ಧ್ವನಿ ಎತ್ತಿದವರ ಮನೆಗೆ ಹೋಗಿ ಬಂದರೆ ಎಲ್ಲವೂ ಸರಿಯಾಗಲ್ಲ

KannadaprabhaNewsNetwork |  
Published : Nov 29, 2023, 01:15 AM IST
ಜಗದೀಶ ಶೆಟ್ಟರ. | Kannada Prabha

ಸಾರಾಂಶ

ಯಾರು ಪಕ್ಷದ ವಿರುದ್ಧ ಧ್ವನಿ ಎತ್ತುತ್ತಾರೋ ಅವರ ಮನೆಗೆ ಹೋಗಿ ಬಂದರೆ ಎಲ್ಲವೂ ಸರಿಯಾಗುವುದಿಲ್ಲ ಎಂಬುದನ್ನು ಬಿಜೆಪಿಯ ವರಿಷ್ಠರು ಅರಿತುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ್‌ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಯಾರು ಪಕ್ಷದ ವಿರುದ್ಧ ಧ್ವನಿ ಎತ್ತುತ್ತಾರೋ ಅವರ ಮನೆಗೆ ಹೋಗಿ ಬಂದರೆ ಎಲ್ಲವೂ ಸರಿಯಾಗುವುದಿಲ್ಲ ಎಂಬುದನ್ನು ಬಿಜೆಪಿಯ ವರಿಷ್ಠರು ಅರಿತುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ್‌ ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಇಂದು ರಿಪೇರಿ ಮಾಡಲಾಗದಷ್ಟು ದುಸ್ಥಿತಿಗೆ ತಲುಪಿದೆ. ಯಾರೇ ಅಧ್ಯಕ್ಷರಾದರೂ ಅದನ್ನು ರಿಪೇರಿ ಮಾಡಲು ಆಗುವುದಿಲ್ಲ. ಅರವಿಂದ ಲಿಂಬಾವಳಿ, ವಿ. ಸೋಮಣ್ಣ ಸೇರಿದಂತೆ ಹಲವರು ಅಸಮಾಧಾನದ ಧ್ವನಿ ಎತ್ತಿದ್ದಾರೆ. ಯಾರು ಪಕ್ಷದ ವಿರುದ್ಧ ಧ್ವನಿ ಎತ್ತುತ್ತಾರೆಯೇ ಅವರ ಮನೆಗೆ ಭೇಟಿ ನೀಡಿ ಬಂದರೆ ಎಲ್ಲವೂ ಸರಿಯಾಗುತ್ತೆ ಎಂದುಕೊಂಡಿರುವುದು ತಪ್ಪು. ಸ್ವತಃ ಬಿಜೆಪಿ ಕಾರ್ಯಕರ್ತರೇ ನನ್ನ ಬಳಿ ಬಂದು ನೋವು ಹೊರ ಹಾಕುತ್ತಿದ್ದಾರೆ. ತಮ್ಮದು ಲೀಡರ್ ಲೆಸ್ ಪಾರ್ಟಿ ಅಂತ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದರು.

ಎಲ್ಲರ ಅಭಿಪ್ರಾಯ ಪಡೆಯಲಿ:

ರಾಜ್ಯ ಸರ್ಕಾರ ಜಾತಿ ಗಣತಿ‌ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಪಡೆಯಬೇಕು. ಅದರಲ್ಲಿ ಇರುವ ನ್ಯೂನತೆ ಹೊರಹಾಕುವ ಪ್ರಯತ್ನ ಮಾಡಬೇಕು. ಎಲ್ಲ ವರ್ಗದ ಪ್ರಮುಖರನ್ನು ಕರೆದು ಮಾತನಾಡುವ ಅವಶ್ಯಕತೆಯಿದೆ ಎಂದರು.

ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ. ಬಿಜೆಪಿ ಈಡಿ ಮತ್ತು ಐಟಿ ಮೂಲಕ ರಾಜಕೀಯ ಮಾಡುತ್ತಿದೆ. ವಿಪಕ್ಷಗಳು ಇರಲೇ ಬಾರದು ಎನ್ನುವುದು ಬಿಜೆಪಿ ಚಿಂತನೆ. ಈಗ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಸೇರ್ಪಡೆ ಸುಳ್ಳುಸುದ್ದಿ:

ಜಗದೀಶ ಶೆಟ್ಟರ ಮತ್ತೆ ಬಿಜೆಪಿ ಸೇರುತ್ತಾರೆ ಎಂಬುದು ಶುದ್ಧ ಸುಳ್ಳು. ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಪಕ್ಷ ಬಿಟ್ಟು ಹೋಗುತ್ತಿರುವವರನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಚುನಾವಣಾ ಸಮಯದಲ್ಲಿ ಇನ್ನೂ ಏನೇನು ಆಗುತ್ತೆ ಕಾದು ನೋಡಿ ಎಂದರು.

ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಪ್ರಾಮಾಣಿಕವಾಗಿ ತನಿಖೆ ನಡೆಸಲಾಗುತ್ತಿದೆ. ಎಲ್ಲರ ಮೇಲೆ ಸೂಕ್ತ ಕ್ರಮವಾಗಲಿ ಎಂದರು.

ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಿದ ಬಗ್ಗೆ ನೋಟಿಸ್ ನೀಡಲಾಗಿದೆ. ಕಾಂಗ್ರೆಸ್ ತನ್ನ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಿದೆ. ಇದರಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ. ನೀತಿ ಸಂಹಿತೆ ಉಲ್ಲಂಘನೆ ಎಂದು ತೆಲಂಗಾಣ ರಾಜ್ಯ ಸರ್ಕಾರ ನೋಟಿಸ್ ನೀಡುವ ಅಗತ್ಯ ಇಲ್ಲ. ಇದನ್ನು ಚುನಾವಣಾ ಆಯೋಗ ಗಮನಿಸಬೇಕು ಎಂದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ