ನಿವೇಶನ ಪಡೆದದ್ದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ

KannadaprabhaNewsNetwork |  
Published : Aug 23, 2024, 01:07 AM IST
22 | Kannada Prabha

ಸಾರಾಂಶ

ಒಂದು ಸಣ್ಣ ದಾಖಲೆ ಬಿಡುಗಡೆಗೊಳಿಸಿದರೂ ರಾಜಕೀಯ ನಿವೃತ್ತಿ ಹೊಂದುತ್ತೇನೆ.

ಕನ್ನಡಪ್ರಭ ವಾರ್ತೆ ಮೈಸೂರುಶಾಸಕ ಶ್ರೀವತ್ಸ ಎಂಡಿಎ ನಿಂದ ಜಿ. ಕೆಟಗಿರಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರಿಗೆ ಶಾಸಕ ಶ್ರೀವತ್ಸ ತಿರುಗೇಟು ನೀಡಿದ್ದಾರೆ.ನನ್ನ ವಿರುದ್ಧದ ಆರೋಪ ಸಾಬೀತಾದರೆ 24 ಗಂಟೆಗಳಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಒಂದು ಸಣ್ಣ ದಾಖಲೆ ಬಿಡುಗಡೆಗೊಳಿಸಿದರೂ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ನನ್ನ ಮೇಲಿನ ಆರೋಪ ಸುಳ್ಳಾದರೆ ಲಕ್ಷ್ಮಣ್ ರಾಜಕೀಯ ನಿವೃತ್ತಿ ಹೊಂದುತ್ತಾರಾ.? ಎಂದು ಸವಾಲು ಹಾಕಿದ್ದಾರೆ.ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು. ಎಲುಬಿಲ್ಲದ ನಾಲಿಗೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಬಾರದು. ನನ್ನ ಹಾಗೂ ನನ್ನ ಕುಟುಂಬದ ಹೆಸರಿನಲ್ಲಿ ಎಂಡಿಎಗೆ ಸಂಬಂಧಿಸಿದ ಒಂದು ತುಂಡು ಜಾಗವೂ ಇಲ್ಲ. ಬೇಸರತ್ ಕ್ಷಮೆಗೆ ನೋಟಿಸ್ ಕಳುಹಿಸಿದ್ದೇವೆ. ಕ್ಷಮೆಯಾಚಿಸದಿದ್ದರೆ ಕಾನೂನು ಸಂಕಷ್ಟ ಎದುರಿಸಬೇಕಾಗುತ್ತದೆ. ಅಷ್ಟು ಸುಲಭವಾಗಿ ಬಿಡುವವನಲ್ಲ ನಾನು. ಇನ್ನೂ ಮುಂದೆ ಲಕ್ಷ್ಮಣ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದೇ ಇಲ್ಲ. ಏನಿದ್ದರೂ ಕಾನೂನಿನ ಮೂಲಕ ಉತ್ತರ ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.ಲಕ್ಷ್ಮಣ್ ಅವರು ಪ್ರತಾಪ್ ಸಿಂಹ ಅವರ ಬಗ್ಗೆ ಮಾತನಾಡಲಿ. ಪ್ರತಾಪ್ ಸಿಂಹ ವಿರುದ್ಧ ಮಾತಾನಾಡಲು ಹೆದರುತ್ತಾರೆ. ರಾಜಕೀಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ಬರ್ಬಾದ್ ಆಗಿರುವ ಲಕ್ಷ್ಮಣ್ ಲ್ಯಾಕ್ ಅಂಡ್ ಪೇಂಟಿಂಗ್ ಮೃಗಾಲಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಈ ರೀತಿ ಮಾತಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯ ಸೇರುವ ಬಗ್ಗೆ ವಿಷ್ಣುಗೆ ಇತ್ತು ಗೊಂದಲ!
ಫುಡ್‌ಸ್ಟ್ರೀಟ್‌ ಆದ ಮಾರುತಿ ಮಂದಿರ ಬಸ್‌ ನಿಲ್ದಾಣ