ಧರ್ಮ ಕುರಿತು ಮಾತನಾಡುವ ರಾಜಕಾರಣಿ ಅಲಕ್ಷಿಸಿ: ಡಾ.ಬಸವ ಮರುಳಸಿದ್ಧ ಸ್ವಾಮೀಜಿ

KannadaprabhaNewsNetwork |  
Published : Sep 15, 2024, 01:56 AM IST
ಪೋಟೋ: 14ಎಸ್‌ಎಂಜಿಕೆಪಿ02ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಗುರುವಾರ ಸೌಹಾರ್ದವೇ ಹಬ್ಬದ ನಿಮಿತ್ತ ಶಾಂತಿ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ರಾಜಕಾರಣಿಗಳು ಧರ್ಮದ ಬಗ್ಗೆ ಮಾತನಾಡಬಾರದು. ಧರ್ಮದ ಬಗ್ಗೆ ಮಾತನಾಡದಿರೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರಲಿದೆ ಎಂದು ಬಸವ ಕೇಂದ್ರದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಧರ್ಮ ಕುರಿತು ಮಾತನಾಡುವ ರಾಜಕಾರಣಿಗಳನ್ನು ಉದಾಸೀನ ಮಾಡಬೇಕು ಎಂದು ಬಸವ ಕೇಂದ್ರ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ನಗರದ ಸೈನ್ಸ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸೌಹಾರ್ದವೇ ಹಬ್ಬದ ನಿಮಿತ್ತ ಶಾಂತಿ ಮೆರವಣಿಗೆಯಲ್ಲಿ ಅವರು ಮಾತನಾಡಿ, ರಾಜಕಾರಣಿಗಳು ಧರ್ಮದ ಬಗ್ಗೆ ಮಾತನಾಡಬಾರದು. ಧರ್ಮದ ಬಗ್ಗೆ ಮಾತನಾಡದಿರೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರಲಿದೆ. ರಾಜಕಾರಣಿಗಳ ಮಾತುಗಳನ್ನು ಜನರೂ ಉದಾಸಿನ ಮಾಡಬೇಕು ಎಂದು ಸಲಹೆ ನೀಡಿದರು.

ನಮ್ಮ ಧರ್ಮಗಳ ಆಚರಣೆಗೆ ತಮ್ಮ ಮನೆಗಳಿಗೆ ಸೀಮಿತವಾಗಿರಬೇಕು. ಅದನ್ನು ಹೊರಗೆ ತಂದರೆ ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತದೆ. ಕೋಮುಗಲಭೆಯಾದರೆ ಬಡವರು, ಕೂಲಿ ಕಾರ್ಮಿಕರು ದುಡಿಯುವ ವರ್ಗಕ್ಕೆ ತೊಂದರೆ ಆಗಲಿದೆ ಎಂದರು.

ಜಾಮೀಯಾ ಮಸೀದಿ ವೌಲಾನ ಹಕೀಲ್ ಅಹಮ್ಮದ್ ಮಾತನಾಡಿ, ಭಾರತದಲ್ಲಿ ಸರ್ವರಿಗೂ ಸ್ವಾತಂತ್ರ್ಯ ಸಿಕ್ಕಿದ್ದು ನಮ್ಮ ಸಂಸ್ಕೃತಿಯನ್ನು ನಾವೇ ಉಳಿಸಬೇಕು. ಶಿವಮೊಗ್ಗದ ಹೆಸರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯಬೇಕು. ಅದು ಸೌಹಾರ್ದಯುತ ವಾಗಿರಬೇಕೋ ವಿನಃ ಕೋಮುಗಲಭೆಯಿಂದಲ್ಲ ಎಂದರು.

ಮೌಲಾನ ಶಾಹುಲ್ ಹಮೀದ್ ಮಾತನಾಡಿ, ಮಸೀದಿ, ದೇವಸ್ಥಾನ ಅಥವಾ ಚರ್ಚ್‍ಗಳಿಗೆ ಹೋಗಿ ಕೈಮುಗಿದು ಪ್ರಾರ್ಥನೆ ಮಾಡುವುದು ಮಾತ್ರ ಸೌಹಾರ್ದತೆಯಲ್ಲ. ಎಲ್ಲ ಧರ್ಮಗಳ ಆಚರಣೆಗಳನ್ನು ಗೌರವಿಸುವುದು ನಿಜವಾದ ಸೌಹಾರ್ದತೆ. ಶಿವಮೊಗ್ಗ ಜಿಲ್ಲೆ ಶಾಂತಿಗೆ ಹೆಸರಾಗಿದೆ. ಈ ಜಿಲ್ಲೆಯಲ್ಲಿ ಮತೀಯ ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು. ನಾವೆಲ್ಲರೂ ಪ್ರೀತಿಯಿಂದ ಬದುಕಬೇಕು. ನಮ್ಮವರನ್ನು ಶಾಂತಿ ಪ್ರಿಯರನ್ನಾಗಿ ಮಾಡಬೇಕು ಎಂದು ಹೇಳಿದರು.

ಎಸ್‍ಎಂಎಸ್‍ಎಸ್‍ಎಸ್‍ನ ಕಾರ್ಯದರ್ಶಿ ಡಾ.ಕ್ಲಿರ್ಡ್ ರೋಶನ್ ಪಿಂಟೊ ಮಾತನಾಡಿ, ಮಾನವಿಯ ವೌಲ್ಯಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಸಹೋದರತ್ವ ಭಾವನೆ ಇರಬೇಕು. ಎಲ್ಲರೂ ಹಬ್ಬಗಳನ್ನು ಒಟ್ಟಾಗಿ ಶಾಂತಿಯಿಂದ ಅಚರಣೆ ಮಾಡಬೇಕು. ಆಗ ಸೌಹಾರ್ದತೆಗೆ ಅರ್ಥ ಬರಲಿದೆ. ಕೋಮುಗಲಭೆಗಳು ಜಿಲ್ಲೆಗೆ ಕೆಟ್ಟ ಹೆಸರು ತಂದುಕೊಡಲಿವೆ ಎಂದು ಆಶಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ್ ಸ್ವಾಮೀಜಿ ಮಾತನಾಡಿ, ರಾಮಾಯಣ, ಖುರಾನ್, ಬೈಬಲ್‌ಗಳ ಮೊದಲ ಸಾಲಿನಲ್ಲೇ ಸೌಹಾರ್ದತೆ ಕಾಣಬಹುದು. ವಿಶಿಷ್ಟತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದು. ವೈಮನಸ್ಸುಗಳನ್ನು ಬೇರು ಮಟ್ಟದಿಂದಲೇ ಕಿತ್ತೊಗೆದು ಶಿವಮೊಗ್ಗವನ್ನು ಇಡೀ ದೇಶದಲ್ಲಿ ಮಾದರಿ ಜಿಲ್ಲೆಯಾಗಿ ಹೆಸರು ಗಳಿಸುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆ ಶಾಂತಿಯನ್ನು ಕಾಣುವಂತಾಗಬೇಕು ಎಂದರು.

ಜಡೆಮಠದ ಶ್ರೀ ಮಹಾಂತ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಸ್ವಾಮೀಜಿ,ಸೌಹಾರ್ದ ಹಬ್ಬದ ಪ್ರಮುಖರಾದ ಎಚ್.ಆರ್.ಬಸವರಾಜಪ್ಪ, ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ಫಾದರ್ ಪಿಯುಸ್ ಡಿಸೋಜ ಸೇರಿ ನೂರಾರು ಸಮಾನ ಮನಸ್ಕರು ಪಾಲ್ಗೊಂಡಿದ್ದರು.ಶಾಂತಿ ಮೆರವಣಿಗೆ ಡಿಸಿ ಚಾಲನೆ

ನಗರದ ಸಿಮ್ಸ್ ಆವರಣದಿಂದ ಸೈನ್ಸ್ ಮೈದಾನದವರೆಗೆ ಶಾಂತಿ ಮೆರವಣಿಗೆ ಸೈನ್ಸ್ ಮೈದಾನದವರೆಗೆ ನಡೆಯಿತು. ಶಾಂತಿ ಮೆರವಣಿಗೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮತ್ತು ಎಸ್‍ಪಿ ಜಿ.ಕೆ.ಮಿಥುನ್‍ಕುಮಾರ್ ಸಿಮ್ಸ್ ಆವರಣದಲ್ಲಿ ಚಾಲನೆ ನೀಡಿದರು. ಶಾಂತಿ ನಡಿಗೆಯು ಅಶೋಕ ವೃತ್ತ, ಬಿ.ಎಚ್.ರಸ್ತೆ, ಆಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘದ ಮಾರ್ಗವಾಗಿ ಸೈನ್ಸ್ ಮೈದಾನ ತಲುಪಿತು. ಎಲ್ಲ ಧರ್ಮದ ಧರ್ಮಗುರು, ವಿವಿಧ ಸಂಘಟನೆಗಳ ಮುಖಂಡರು, ಪ್ರಗತಿಪರರು, ಸಾಮಾಜಿಕ ಹೋರಾಟಗಾರರು, ಸಾರ್ವಜನಿಕರು ಸೌಹಾರ್ದ ಹಬ್ಬಕ್ಕೆ ಹೆಜ್ಜೆ ಹಾಕಿದರು.

--------------------

ಪೋಟೋ: 14ಎಸ್‌ಎಂಜಿಕೆಪಿ02

ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಗುರುವಾರ ಸೌಹಾರ್ದವೇ ಹಬ್ಬದ ನಿಮಿತ್ತ ಶಾಂತಿ ಮೆರವಣಿಗೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ