ಅಕ್ರಮ ರೀಫಿಲಿಂಗ್: 140 ಸಿಲಿಂಡರ್‌ ವಶ

KannadaprabhaNewsNetwork | Published : May 24, 2024 12:54 AM

ಸಾರಾಂಶ

ಕೆಜಿಎಫ್‌ನ ಕುಪ್ಪಂ ಮುಖ್ಯ ರಸ್ತೆಯ ರಷೀದ್‌ ಖಾನ್‌ ಎಂಬುವರಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ರೀಫಿಲಿಂಗ್ ದಂದೆ ನಡೆಯುತ್ತಿರುವ ಕುರಿತು ಮಾಧ್ಯಮದಲ್ಲಿ ಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಪೊಲೀಸರ ಸಹಕಾರೊಂದಿಗೆ ದಾಳಿ ನಡೆಸಿತು.

ಕನ್ನಡಪ್ರಭ ವಾರ್ತೆ ಕೆಜಿಎಫ್ ಕೆಜಿಎಫ್ ನಗರದಲ್ಲಿ ನಡೆಯುತ್ತಿದ್ದ ಬೃಹತ್ ಗೃಹ ಬಳಕೆ ಸಿಲಿಂಡರ್‌ಗಳ ರೀಫಿಲಿಂಗ್ ದಂಧೆಯ ಅಡ್ಡೆಯ ದಾಳಿ ನಡೆಸಿದ ಅಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ೮೦ ವಾಣಿಜ್ಯ ಸಿಲೆಂಡರ್, ೬೦ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಅಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕುಪ್ಪಂ ಮುಖ್ಯ ರಸ್ತೆಯ ಕಾಂಗ್ರೆಸ್ ಮುಖಂಡ ರಷೀದ್‌ ಖಾನ್‌ರಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ರೀಫಿಲಿಂಗ್ ದಂದೆ ನಡೆಯುತ್ತಿರುವ ಕುರಿತು ಮಾಧ್ಯಮದಲ್ಲಿ ಬಂದ ಹಿನ್ನೆಲೆಯಲ್ಲಿ ಪೊಲೀಸರ ಸಹಕಾರೊಂದಿಗೆ ರೀಫಿಲಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಭಾರತ್ ಕರ್ಮಷಿಯಲ್ ಸಿಲಿಂಡರ್‌ಗಳು ೫೧, ಗೃಹಬಳಕೆಯ ಎಚ್‌ಪಿ ಸಿಲಿಂಡರ್‌ಗಳು ೫೦, ಇಂಡೇನ್ ಕರ್ಮಷಿಯಲ್ ಸಿಲಿಂಡರ್‌ಗಳು ೧೦, ಹೆಚ್.ಪಿ.ಕರ್ಮಷಿಯಲ್ ಸಿಲಿಂಡರ್‌ಗಳು-೧೩, ಖಾಲಿ ಗೃಹ ಬಳಕೆಯ ಸಿಲಿಂಡರ್‌ಗಳು-೧೦, ಗ್ಯಾಸ್ ರೀಫಿಲಿಂಗ್ ಯಂತ್ರಗಳು-೦೪, ಗ್ಯಾಸ್ ತೂಕ ಮಾಡುವ ಯಂತ್ರಗಳು-೨, ಒಂದು ಮೊಬೈಲ್ ಪೋನ್ ಹಾಗೂ ಗ್ಯಾಸ್ ಸಿಲಿಂಡರ್ ಸಾಗಟ ಮಾಡಲು ಉಪಯೋಗಿಸುತ್ತಿದ್ದ ಒಂದು ಕ್ಯಾಂಟರ್ ವಾಹನವನ್ನು ಪೊಲೀಸ್‌ರು ವಶಪಡಿಸಿಕೊಂಡಿದ್ದಾರೆ.ಆರೋಪಿಗಳು ಪರಾರಿ

ಆಹಾರ ಮತ್ತು ನಾಗರೀಕರ ಪಡಿತರ ಇಲಾಖೆ ಉಪನಿದೇರ್ಶಕ ಮಲ್ಲಿಕಾರ್ಜುನ್ ಮಾತನಾಡಿ, ಖಚಿತ ಮಾಹಿತಿ ಆಧರಿಸಿ ಅಂಡ್ರಸನ್‌ಪೇಟೆಯ ರಷೀದ್ ಖಾನ್‌ರ ಜಮೀನಿನ ಷೇಡ್ ಒಂದರ ಮೇಲೆ ದಾಳಿ ನಡೆಸಿದಾಗ ಅಕ್ರಮ ರೀಫಿಲೀಂಗ್ ದಂಧೆ ಕಂಡು ಬಂತು. ಒಟ್ಟು ೧೪೦ ಸಿಲೆಂಡರ್‌ಗಳನ್ನು ವಶಪಡಿಸಿಕೊಂಡಿದ್ದೇವೆ, ಈ ಹಿನ್ನೆಲೆಯಲ್ಲಿ ಅಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ, ದಾಳಿ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಿದ್ದು ಪೊಲೀಸ್‌ರು ಪತ್ತೆ ಮಾಡಲಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜು ಪ್ರತಿಕ್ರಿಯೆ ನೀಡಿದ್ದು, ಅಕ್ರಮ ಸಿಲೆಂಡರ್ ರಿಫಿಲೀಂಗ್ ಮಾಡುವುದು ಕಾನೂನು ಬಾಹಿರ ಈಗಾಗಲೇ ಅಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ, ರಿಪಿಲೀಂಗ್ ದಂಧೆಕೋರನ್ನು ಪತ್ತೆ ಹಚ್ಚಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Share this article