ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ.ಕೆ.ಎ.ರಾಜಣ್ಣಗೆ ಬೀಳ್ಕೂಡುಗೆ
ಶ್ರದ್ಧೆ ಮತ್ತು ಇಚ್ಛಾಶಕ್ತಿಯಿದ್ದಲ್ಲಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು. ಶನಿವಾರ ಕಡೂರು ಪಟ್ಟಣದ ಹೆರಿಟೇಜ್ ಕಲ್ಯಾಣಮಂದಿರದಲ್ಲಿ ಕಡೂರು ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎ.ರಾಜಣ್ಣ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮ ಗಟ್ಟಿ ನಿರ್ಧಾರದಿಂದ ರಾಜಣ್ಣ ಕಡೂರು ಕಾಲೇಜನ್ನು ಹಂತ ಹಂತವಾಗಿ ಬೆಳೆಸಿ ವಿದ್ಯಾರ್ಥಿಗಳ ನೆಚ್ಚಿನ ಅದ್ಯಾಪಕರಾಗಿ ಹೆಸರು ಪಡೆದಿದ್ದಾರೆ. ಅವರ ಒಡನಾಟದಿಂದ ನನಗೂ ಕಾಲೇಜಿನ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಅಭಿವೃದ್ಧಿಗೆ ರಾಜ್ಯದ 50 ಕಾಲೇಜುಗಳಲ್ಲಿ ರಾಜಣ್ಣನವರ ಮುುತುವರ್ಜಿಯಿಂದ ನಮ್ಮ ಕಡೂರು ಕಾಲೇಜು 20ನೇ ಸ್ಥಾನ ದಲ್ಲಿದೆ. ಪಟ್ಟಣದಲ್ಲಿ ಅರಣ್ಯಇಲಾಖೆಯಿಂದ ಪಡೆದ 20 ಎಕರೆಯಲ್ಲಿ 10 ಎಕರೆ ಪದವಿ ಕಾಲೇಜಿಗೆ, 5 ಎಕರೆಯಲ್ಲಿ ತಾಯಿ ಮಗು ಆಸ್ಪತ್ರೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ ಎಂದರು.ಬಡತನದಲ್ಲಿ ಬೆಳೆದು ಬಂದ ಡಾ. ರಾಜಣ್ಣನವರಿಗೆ ಕಷ್ಟ ಸುಖಗಳ ಅರಿವಿದ್ದು ಬಡ ಮಕ್ಕಳಿಗೆ ತಮ್ಮ ಕೈಲಾದ ರಿಯಾಯಿತಿ ನೀಡಿದ್ದಾರೆ. ಸಿ.ಎಂ.ಆಗಿದ್ದ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆಯವರು ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪಂಚನ ಹಳ್ಳಿಯಲ್ಲಿ ಇಳಿದಾಗ ಅದರ ನೆನಪಾಗಿ ಹೆಗಡೆಯವರು ಡಿಗ್ರಿ ಕಾಲೇಜು ಮಂಜೂರು ಮಾಡಿದ್ದು ಇತಿಹಾಸ.
ಚಿಕ್ಕಮಗಳೂರು ಶಾಸಕ ಎಚ್. ಡಿ.ತಮ್ಮಯ್ಯ ಮಾತನಾಡಿ ರಾಜಣ್ಣ ತಮ್ಮ ವೃತ್ತಿಯಿಂದ ಮಾತ್ರ ನಿವೃತ್ತಿಯಾಗಿದ್ದಾರೆ ಹೊರತು ಪ್ರವೃತ್ತಿಯಿಂದ ಅಲ್ಲ. ತಮ್ಮ 34 ವರ್ಷಗಳ ಕಾಲದ ವೃತ್ತಿ ನಿರ್ವಹಿಸಿ ಐಡಿಎಸ್ ಜಿ ಕಾಲೇಜಿನಲ್ಲೂ ಪ್ರಾಂಶು ಪಾಲರಾಗಿ ದಕ್ಷ ಆಡಳಿತರಾಗಿಯೂ ಕಾರ್ಯ ನಿರ್ವಹಿಸಿ, ಕಡೂರಲ್ಲೂ ಉತ್ತಮ ಸೇವೆ ಸಲ್ಲಿಸಿದ್ದಾರೆ.
ಸಾನಿಧ್ಯ ವಹಿಸಿದ್ದ ಹೊಸದುರ್ಗದ ಶ್ರೀ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜಕ್ಕೆ ನನ್ನ ಸೇವೆ ಏನೆಂದು ನಾವೇ ಪ್ರಶ್ನೆ ಹಾಕಿಕೊಂಡು ನೋಡುವ ಮೂಲಕ ಸಮಾಜದ ಋುಣ ತೀರಿಸಬೇಕು .ಶ್ರದ್ದೆ ಇದ್ದಲ್ಲಿ ಎಲ್ಲವೂ ಸಾಧ್ಯ. ಅವರ ಸೇವೆ ಈ ಸಮಾಜಕ್ಕೆ ಮುಂದುವರಿಯಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ವಿಪ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ರಾಜಣ್ಣನವರ ಉತ್ತಮ ಸ್ನೇಹದಿಂದ ನಗು ಮುಖದಿಂದ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ಒಳ್ಳೇ ಹೆಸರು ಪಡೆದು ಸಿದ್ದರಾಮಯ್ಯನವರ ಪ್ರಶಂಸೆಗೂ ಪಾತ್ರರಾದವರು. ಮುಂದಿನ ಅವರ ಜೀವನ ಸಂತಸದಿಂದ ಇರಲಿ ಎಂದು ಹಾರೈಸಿದರು.
27ಕೆಕೆಡಿಯು2. ಕಡೂರು ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎ.ರಾಜಣ್ಣ ನವರ ಬೀಳ್ಕೊಡುಗೆ ಕಾರ್ಯಕ್ರಮ ದಲ್ಲಿ ಶಾಸಕರಾದ ಕೆ ಎಸ್. ಆನಂದ್, ಎಚ್.ಡಿ.ತಮ್ಮಯ್ಯ, ಗಾಯತ್ರಿ ಶಾಂತೇಗೌಡ ಮತ್ತಿತರರು ಇದ್ದರು.