ಕನ್ನಡಪ್ರಭ ವಾರ್ತೆ ಕೆಜಿಎಫ್ಶ್ರೀ ಮಹಾವೀರ್ ಜೈನ್ ಶಾಲೆಯ ಆಡಳಿತ ಮಂಡಳಿಯವರು ಅಕ್ರಮವಾಗಿ ಶಾಲೆಯಲ್ಲಿ ಮಕ್ಕಳ ಶಾಲಾ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬಿಇಒ ಮುನಿವೆಂಕಟರಮಣಚಾರಿ ನೋಟಿಸ್ ಜಾರಿ ಮಾಡಿದ್ದು, ನಿಯಮ ಉಲ್ಲಂಘಿಸಿದಲ್ಲಿ ಶಾಲೆಯ ಮಾನ್ಯತೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.ಶ್ರೀ ಮಹಾ ವೀರ್ ಜೈನ್ ಶಾಲೆಯ ಆಡಳಿತ ಮಂಡಳಿಯವರು ಮಕ್ಕಳಿಗೆ ಶಾಲೆಯಲ್ಲೇ ನೋಟ್ ಪುಸ್ತಕ, ಬ್ಯಾಗ್, ಶೂ ನಮ್ಮ ಶಾಲೆಯಲ್ಲೇ ಖರೀದಿ ಮಾಡಬೇಕೆಂದು ಮುಖ್ಯಶಿಕ್ಷಕಿ ಲತಾ ಪೋಷಕರಿಗೆ ಮೆಸೇಜ್ ಮಾಡಿದ ಹಿನ್ನೆಲೆಯಲ್ಲಿ ಶಾಲೆಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಿಯಮ ಉಲ್ಲಂಘನೆ: ಸರ್ಕಾರದ ಆದೇಶದಂತೆ ಶಾಲೆಯಲ್ಲಿ ಪುಸ್ತಕ, ಬ್ಯಾಗ್, ಸಮವಸ್ತ್ರ ಇತರೆ ಸಾಮಗ್ರಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರದ ಆದೇಶವಿದ್ದರೂ ಆದೇಶಕ್ಕೆ ಕ್ಯಾರೇ ಅನ್ನದೆ ಶುಕ್ರವಾರ ಪೋಷಕರನ್ನು ಶಾಲೆಗೆ ಕರೆಸಿಕೊಂಡು ಮಕ್ಕಳ ನೋಟ್ ಪುಸ್ತಕ, ಬ್ಯಾಕ್, ಸಮವಸ್ತ್ರಗಳನ್ನು ದುಪ್ಪಟ್ಟು ಹಣವನ್ನು ಪಡೆದುಕೊಂಡು ವಿತರಣೆ ಮಾಡಿದ್ದಾರೆ.ನಗರಸಭೆ ಸದಸ್ಯೆ ದೂರುಶಾಲೆಯ ಮುಖ್ಯಶಿಕ್ಷಕಿ ಲತಾರೊಂದಿಗೆ ಶಾಲಿನಿ ನಂದಕುಮಾರ್ ಪ್ರಶ್ನೆ ಮಾಡಿ ನೀವು ಹೇಗೆ ಶಾಲೆಯಲ್ಲಿ ದುಪ್ಪಟ್ಟು ಹಣ ಪಡೆದುಕೊಂಡು ಪುಸ್ತಕ ಮತ್ತು ಇತರೆ ವಸ್ತುಗಳನ್ನು ಮಾರಾಟ ಮಾಡುತ್ತೀರಾ ಎಂದು ಪ್ರಶ್ನಿಸಿದಾಗ ಇಬ್ಬರ ಮಧ್ಯೆ ವಾಕ್ಸಮರ ನಡೆಯಿತು, ನಂತರ ಬಿಇಓ ಕಚೇರಿಗೆ ಹೋಗಿ ಶಾಲೆಯ ವಿರುದ್ಧ ದೂರು ನೀಡಿದ್ದಾರೆ.ನಾಮ್ ಕೆವಾಸ್ತೆ ನೋಟಿಸ್