ಹೊಸಕೋಟೆ: ತಾಲೂಕಿನ ನಡವತ್ತಿಯ ಸರ್ಕಾರಿ ಜಾಗದಲ್ಲಿ ಅಕ್ರಮ ಬಡಾವಣೆ ನಿರ್ಮಿಸಿ ಕೆಲ ಗ್ರಾಪಂ ಸದಸ್ಯರು ಮಾರಾಟಕ್ಕೆಮುಂದಾಗಿದ್ದು ಸರ್ಕಾರಿ ಜಾಗದಲ್ಲಿ ಬಡವರಿಗೆ ತಲಾ 4 ಎಕರೆ ಜಮೀನು ಅಂಬೇಡ್ಕರ್ ಭವನಕ್ಕೆ 1 ಎಕರೆ ಭೂಮಿ ಮಂಜೂರು ಮಾಡಬೇಕು ಎಂದು ಪ್ರಜಾ ವಿಮೋಚನಾ ಚಳವಳಿ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಮನವಿ ಮಾಡಿದರು.
ನಡುವತ್ತಿ ಗ್ರಾಮದಲ್ಲಿ ಪರಿಶಿಷ್ಠ ಜಾತಿ, ಹಿಂದುಳಿದ ಜಾತಿಗಳ ಆನೇಕ ಕುಟುಂಬಗಳಿಗೆ 70 ವರ್ಷಗಳಿಂದಲೂ ನಿವೇಶನ ಇಲ್ಲದೆ ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ 100 ಕುಟುಂಬಗಳಿಗೆ ನಿವೇಶನ ವಿತರಿಸಲು ಸರ್ವೆ ನಂ. ೮೮ರಲ್ಲಿ 46 ಎಕರೆ 35 ಗುಂಟೆ ಸರ್ಕಾರಿ ಭೂಮಿಯಲ್ಲಿ 4 ಎಕರೆ ಭೂಮಿಯನ್ನು ನಿವೇಶನಗಳಿಗಾಗಿ ಆದೇಶ ಮಾಡಿ ಕಾಯ್ದಿರಿಸಬೇಕು. ಡಾ| ಅಂಬೇಡ್ಕರ್ ಭವನ, ಗ್ರಂಥಾಲಯಕ್ಕೆ 1 ಎಕರೆ ಜಮೀನು ಮಂಜೂರು ಮಾಡಬೇಕು. ಉಳಿಕೆ ಸರ್ಕಾರಿ ಭೂಮಿಯನ್ನು ಸಾರ್ವಜನಿಕರ ಉಪಯೋಗಕ್ಕೆ, ಆಸ್ಪತ್ರೆ ಸರ್ಕಾರಿ ಶಾಲೆ, ಆಟದ ಮೈದಾನ ಸೇರಿದಂತೆ ಇತರೆ ಉದ್ದೇಶಗಳಿಗೆ ಆದೇಶ ಮಾಡಿ ಪಹಣಿಯಲ್ಲಿ ನಮೂದಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಪಧಾಧಿಕಾರಿಗಳಾದ ದೇವರಾಜ್, ಎಸ್‌ಕೆ ಮಾದೇಶ್, ವಿಜಯ್ ಕುಮಾರ್, , ಸಬ್ ಮಂಗಲ ರವಿ, ರಜಿಯಾ ಬೇಗಂ, ನಡವತ್ತಿ ಮುನಿರಾಜು ಹಾಜರಿದ್ದರು.ಫೋಟೋ: 14 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ನಡವತ್ತಿಯಲ್ಲಿ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಪ್ರಜಾವಿಮೋಚನಾ ಚಳವಳಿ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ನೇತೃತ್ವದಲ್ಲಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.