ಕನ್ನಡಪ್ರಭ ವಾರ್ತೆ ಮಂಡ್ಯ
ಈ ಸ್ಥಳದಲ್ಲಿ ಹುಕ್ಕಾಬಾರ್‌ಗೆ ೨೦೨೨ರಲ್ಲಿ ಅನುಮತಿ ಪಡೆದಿದ್ದು, ೨೦೨೪ರಲ್ಲಿ ಹುಕ್ಕಾ ಬಾರ್‌ಗೆ ಸರ್ಕಾರ ನಿಷೇಧ ಹೇರಿದ್ದರೂ ಅಕ್ರಮವಾಗಿ ಹುಕ್ಕಾ ಬಾರ್ ನಡೆಸಲಾಗುತ್ತಿದೆ. ಇದನ್ನು ಗಮನಿಸಿದ ಅಪ್ರಾಪ್ತ ಬಾಲಕರು ಕಳವು ಮಾಡಿರುವುದು ಅಲ್ಲಿನ ಸಿಸಿಟಿವಿ ದೃಶ್ಯಗಳಿಂದ ಬಹಿರಂಗಗೊಂಡಿತ್ತು. ಈಗ ಅಪ್ರಾಪ್ತನೊಬ್ಬ ಹುಕ್ಕಾ ಸೇವನೆ ಮಾಡುತ್ತಿರುವ ವಿಡಿಯೋಗಳು ಹರಿದಾಡುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಕರಣ ನಡೆದ ಸ್ಥಳವು ಗೋಮಾಳವಾಗಿದ್ದು, ಇದನ್ನು ಯಾವುದೇ ರೀತಿಯಲ್ಲಿ ವಾಣಿಜ್ಯ ವಹಿವಾಟಿಗೆ ನೀಡಲು ಅವಕಾಶವಿಲ್ಲದಿದ್ದರೂ ಬೂದನೂರು ಗ್ರಾಪಂ ಪಿಡಿಒ ಸದಸ್ಯರ ಒತ್ತಾಯದ ಮೇರೆಗೆ ಅನುಮತಿ ನೀಡಿದ್ದಾರೆ. ಅದಲ್ಲದೇ, ಈ ಪ್ರಕರಣ ಹೊರತಂದವರ ವಿರುದ್ಧವೇ ದೂರು ದಾಖಲಿಸುವಂತಹ ಘಟನೆಗಳು ನಡೆದಿವೆ ಎಂದು ದೂಷಿಸಿದರು.ಹುಕ್ಕಾಬಾರ್ ವಿಷಯವಾಗಿ ದಾಖಲೆಗಳನ್ನು ತಿರುಚುವ ಕೆಲಸವಾಗುತ್ತಿದೆ. ಸಂಬಂಧಿತ ಇಲಾಖೆಗಳು ತಮ್ಮ ವೈಪಲ್ಯವನ್ನು ಮುಚ್ಚಿಹಾಕಲು ಪ್ರಯತ್ನ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ವೈಫಲ್ಯವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಪ್ರಕರಣ ಸಂಬಂಧ ವೈಫಲ್ಯ ತೋರಿದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಬೂದನೂರು ಗ್ರಾಪಂ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು. ತತ್‌ಕ್ಷಣ ಅಪ್ರಾಪ್ತ ಬಾಲಕರ ಮೊಬೈಲ್ ವಶಕ್ಕೆ ಪಡೆಯಬೇಕು. ಹೆಚ್ಚಿನ ಮಟ್ಟದ ತನಿಖೆ ಮಾಡಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಅಂಬೇಡ್ಕರ್ ವಾರಿಯರ್ಸ್‌ನ ರಾಜ್ಯಾಧ್ಯಕ್ಷ ಗಂಗರಾಜು, ಕರಾವೆ(ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಜಯರಾಮ್, ಸುನೀಲ್, ಕುಳ್ಳ ಇದ್ದರು.