ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಗುರುವಾರ ನಡೆದ ಚಂದ್ರವನ ನವರಾತ್ರಿ ಉತ್ಸವದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿಯೂ ಆದಿಶಕ್ತಿಯಂತಹ ಶಕ್ತಿ ಇರುತ್ತದೆ. ಹೀಗಾಗಿ ಮಹಿಳೆಯರು ದೃಢ ಸಂಕಲ್ಪ ಕೈಗೊಂಡರೆ ಪಾರ್ವತಿಯ ಪ್ರತಿರೂಪವೇ ಆಗಿ ಗುರಿ ಮುಟ್ಟಬಹುದು ಎಂದರು.
ನಾಡಿನ ಜನರ ನೆಮ್ಮದಿ, ಸಮೃದ್ಧಿಗಾಗಿ ಸ್ವಾಮೀಜಿಗಳು ತ್ಯಾಗ ಮನೋಭಾವದಿಂದ ತಪಸ್ಸು ಆಚರಿಸುತ್ತಾರೆ. ಸ್ವಾರ್ಥ ರಹಿತವಾಗಿ ನಾಡಿನ ಜನರಿಗಾಗಿ ದೇವರಲ್ಲಿ ಪ್ರಾರ್ಥಿಸುವವರಿಗೆ ಖಂಡಿತ ಫಲ ಸಿಗಲಿದೆ. ಅನೇಕರಿಗೆ ಜ್ಞಾನವಿದ್ದರೂ ಅರ್ಧ ದಾರಿಯಲ್ಲಿಯೇ ಕಳೆದುಕೊಳ್ಳುತ್ತಾರೆ. ಸರ್ವವನ್ನೂ ತ್ಯಾಗ ಮಾಡಿದ ಸ್ವಾಮೀಜಿಗಳಷ್ಟೇ ಪೀಠದ ಮೇಲೆ ಕುಳಿತುಕೊಳ್ಳಲು ಸಾಧ್ಯ. ವೇದಿಕೆಯಲ್ಲಿರುವ ಎಲ್ಲ ಸ್ವಾಮೀಜಿಗಳೂ ಅಂತಹವರ ಸಾಲಿಗೆ ಸೇರಿದವರು ಎಂದರು.ಚಿಕ್ಕಮಗಳೂರಿನ ಗೌರಿಗದ್ದೆಯ ಅವಧೂತ ಶ್ರೀವಿನಯ್ ಗುರೂಜಿ ಮಾತನಾಡಿ, ಲೋಕದ ಒಳಿತಿಗೆ ಮಠದ ಸನ್ಯಾಸಿಯಾದವನು ಅನ್ನಯಜ್ಞ, ಜ್ಞಾನ ಯಜ್ಞ, ಆರೋಗ್ಯ ಯಜ್ಞ, ಗೋ ಯಜ್ಞ ಮತ್ತು ಪ್ರಕೃತಿ ಯಜ್ಞ ಎಂಬ ಈ ಪಂಚಯಜ್ಞಗಳನ್ನು ನೆರವೇರಿಸಬೇಕು ಎಂದರು.
ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ನಾನು ಶ್ರೀಮಠದ ಭಕ್ತ. ಅಚಲ ನಂಬಿಕೆ ಹೊಂದಿದ್ದು ಶ್ರೀಗಳು ಮತ್ತು ಆಶ್ರಮದ ಪವಾಡ ಕಂಡಿದ್ದೇನೆ. ಹೀಗಾಗಿ ಶ್ರೀಮಠದ ಪುತ್ರನಾಗಿಯೇ ನಾನು ಸೇವೆ ಮಾಡುವೆ ಎಂದರು.
ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಮಠದ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿದರು.
ಡಿಎಸ್ ಮ್ಯಾಕ್ಸ್ನ ಮಾಲೀಕ ಡಾ.ಎಸ್.ಪಿ.ದಯಾನಂದ್ ಅವರಿಗೆ ರಾಷ್ಟ್ರಮಠದ ಶ್ರೇಷ್ಠ ಕಾವೇರಿ ಪ್ರಶಸ್ತಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಕೀಲ ಡಾ.ಎಂ.ಪುಟ್ಟೇಗೌಡ ಅವರಿಗೆ ಕಾಯಕ ಸೇವಾ ಧುರೀಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಲಪ್ರತಿಭೆ ಮಾ.ಕೃತಿನ್.ಆರ್ ಅವರಿಗೆ ‘ಬಾಲಪ್ರತಿಭಾ ರತ್ನ’ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಹುಣಸೂರು ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್, ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ನಾಗಮ್ಮ ದಂಪತಿಗಳು ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ದಂಪತಿ ಸಮೇತ ಭಾಗಿ ಧಾರ್ಮಿಕ ಪೂಜಾ ಕಾರ್ಯದಲ್ಲಿ ಭಾಗಿಯಾಗುವ ಜೊತೆಗೆ ಶ್ರೀಮಠಕ್ಕೆ ಕೊಡುಗೆಯಾಗಿ ಆಗಮಿಸಿದ್ದ ರೋಬೋಟಿಕ್ ಆನೆಯನ್ನು ಲೋಕಾರ್ಪಣೆಗೊಳಿಸಿದರು.