ಗದಗ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅವಧಿಯಲ್ಲಿ ಕಲಿಯುವ ಹಸಿವು ಮತ್ತು ಆಸಕ್ತಿ ಇದ್ದರೆ ಸಕಲ ಯಶಸ್ಸು ನಿಮ್ಮದಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಮಯವನ್ನು ವ್ಯರ್ಥ ಮಾಡದೆ ಕಲಿಯುವ ಹಸಿವಿನೊಂದಿಗೆ ಮುನ್ನೆಡದಾಗ ಸಕಲ ಯಶಸ್ಸು ನಿಮ್ಮದಾಗುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ. ಸುರೇಶ ಎಂ. ತುವಾರ ಹೇಳಿದರು.
ಪ್ರಾಚಾರ್ಯ ಪ್ರೊ. ಪಿ.ಜಿ. ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳೊಂದಿಗೆ ನಿರಂತರ ಪ್ರಯತ್ನ ಮತ್ತು ಛಲದೊಂದಿಗೆ ಮುನ್ನುಗ್ಗಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.
ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ಬಿ. ಹಾವೇರಿ ವಾರ್ಷಿಕ ವರದಿ ವಾಚನ ಮಾಡಿದರು.ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಸ್.ಪಿ. ಸಂಶಿಮಠ, ಆಡಳಿತ ಮಂಡಳಿಯ ಸದಸ್ಯ ವೀರೇಶ ಕೂಗು, ಈಶಣ್ಣ ಮುನವಳ್ಳಿ ಹಾಗೂ ಇತರರು ಇದ್ದರು. ವಿಜಯಲಕ್ಷೀ ಮೆಣಸಿನಕಾಯಿ ಪ್ರಶಸ್ತಿ ವಿತರಣೆ ನೆರವೇರಿಸಿದರು. ಪ್ರೊ. ನೇತ್ರಾ ನಾಗಲೋಟಿಮಠ ಸ್ವಾಗತಿಸಿದರು. ಪ್ರೊ. ಎಸ್.ಆರ್. ಹಿರೇಗೌಡರ ವಂದಿಸಿದರು.