ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ವತಿಯಿಂದ ನಗರದ ಬಸವೇಶ್ವರ ಭವನದಲ್ಲಿ ಆಯೋಜಿಸಲಾಗಿದ್ದ ಸದಸ್ಯತ್ವ ನೋಂದಣಿ ಹಾಗೂ ಬೂತ್ ಸಮಿತಿ ಅಭಿಯಾನದ ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಜನ ಕಾಂಗ್ರೆಸ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಶಾಸಕರನ್ನು ಕೊಟ್ಟಿದ್ದರೂ ಈ ಬಾರಿ ಅದು ನೆಲಕಚ್ಚಲಿದೆ. ಕಾಂಗ್ರೆಸ್ ವೈಫಲ್ಯ, ಭ್ರಷ್ಟಾಚಾರ ಎಲ್ಲವೂ ಜನರ ಎದುರು ಬಯಲಾಗಿದೆ ಎಂದು ಗುಡುಗಿದರು.
ಮುಂಬರುವ ಜಿಪಂ, ತಾಪಂ ಸೇರಿದಂತೆ ಯಾವುದೇ ಸ್ಥಳೀಯ ಚುನಾವಣೆಯಲ್ಲಿ ನಿಮ್ಮ ಜೊತೆ ನಾನು ಇರುತ್ತೇನೆ. ದೇವೇಗೌಡರು ಹಾಗೂ ಕುಮಾರಸ್ವಾಮಿವರು ಗಳಿಸಿದ್ದು ಜನರ ಪ್ರೀತಿ ವಿಶ್ವಾಸ ಎಂಬುವುದನ್ನು ನಿಮ್ಮನ್ನು ನೋಡಿದರೇ ಗೊತ್ತಾಗುತ್ತದೆ ಎಂದರು.ಜಿಲ್ಲಾಮಟ್ಟದಲ್ಲಿ ಉದ್ಯೋಗಗಳು ಸೃಷ್ಟಿಯಾಗಬೇಕಿದೆ. ರೈತರಿಗೆ, ಯುವಕರಿಗೆ ಸಹಾಯ ಆಗಬೇಕಿರುವ ಯೋಜನೆಗಳು ಬೇಕಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟ್ಟಿನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಕೆಲಸ ಆಗಿದೆ. ಮುಂಬರುವ ದಿನಗಳಲ್ಲಿ ಜೆಡಿಎಸ್ ಬಿಜೆಪಿ ಒಗ್ಗಟ್ಟಾಗಿ ಚುನಾವಣೆ ಮಾಡುತ್ತೇವೆ ಎಂದು ತಿಳಿಸಿದರು.
ಬೂತ್ ಮಟ್ಟದ ಸಮಿತಿ ರಚನೆ ಹಾಗೂ ಸದಸ್ಯತ್ವ ಅಭಿಯಾನ ಎರಡು ತಿಂಗಳಿನಲ್ಲಿ ನಿರೀಕ್ಷೆ ಮಟ್ಟದಲ್ಲಿ ಕೆಲಸ ಆಗದಿದ್ದರೇ, ಪದವಿ ಓದಿರುವ ಹುಡುಗರು ನನ್ನ ಜೊತೆಯಲ್ಲಿದ್ದು ಅವರನ್ನು ಪ್ರತಿ ವಿಧಾನಸಭೆಗೆ 10 ಜನರಂತೆ ಕಳುಹಿಸುತ್ತೇನೆ. ಎರಡು ತಿಂಗಳಲ್ಲಿ ನೀವೆಲ್ಲರೂ ಸೇರಿ ಅತ್ಯಂತ ವೇಗದಲ್ಲಿ ಬೂತ್ ಮಟ್ಟದ ಸಮಿತಿ ಮಾಡಿ ಸದಸ್ಯತ್ವ ಯಶಸ್ವಿಯಾಗಬೇಕು ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶಬಾಬು ಮಾತನಾಡಿ, ಜನಗಳ ಮನಸನ್ನು ಜನತಾ ಪಕ್ಷದ ಕಡೆ ಒಲಿಸಿಕೊಳ್ಳಲು ನಾವೆಲ್ಲರೂ ಶ್ರಮಿಸಿದರೇ ಮುಂದಿನ ದಿನಗಳಲ್ಲಿ ಜಿಲ್ಲೆಯ 8 ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯ. ಹಾಗಾಗಿ ತಾವೆಲ್ಲರೂ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಹಳ್ಳಿಹಳ್ಳಿಗಳಲ್ಲೂ ಸದಸ್ಯತ್ವ ಮಾಡಬೇಕು. ಬೂತ್ ಮಟ್ಟದಲ್ಲಿ ಎಷ್ಟು ಜನಾಂಗ ಇದೆ ಎಂಬುವುದು ಗುರುತಿಸಿ ಆಯಾ ಜಾತಿಗಳ ಮುಖಂಡರಿಂದ ಸದಸ್ಯತ್ವ ಮಾಡಿಸಬೇಕು. ಜೆಡಿಎಸ್ ಜಾತ್ಯಾತೀತ ಆಗಿರುವುದರಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವ ಎಲ್ಲ ಜಾತಿಗಳ ಸದಸ್ಯರು ಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಪ್ರಥಮ ಬಾರಿಗೆ ಜಿಲ್ಲೆಗೆ ಬಂದು ಸದಸ್ಯತ್ವ ನೋಂದಣಿ ಹಾಗೂ ಬೂತ್ ಸಮಿತಿಗೆ ಚಾಲನೆ ನೀಡಿದ ಈ ದಿನ ಸಂತೋಷದ ದಿನವಾಗಿದೆ. ಜಿಲ್ಲೆಯ ನಾಯಕರು ಎಲ್ಲರೂ ತಮ್ಮ ತಮ್ಮ ಸಮುದಾಯಗಳ ಜನರನ್ನು 8 ಕ್ಷೇತ್ರಗಳಲ್ಲಿ ಗಟ್ಟಿಗೊಳಿಸುವ ಕೆಲಸ ಮಾಡಿದರೇ ಜೆಡಿಎಸ್ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತ. ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಜಿಲ್ಲೆಯ ಜನತೆ, ಮತದಾರರೇ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
-------------
ಮಾಜಿ ಪ್ರಧಾನಿ ದೇವೇಗೌಡರ 62 ವರ್ಷದ ದೀರ್ಘ ಕಾಲದ ರಾಜಕಾರಣದಲ್ಲಿ ಉತ್ತರ ಕರ್ನಾಟಕಕ್ಕೆ ಹಾಗೂ ಕೃಷ್ಣಾ ಕೊಳ್ಳದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಒಂದು ಸಾವಿರ ಕೋಟಿಗೂ ಅಧಿಕ ಅನುದಾನವನ್ನು ಆಲಮಟ್ಟಿಯ ಜಲಾಶಯದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೊಟ್ಟಿದ್ದಾರೆ. ಅದನ್ನು ನೆನಪಿಟ್ಟುಕೊಂಡು ತಾವೆಲ್ಲರೂ ಶ್ರಮಿಸಿದ್ದೇ ಆದರೆ ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಜನ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಬಹುದು. ದೇವೇಗೌಡರು ಹಾಗೂ ಕುಮಾರಸ್ವಾಮಿ ನೀಡಿದ ಕೊಡುಗೆಗಳು ಇತಿಹಾಸವಾಗಿವೆ. ಎಲ್ಲರೂ ಅಣ್ಣತಮ್ಮಂದಿರಂತೆ ನಿಂತು ಪಕ್ಷ ಕಟ್ಟೋಣ. ಮಂಡ್ಯ, ಹಾಸನಕ್ಕೂ ವಿಜಯಪುರ ಜಿಲ್ಲೆ ಕಡಿಮೆಯಿಲ್ಲ ಎಂಬ ಪ್ರೀತಿಯನ್ನು ಜೆಡಿಎಸ್‌ಗೆ ತೋರಿಸಿ.
----
ಬೂತ್ ಮಟ್ಟದಲ್ಲಿ ಸಮಿತಿ ರಚನೆ ಮಾಡುವ ಮೂಲಕ ಜೆಡಿಎಸ್ ಪಕ್ಷದ ಸೇವೆಗೆ ಮುಂದಾಗಬೇಕು. ಮುಂಬರುವ ಎರಡು ತಿಂಗಳೊಳಗೆ ಈ ಕೆಲಸ ಆಗಬೇಕಿದೆ. ವೃತ್ತಿ ಹಾಗೂ ಜಾತಿಗಳಿಗೆ ಸಂಬಂಧಿಸಿದ 21 ವಿಭಾಗದ ಬೂತ್ ಸಮಿತಿ ರಚನೆ ಮಾಡುವ ಮೂಲಕ ಸಕ್ರಿಯರಾಗಬೇಕು.-ಸುರೇಶಬಾಬು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ.
26BIJ05