ಕನ್ನಡಪ್ರಭ ವಾರ್ತೆ, ಚಾಮರಾಜನಗರ
ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಖೋಖೋ ಪಂದ್ಯಾವಳಿಯಲ್ಲಿ ತಂಡವನ್ನು ಗೆಲ್ಲಿಸಿದ ತಾಲೂಕಿನ ಸಿದ್ದಯನಪುರ ಗ್ರಾಮದ ಕ್ರೀಡಾಪಟು ಚಂದನ್ ಅವರನ್ನು ಅವರ ಹುಟ್ಟೂರಿನಲ್ಲಿ ಸನ್ಮಾನಿಸಿ ಮಾತನಾಡಿದರು.
ಗುರಿ ಸಾಧನೆಗೆ ಬಡತನ ಸಿರಿತನ ಯಾವುದೂ ಅಡ್ಡಿಬರಲ್ಲ ಮುಂದೆ ಗುರಿ ಹಿಂದೆ ಗುರು ಇದ್ದರೆ ಯಶಸ್ಸು ಸಿಗಲಿದೆ. ಇದಕ್ಕೆ ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ತಂಡದ ಜಯಕ್ಕೆ ಕಾರಣವಾಗಿ ಗಮನಾರ್ಹ ಸಾಧನೆ ಮಾಡಿದ ಚಂದನ್ ಒಂದು ಸ್ಪಷ್ಟ ಉದಾರಣೆ ಎಂದರು. ಕ್ರೀಡೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಹಾಗೆಯೇ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು ಇಂತಹ ಪ್ರತಿಭೆಗಳಿಗೆ ಸರ್ಕಾರ ಹಾಗೂ ಸಂಬಂಧ ಪಟ್ಟ ಇಲಾಖೆಗಳು ಪ್ರೋತ್ಸಾಹ ಹಾಗೂ ಉತ್ತಮ ತರಪೇತಿ ನೀಡಿದರೆ ಇನ್ನಷ್ಟು ಸಾಧಿಸಲು ಸಹಾಯಕ ವಾಗುತ್ತದೆ ಎಂದರು ಯುವಕರು ನಾಯಕತ್ವ ಗುಣ ಪಡೆಯಲು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿ ಕೊಳ್ಳಲು ಚಂದನ್ ಇತರರಿಗೆ ಸ್ಪೂರ್ತಿಯಾಗಿದ್ದಾನೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದನ್, ನನ್ನ ಇಂದಿನ ಸಾಧನೆಗೆ ನನ್ನ ಕುಟುಂಬ ಶಾಲೆಯ ಶಿಕ್ಷಕರು ಗ್ರಾಮಸ್ಥರ ಪ್ರೋತ್ಸಾಹ ಕಾರಣ. ಇದೇ ಪ್ರೋತ್ಸಾಹ ಮುಂದುವರಿದರೆ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಿ ದೇಶ ರಾಜ್ಯ ಜಿಲ್ಲೆ ಹುಟ್ಟೂರಿಗೆ ಹೆಸರು ತರುತ್ತೇನೆ. ಜಿಲ್ಲಾಡಳಿತ ಕ್ರೀಡಾ ಇಲಾಖೆ ಸಂಘ ಸಂಸ್ಥೆಗಳು ನನ್ನ ಸಾಧನೆಯನ್ನು ಮೆಚ್ಚಿ ಗೌರವಿಸುತ್ತಿರುವುದು ನನ್ನ ಜವಾಬ್ದಾರಿ ಯನ್ನು ಹೆಚ್ಚಿಸಿದೆ ಎಂದರು.
ಗ್ರಾಮದ ಮುಖಂಡರಾದ ಎಸ್ ಆರ್ ಗೋವಿಂದರಾಜು, ಹನುಮಂತು, ನೀರು ಬಳಕೆ ದಾರರ ಸಂಘದ ಅಧ್ಯಕ್ಷ ಗೋವಿಂದರಾಜು, ಗ್ರಾಮದ ಯಜಮಾನರುಗಳಾದ ಚನ್ನಂಜಯ್ಯ, ಮಲ್ಲಿಕಾರ್ಜುನ, ಚಿನ್ನಸ್ವಾಮಿ, ಮುಖಂಡರಾದ ಸೋಮಣ್ಣ, ಮಾಜಿ ಗ್ರಾಪಂ ಉಪಾಧ್ಯಕ್ಷ ನಂಜುಂಡಸ್ವಾಮಿ, ಚಂದನ್ ಅವರ ತಂದೆ ಪ್ರಕಾಶ್, ತಾಯಿ ಶೋಭಾ ಹಾಗೂ ಗ್ರಾಮಸ್ಥರು ಹಾಜರಿದ್ದರು.