚರಿಸಿದರು.

ಪ್ರಾಂಶುಪಾಲ ಡಾ.ಗುರುರಾಜ ಪ್ರಭು ಮಾತನಾಡಿ, ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಆದರೆ, ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಸಂವಿಧಾನದ ಹಕ್ಕು ಮತ್ತು ಅವಕಾಶ ಬಳಸಿಕೊಳ್ಳುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಲಿ ಎಂದರು.

ಕಾರ್ಯಕ್ರಮದಲ್ಲಿ ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಕುಸುಮದೇವಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸೈಯದ್ ಕೌಸರ್, ಪ್ರಾಧ್ಯಾಪಕರಾದ ಡಾ.ಜಯಲಕ್ಷ್ಮಿ, ಡಾ.ಪುಷ್ಪಲತಾ, ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಗಿರಿಜಾಂಬ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ