ಇಂಡಿ: ಇಂಡಿ ಜಿಲ್ಲಾ ಕೇಂದ್ರವಾಗಲು ಯಾವ ತ್ಯಾಗಕ್ಕೂ ಸಿದ್ದ. ಜಿಲ್ಲಾ ಕೇಂದ್ರಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೆರಲಾಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇದೆ.
2028 ರ ಒಳಗಾಗಿ ಇಂಡಿ ಜಿಲ್ಲೆಯಾಗಲಿದೆ. ಒಂದು ವೇಳೆ ಮಾಡಲು ನಿರಾಕರಿಸಿದರೆ ಅಂದೇ ಶಾಸಕತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನದು ಬದ್ಧತೆಯ ರಾಜಕಾರಣ, ಮಾತುಕೊಟ್ಟಂತೆ ನಡೆದುಕೊಳ್ಳುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇಂಡಿ ಜಿಲ್ಲಾ ಕೇಂದ್ರ ಮಾಡುವುದು ನನ್ನ ಕನಸಿದೆ. ನನ್ನ ಕನಸು ನನಸಾಗುವುದಕ್ಕೆ ಅಡೆತಡೆ ಬಂದರೆ ಸುಮ್ಮನೆ ಕುರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಗದ ರಹಿತ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಇಲಾಖೆ ಹೊರಟಿದೆ. ರಾಜ್ಯದಲ್ಲಿ ಹೊಸದಾಗಿ ಆರ್‌ಟಿಒ ಕಚೇರಿಗಳು ಆರಂಭಿಸದರೆ, ಇಂಡಿಯಲ್ಲಿ ಆರ್‌ಟಿಒ ಉಪ ವಿಭಾಗದ ಕಚೇರಿ ಆರಂಭವಾಗುತ್ತದೆ ಎಂದರು.ಇಂಡಿಗೆ ನಮ್ಮ ಕ್ಲಿನಿಕ್ ಮಂಜೂರಾಗಿದ್ದು, ಅದಕ್ಕೆ ಜಾಗ ಒದಗಿಸಬೇಕಿದೆ.
ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಪಟ್ಟಣದ ಸ್ಟೇಷನ್ ರಸ್ತೆ ಮಾದರಿಯಲ್ಲಿ ಸಿಂದಗಿ, ವಿಜಯಪುರ, ಅಗರಖೇಡ ರಸ್ತೆಗಳನ್ನು ಅಭಿವೃದ್ದಿಪಡಿಸಲಾಗುತ್ತದೆ. ಜನಗಣತಿ ಮುಗಿದ ಕೆಲವೇ ದಿನದಲ್ಲಿ ಇಂಡಿ ನಗರಸಭೆಯಾಗಲಿದೆ. ವಿಜಯಪುರದ ವಿಮಾನ ನಿಲ್ದಾಣ ಕಾಮಗಾರಿ ಶೇ.99 ರಷ್ಟು ಪೂರ್ಣಗೊಂಡಿದ್ದು,. ಸ್ವಲ್ಪೆ ಪ್ರಮಾಣದ ಕಾಮಗಾರಿ ಉಳಿದಿದೆ.
ಅದಕ್ಕೆ ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಳಿಸಿ ವಿಮಾನ ಹಾರಾಟ ನಡೆಯಬೇಕು ಎಂದು ಹೇಳಿದರು. ಅಲ್ಲದೇ, ತಾಲೂಕಿಗೆ ಬಂದಿರುವ 9 ನೀರಾವರಿ ಯೋಜನೆಗಳು ಪೂರ್ಣಗೊಂಡರೆ ತಾಲೂಕಿನ ಶೇ.70 ರಷ್ಟು ಪ್ರದೇಶ ನೀರಾವರಿಗೆ ಒಳಪಟ್ಟು, ತಾಲೂಕು ಅಭಿವೃದ್ದಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಎಸಿ ಅಬೀದ್ ಗದ್ಯಾಳ, ತಹಸೀಲ್ದಾರ್ ಬಿ.ಎಸ್.ಕಡಕಬಾವಿ, ಡಿವೈಎಸ್ಪಿ ಜಗದೀಶ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಬಿಇಒ ಟಿ.ಎಸ್.ಆಲಗೂರ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕೆ ಅಧಿಕಾರಿ ಎಚ್.ಎಸ್.ಪಾಟೀಲ, ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಎಸ್.ಆರ್.ರುದ್ರವಾಡಿ, ದಯಾನಂದ ಮಠ, ಕ್ರೀಡಾಧಿಕಾರಿ ಸಿ.ಎಸ್.ವಾಲಿಕಾರ ಇತರರು ಇದ್ದರು.