ವಿಜಯೇಂದ್ರ ಗಂಡಸಾಗಿದ್ದರೆ ಭ್ರಷ್ಟಾಚಾರದ ಪಿತಾಮಹ ಅಂದ್ರೇನು ಹೇಳಲಿ: ಡಿ.ಕೆ.ಶಿವಕುಮಾರ್‌

KannadaprabhaNewsNetwork |  
Published : Aug 03, 2024, 12:35 AM IST
2ಕೆಆರ್ ಎಂಎನ್ 1.ಜೆಪಿಜಿಬಿಡದಿ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜಿಪಿಯ 21 ಭ್ರಷ್ಟ ಹಗರಣಗಳ ವಿರುದ್ಧ ಜನಾಂದೋಲನ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ವಿಜಯೇಂದ್ರ ಗಂಡಸಾಗಿದ್ದರೆ ಭ್ರಷ್ಟಾಚಾರದ ಪಿತಾಮಹ ಅಂತ ಅಂದ್ರೆ ಏನೆಂದು ಹೇಳಲಿ, ಅವನಿಗೆ ಗೌರವ ಕೊಡುತ್ತೇನೆ. ಆದರೆ, ಯಾವ ಭ್ರಷ್ಟಾಚಾರ, ಏನು ತನಿಖೆಯಾಗಿದೆ ಎಂದು ಹೇಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಮನಗರ: ವಿಜಯೇಂದ್ರ ಗಂಡಸಾಗಿದ್ದರೆ ಭ್ರಷ್ಟಾಚಾರದ ಪಿತಾಮಹ ಅಂತ ಅಂದ್ರೆ ಏನೆಂದು ಹೇಳಲಿ, ಅವನಿಗೆ ಗೌರವ ಕೊಡುತ್ತೇನೆ. ಆದರೆ, ಯಾವ ಭ್ರಷ್ಟಾಚಾರ, ಏನು ತನಿಖೆಯಾಗಿದೆ ಎಂದು ಹೇಳಬೇಕು. ಆಗ ಆತನನ್ನು ಪಾರ್ಟಿ ಅಧ್ಯಕ್ಷ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.

ಬಿಡದಿ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜಿಪಿಯ 21 ಭ್ರಷ್ಟ ಹಗರಣಗಳ ವಿರುದ್ಧ ಜನಾಂದೋಲನ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ಎಲ್ಲಾ ಆರೋಪಗಳನ್ನು ಬಿಚ್ಚಿ ಹೇಳುತ್ತೇನೆಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಯಾವ ಭ್ರಷ್ಟಾಚಾರ, ಏನು ತನಿಖೆಯಾಗಿದೆ, ಯಾವಾಗ ಆಗಿದೆ ಅಂತ ಹೇಳಬೇಕು. ನಾನು ಇಡಿ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದೆ‌. ಆಗ ನಿಮ್ಮಪ್ಪ ಇನ್ಕಮ್ ಟ್ಯಾಕ್ಸ್ ಗೆ ಅನುಮತಿ ನೀಡಿದ್ದರು. ಸುಪ್ರೀಂ ಕೋರ್ಟ್ ನಲ್ಲಿ ಇಡಿ ಕೇಸ್ ವಜಾ ಆಗಿದ್ದು ಗೊತ್ತಾ. ಇದಕ್ಕೆಲ್ಲ ಉತ್ತರ ಕೊಡುತ್ತೇನೆ ಸಮಯ ಬರಲಿ ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಮಾಡಿದ ಹಗರಣಕ್ಕೆ ಜವಾಬ್ದಾರಿ ಯಾರು? ಯಾವ ಬ್ಯಾಂಕ್‌ಗೆ ಹಣ ಹೋಗಿದೆ ಎಂಬ ಬಗ್ಗೆ ಮಾಹಿತಿ ಕೊಡಬೇಕು. ಪಾದಯಾತ್ರೆಯಲ್ಲಿ ನಾವು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ನನ್ನನ್ನು ಜೈಲಿಗೆ ಹಾಕಿಸುವ ಸಂಚು ನಡೆಯುತ್ತಿದೆ. ನಾನು ಜೈಲಿಗೆ ಹೋಗಲು ರೆಡಿ ಇದ್ದೇನೆ. ನನ್ನಂತಹ ಬೇಕಾದಷ್ಟು ಜನ ಕಾಂಗ್ರೆಸ್​​ನಲ್ಲಿ ಹುಟ್ಟಿಕೊಳ್ಳುತ್ತಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ