ದೃಷ್ಟಿ ಚೆನ್ನಾಗಿದ್ದರೆ ಉತ್ತಮ ಕೆಲಸ ಮಾಡಲು ಸಾಧ್ಯ

KannadaprabhaNewsNetwork |  
Published : Jul 29, 2024, 12:45 AM IST
ರಾಮನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. | Kannada Prabha

ಸಾರಾಂಶ

ಮನುಷ್ಯನಿಗೆ ಕಣ್ಣಿನ ದೃಷ್ಟಿ ಅತೀ ಮುಖ್ಯ. ದೃಷ್ಟಿ ಚೆನ್ನಾಗಿದ್ದರೆ ಮಾತ್ರ ಉತ್ತಮ ಕೆಲಸ ಮಾಡಲು ಸಾಧ್ಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್.ಯೋಗಾನಂದ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಮನುಷ್ಯನಿಗೆ ಕಣ್ಣಿನ ದೃಷ್ಟಿ ಅತೀ ಮುಖ್ಯ. ದೃಷ್ಟಿ ಚೆನ್ನಾಗಿದ್ದರೆ ಮಾತ್ರ ಉತ್ತಮ ಕೆಲಸ ಮಾಡಲು ಸಾಧ್ಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್.ಯೋಗಾನಂದ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಂಗಳೂರಿನ ಶ್ರದ್ಧಾ ಐ ಕೇರ್‌ ಟ್ರಸ್ಟ್ ಬೆಂಗಳೂರು ಸಹಯೋಗದಲ್ಲಿ ಭಾರತ್ ವಿಕಾಸ್ ಪರಿಷತ್‌ನ ೬೧ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 139ನೇ ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲವರು ಕೆಲಸದ ಒತ್ತಡದಿಂದ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ವಯಸ್ಸಾದಂತೆ ಕಣ್ಣಿನಲ್ಲಿ ಸಮಸ್ಯೆ ಬರುವುದು ಸಹಜ. ಸಮಸ್ಯೆ ಕಂಡ ಕೂಡಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ. ಭಾರತ್ ವಿಕಾಸ್ ಪರಿಷತ್‌ ಪ್ರತಿ ತಿಂಗಳು ಕಣ್ಣು, ಆರೋಗ್ಯ ಶಿಬಿರಕ್ಕೆ ಒತ್ತು ನೀಡುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ನಿಮ್ಮೊಟ್ಟಿಗೆ ಸ್ಪಂದಿಸಲಿದೆ ಎಂದರು.

ಭಾರತ್ ವಿಕಾಸ್ ಪರಿಷತ್ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಮೋಹನ್ ಮಾತನಾಡಿ, ವೈದ್ಯಕೀಯ ಸೇವೆ ದುಬಾರಿಯಾಗಿದ್ದು, ಸಾಮಾನ್ಯರಿಗೆ ಕೈಗೆಟುಕದಂತಾಗಿದೆ. ಈ ನಿಟ್ಟಿನಲ್ಲಿ ಸೇವಾ ಮನೋಭಾವನೆ ಹೊಂದಿರುವ ಸಂಘ, ಸಂಸ್ಥೆಗಳು ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುತ್ತಿವೆ. ಅದರಲ್ಲಿ ಭಾರತ್ ವಿಕಾಸ್ ಪರಿಷತ್ ಆರೋಗ್ಯ ಶಿಬಿರ ನಡೆಸುವ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದರು.

ಇದೇ ವೇಳೆ ಶಿಬಿರದ ಪ್ರಾಯೋಜಕರಾದ ಸಿ.ಕೆ.ನಾಗರಾಜು ಮತ್ತು ವೈದ್ಯ ಡಾ.ಮ್ಯಾಥ್ಯು ಅವರನ್ನು ಸನ್ಮಾನಿಸಲಾಯಿತು. ಭಾರತ್ ವಿಕಾಸ್ ಪರಿಷತ್ತು ಅಧ್ಯಕ್ಷ ರಾ.ಶಿ.ಬಸವರಾಜ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಎಸ್. ಶಂಕರಪ್ಪ, ಸಮಾಜ ಸೇವಕರಾದ ಜನತಾ ನಾಗೇಶ್, ಕೆ.ಎಸ್. ರಾಜಣ್ಣ, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಐಜೂರು ಜಗದೀಶ್, ಕಣ್ವ ಶಾಖೆ ಅಧ್ಯಕ್ಷ ಗುರುಮಾದಯ್ಯ, ಸಂಚಾಲಕರಾದ ಬಿಡದಿ ಶಿವಸ್ವಾಮಿ, ಎಚ್.ವಿ. ಶೇಷಾದ್ರಿಅಯ್ಯರ್, ಆರೋಗ್ಯ ಸಂಚಾಲಕ ಬೋರಲಿಂಗಯ್ಯ, ಕಾರ್ಯದರ್ಶಿಕೆ. ಎಚ್. ಚಂದ್ರಶೇಖರಯ್ಯ, ಖಚಾಂಚಿ ಎಸ್. ವೆಂಕಟಪ್ಪ, ಕೆಂಗಲ್ ಹನುಮಂತಯ್ಯ, ಶಿಕ್ಷಕ ಸೋಮಶೇಖರ್, ಮುಖಂಡರಾದ ವನರಾಜು, ಜಗದೀಶ್, ವಿಭೂತಿಕೆರೆ ಶಿವಲಿಂಗಯ್ಯ, ಕುಮಾರ್, ಹೊನ್ನಯ್ಯ, ಮಹದೇವಯ್ಯ ಇತರರಿದ್ದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ