ವಿದ್ಯೆ ಕಲಿತರೆ ಎಲ್ಲಿದ್ದರೂ ಬದುಕಬಹುದು: ಭಂಡಾರಿ ಶ್ರೀನಿವಾಸ್

KannadaprabhaNewsNetwork |  
Published : Apr 22, 2025, 01:45 AM IST
20ಕೆಕೆಡಿಯು1. | Kannada Prabha

ಸಾರಾಂಶ

ಕಡೂರು, ಯಾವುದೇ ವ್ಯಕ್ತಿ ವಿದ್ಯೆ ಕಲಿತಿದ್ದರೆ ಎಲ್ಲಾದರೂ ಜೀವನ ಮಾಡಲು ಸುಲಭವಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಮಲ್ಲೇಶ್ವರದಲ್ಲಿರುವ ಚಕ್ರವರ್ತಿ ಪಿಯು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕಡೂರು

ಯಾವುದೇ ವ್ಯಕ್ತಿ ವಿದ್ಯೆ ಕಲಿತಿದ್ದರೆ ಎಲ್ಲಾದರೂ ಜೀವನ ಮಾಡಲು ಸುಲಭವಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು. ತಾಲೂಕಿನ ಮಲ್ಲೇಶ್ವರದಲ್ಲಿರುವ ಚಕ್ರವರ್ತಿ ಪಿಯು ಕಾಲೇಜಿನ ಆಡಳಿತ ಮಂಡಳಿ ಬಾಬು ಜಗಜೀವನ ರಾಂ ಭವನದಲ್ಲಿ ಆಯೋಜಿಸಿದ್ದ ಪೇರ್‍ವೆಲ್ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರು ಹಾಗೂ ಕೂಲಿ ಕಾರ್ಮಿಕ ವರ್ಗದವರು ಮಕ್ಕಳ ಶಿಕ್ಷಣಕ್ಕೆ ಮೊದಲ ಅಧ್ಯತೆ ನೀಡುತ್ತಿದ್ದು ಉತ್ತಮ ಗುಣಮಟ್ಟದ ಕಾಲೇಜುಗಳನ್ನು ಆಯ್ಕೆ ಮಾಡಿ ಕೊಳ್ಳುತ್ತಾರೆ. ಮಕ್ಕಳು ನಮ್ಮಂತೆ ಕಷ್ಟಪಡುವುದು ಬೇಡ. ಹಣ ಎಷ್ಟಾದರೂ ಪರವಾಗಿಲ್ಲ ಎಂದು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಪೋಷಕರ ಆಸೆಗಳನ್ನು ವಿದ್ಯಾರ್ಥಿಗಳು ನಿರಾಸೆ ಮಾಡದೆ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ಮಾಡಿದರು. ಕೇವಲ ಸರ್ಕಾರಿ ನೌಕರಿಗಾಗಿ ಕಲಿಕೆ ಮಾಡುವುದು ಬೇಡ. ಕಲಿತು ಪದವಿ ಪಡೆದು ದೇಶದ ಉತ್ತಮ ಪ್ರಜೆಗಳಾಗಿ ಜೀವನ ನಡೆಸಿದರೆ ಅದೇ ಸಾರ್ಥಕವಾಗುತ್ತದೆ. ಕಲಿತ ಶಿಕ್ಷಣ ನಿಮ್ಮ ಜೀವನದ ಪಾಠ ಕಲಿಸುತ್ತದೆ. ತಾವು ಕೂಡ ರೈತನ ಮಗ ನಾಗಿದ್ದು ಬಡ ಕುಟುಂಬದಿಂದ ಬರುವ ಮೂಲಕ ನಾಲ್ಕು ಭಾರಿ ಪುರಸಭೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಪಟ್ಟಣದ ಬಡ ಮತ್ತು ದಲಿತ ಮಕ್ಕಳೇ ಹೆಚ್ಚಾಗಿರುವ ಸರ್ಕಾರಿ ಶಾಲೆಯನ್ನು ದತ್ತು ಪಡೆವ ಮೂಲಕ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದರು.

ತಾವು ಚಕ್ರವರ್ತಿ ಪಿಯು ಕಾಲೇಜು ಆಡಳಿತ ಮಂಡಳಿ ಜೊತೆ ನಿಕಟ ಸಂಭಂದ ಹೊಂದಿದ್ದು ಅವರು ಉತ್ತಮ ಆಡಳಿತ ನೀಡಿ ಮಕ್ಕಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಿರುವುದನ್ನು ಅಭಿನಂದಿಸುತ್ತೇನೆ ಎಂದರು.ಸಾಹಿತಿ ಚಟ್ನಹಳ್ಳಿ ಮಹೇಶ್ ಉಪನ್ಯಾಸ ನೀಡಿ, ವಿದ್ಯಾರ್ಥಿ ಜೀವನ ಸುವರ್ಣ ಜೀವನ ಆಗಿರುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಇದನ್ನು ಅರಿತು ಪೋಷಕರು ಮತ್ತು ಕಲಿಸಿದ ಗುರುಗಳಿಗೆ ಹೆಸರು ತರುವಂತೆ ಕಲಿಯಬೇಕು. ವಿದ್ಯೆ ಹೆಚ್ಚಾದಂತೆ ಸಂಭಂದಗಳು ದೂರಾಗುತ್ತಿರುವುದು ವಿಪರ್ಯಾಸದ ಸಂಗತಿ. ಭವಿಷ್ಯದ ಪ್ರಜೆಗಳಾದ ನೀವು ನಮ್ಮ ಸಂಸ್ಕಾರಗಳು, ಸಂಭಂದಗಳನ್ನು ಗಟ್ಟಿಗೊಳಿಸಲು ಸಂಪರ್ಕ ಸೇತುವೆಗಳಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಸಮನ್ವಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ಪಿ.ರಾಘವೇಂದ್ರ, ಸಮಿತಿ ಸದಸ್ಯರಾದ ನಟರಾಜ್, ನಾಗೇಂದ್ರ, ಪರಮೇಶ್ವರಪ್ಪ ಹಾಗೂ ಪ್ರಾಚಾರ್ಯ ರುದ್ರೇಶ್ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯು ಪೂರ್ಣಗೊಳಿಸಿ ಮುಂದಿನ ವಿದ್ಯಾಬ್ಯಾಸಕ್ಕೆ ತೆರಳಿದ ವಿದ್ಯಾರ್ಥಿಗಳಿಗೆ ಬೀಳ್ಕೊಟ್ಟು ಮತ್ತು ನೂತನವಾಗಿ ಮೊದಲ ಪಿಯುಗೆ ಸೇರುವ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆದವು. ಆನಂತರ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.20ಕೆಕೆಡಿಯು1.ಕಡೂರು ಮಲ್ಲೇಶ್ವರದ ಚಕ್ರವರ್ತಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಪೇರ್‍ವೆಲ್ ಪಾರ್ಟಿ ಕಾರ್ಯಕ್ರಮವನ್ನು ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು. ಸಾಹಿತಿ ಚಟ್ನಹಳ್ಳಿ ಮಹೇಶ್, ಅಧ್ಯಕ್ಷ ಪ್ರಕಾಶ್, ಕೆ.ಪಿ.ರಾಘವೇಂದ್ರ, ನಟರಾಜ್ ಮತ್ತಿತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...