ರಾಜಕೀಯ ಇದ್ದಲ್ಲಿ ಗಣಿಗಾರಿಕೆ ವಿಚಾರ ಉಲ್ಭಣಿಸುತ್ತವೆ: ವಿಧಾನಸಭೆಯಲ್ಲಿ ಎಸ್ಸೆಸ್ಸೆಂ

KannadaprabhaNewsNetwork |  
Published : Mar 07, 2025, 12:45 AM ISTUpdated : Mar 07, 2025, 01:01 PM IST
ಕ್ಯಾಪ್ಷನ6ಕೆಡಿವಿಜಿ38ಬೆಂಗಳೂರಿನ ವಿಧಾನಸಭಾ ಕಲಾಪದ ಸದನದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿದರು. | Kannada Prabha

ಸಾರಾಂಶ

 ಗಣಿಗಾರಿಕೆ ವಿಚಾರದಲ್ಲಿ ರಾಜಕೀಯ ನುಸುಳಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.

 ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯೇ? ಈ ಬಗ್ಗೆ ಮಾಹಿತಿ ಇದೇಯೆ? ಇದೇ ಪ್ರಶ್ನೆಯನ್ನು ಪುನಃ ಪುನಃ ಕೇಳಲಾಗಿದ್ದು, ನಾವು ಸಹ ಅದೇ ಉತ್ತರವನ್ನು ಕೊಡುತ್ತಲೇ ಬಂದಿದ್ದೇವೆ. ಗಣಿಗಾರಿಕೆ ವಿಚಾರದಲ್ಲಿ ರಾಜಕೀಯ ನುಸುಳಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ಬೆಂಗಳೂರಿನ ವಿಧಾನಸಭಾ ಕಲಾಪದ ಸದನದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಶಾಸಕ ಐವಾನ್ ಡಿಸೋಜಾ ಅವರು ರಾಜ್ಯದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆಯೇ? ಈ ಬಗ್ಗೆ ಮಾಹಿತಿ ಇದೇಯೆ? ಎಂಬ ಪ್ರಶ್ನೆಯ ಬದಲಿಗೆ ಲಾರಿಗಳನ್ನು ತಡೆದು ದಂಡವನ್ನು ಹಾಕಲಾಗುತ್ತಿದೆ ಎಂದು ಮಾಡಿರುವ ಆರೋಪಕ್ಕೆ ಸಚಿವರು ಸ್ಪಷ್ಟನೆ ಮೂಲಕ ತಿರುಗೇಟು ನೀಡಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕೆಲಸ ನೀಡಲಾಗಿದೆ. ಇಲಾಖೆಯಲ್ಲಿನ ದಕ್ಷ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದು, ರಾಜಧನ ಸೋರಿಕೆಯನ್ನು ತಡೆಗಟ್ಟುತ್ತಿದ್ದಾರೆ. ಪ್ರಾಮಾಣಿಕವಾಗಿ ಅವರಿಗೆ ಕೆಲಸ ಮಾಡಲು ಬಿಡಬೇಕು ಎಂದು ಶಾಸಕ ಐವಾನ್ ಡಿಸೋಜಾ ಅವರಿಗೆ ಸಚಿವರು ಸಲಹೆ ನೀಡಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯ ಚಟುವಟಿಕೆ ಮೇಲೆ ರಾಜಕೀಯ ಹಸ್ತಕ್ಷೇಪ ಮಾಡಿದರೆ ಈ ರೀತಿಯ ಸಮಸ್ಯೆಗಳು ತಲೆದೋರಲಿವೆ. ರಾಜಕೀಯ ಮಾಡುವುದನ್ನು ಬಿಟ್ಟರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತವೆ. ಓನ್ ಟೈಂ ಸೆಟ್ಲ್‌ಮೆಂಟ್ ಜಾರಿಯಾದರೆ ಇನ್ನಷ್ಟು ಸಮಸ್ಯೆಗಳಿಗೆ ಪರಿಹಾರ ಲಭಿಸುವುದು ಎಂದು ಸಚಿವರು ಉತ್ತರ ನೀಡಿದರು. 

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ