ಸೋಲಾರ್ ಪ್ಲಾಟ್‌ಗೆ ಇ-ಸ್ವತ್ತು ನೀಡಿಕೆಯಲ್ಲಿ ಅಕ್ರಮ: ಆರೋಪ

KannadaprabhaNewsNetwork |  
Published : May 03, 2025, 12:15 AM IST
2ಸಿಎಚ್‌ಎನ್‌58ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗ್ರಾಪಂ ಅಧ್ಯಕ್ಷ  ನಾಗಲಾಂಬಿಕೆ ಅ‍ವರು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗ್ರಾಪಂ ಅಧ್ಯಕ್ಷ ನಾಗಲಾಂಬಿಕೆ ಅ‍ವರು ಸುದ್ದಿಗೋಷ್ಠಿ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗೋವಿಂದವಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಸೊಲಾರ್ ಪ್ಲಾಟ್ ನಿರ್ಮಾಣಕ್ಕೆ ಅಕ್ರಮವಾಗಿ ಇ-ಸ್ವತ್ತು ನೀಡಿದ್ದು. ಈ ಘಟಕದಿಂದ ಪಂಚಾಯಿತಿಗೆ ಬರಬೇಕಾದ ತೆರಿಗೆಯನ್ನು ವಂಚನೆ ಮಾಡಿರುವ ಪಿಡಿಒ ಪಿ. ಗಿರೀಶ್ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ನಾಗಲಾಂಬಿಕೆ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಪಂ ಅಭಿವೃದ್ದಿ ಅಧಿಕಾರಿ ಪಿ. ಗಿರೀಶ್ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಅಲ್ಲದೇ ಗ್ರಾಪಂ ಅಭಿವೃದ್ದಿಯಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಸ್ವ-ಹಿತಾಸಕ್ತಿಗಾಗಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದ ಮಹಿಳೆ ಅಧ್ಯಕ್ಷೆ ಎಂಬ ಕಾರಣಕ್ಕೆ ಕಿಂಚಿತ್ತು ಗೌರವ ನೀಡುತ್ತಿಲ್ಲ. ಇಂಥ ಅಧಿಕಾರಿ ನಮಗೆ ಬೇಡ. ಕೂಡಲೇ ವರ್ಗಾವಣೆ ಮಾಡಿ, ಮತ್ತೊಬ್ಬರನ್ನು ನೇಮಕ ಮಾಡಿಕೊಡಬೇಕೆಂದು ಜಿ.ಪಂ. ಸಿಇಓ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸೋಲಾರ್ ಪ್ಲಾಟ್‌ನಲ್ಲಿ ಅಕ್ರಮ:

ಸಾರ್ವಜನಿಕರು ತಮ್ಮ ಆಸ್ತಿಯನ್ನು ಇ-ಸ್ವತ್ತು ಮಾಡಿಕೊಡಲು ಹಿಂದೇಟು ಹಾಕು ಪಿಡಿಒ ಹಾಗೂ ಅವರು ಹೆಚ್ಚಿನ ಹಣ ಕೊಟ್ಟರೆ ಇ ಸ್ವತ್ತು ನೀಡುವ ಪಿಡಿಓ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತರುವುದಿಲ್ಲ. ಆದರೆ, ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಲಾರ್ ಘಟಕ ನಿರ್ಮಾಣಕ್ಕೆ ಇ ಸ್ವತ್ತು ನೀಡುವ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ಮಾಡದೇ, ನಿರ್ಣಯ ಇಲ್ಲದೇ ಏಕಪಕ್ಷಿಯವಾಗಿ ಇ- ಸ್ವತ್ತು ಅನ್ನು ಪಿಡಿಒ ಗೀರಿಶ್ ನೀಡಿದ್ದಾರೆ. ಅಲ್ಲದೇ ಪಂಚಾಯಿತಿಗೆ ಕೇವಲ ೧.೫೨ ಲಕ್ಷ ರು. ಪಡೆದುಕೊಂಡಿದ್ದಾರೆ. ಪ್ರತಿ ಮಾಹೆ ಪಂಚಾಯಿತಿಗೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿ ಮಾಡಿಲ್ಲ.

ಈ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಶ್ನೆ ಮಾಡಿ, ದಾಖಲಾತಿಗಳನ್ನು ಕೇಳಿದರೆ, ಸಭೆಯ ಮಧ್ಯದಲ್ಲಿಯೇ ಪಲಾಯನ ಮಾಡಿ, ಸಾಮಾನ್ಯ ಸಭೆಗೆ ಅಗೌರವ ತಂದಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಪಿಡಿಓ ಲಕ್ಷಾಂತರ ರೂ. ಪಡೆದುಕೊಂಡಿದ್ದಾರೆ ಎಂಬ ಗುಮಾನಿಯು ಇದೆ. ಪಂಚಾಯಿತಿಗೆ ಬರಬೇಕಾಗಿದ್ದ ತೆರಿಗೆಯು ಕೋತಾ ಅಗಿದೆ. ಇದರ ವಿರುದ್ದ ತನಿಖೆ ನಡೆಸಿ, ತಪ್ಪಿಸ್ತ ಅಧಿಕಾರಿಯನ್ನು ಶಿಕ್ಷೆಗೆ ಗುರಿಪಡಿಸಬೇಕು. ತನಿಖೆಗೆ ಮಾಡುವ ಮುನ್ನಾ ಇವರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಅಧ್ಯಕ್ಷೆ ನಾಗಲಾಂಬಿಕೆ ಒತ್ತಯಿಸಿದರು. ಸರ್ಕಾರದಿಂದ ಮಂಜೂರಾಗಿರುವ ಮನೆಗಳಿಗೆ ಜಿಪಿಎಸ್ ನೀಡುತ್ತಿಲ್ಲ. ನರೇಗಾ ಯೋಜನೆ ಕಾಮಗಾರಿಗಳಿಗೆ ಬಿಲ್ ಮಾಡದೇ ಸತಾಯಿಸುತ್ತಿದ್ದಾರೆ. ಗ್ರಾಮಗಳ ಸ್ವಚ್ಚತೆ, ನೈರ್ಮಲ್ಯ ಹಾಗೂ ಕುಡಿಯುವ ನೀರು ಪೊರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಪೈಪ್ ಲೈನ್ ಹೊಡೆದು ಹೋಗಿದ್ದು, ಇದನ್ನು ರಿಪೇರಿ ಮಾಡಿಸಲು ಸಹ ಮುಂದಾಗುತ್ತಿಲ್ಲ. ಕಚೇರಿಗೆ ಸರಿಯಾಗಿ ಬರುತ್ತಿಲ್ಲ. ಇಷ್ಟ ಬಂದAತೆ ಬಂತು ಹೋಗುವುದು. ಕೇಳಿದರೆ ಚಾ.ನಗರದಲ್ಲಿ ಮೀಟಿಂಗ್ ಇತ್ತು ಎಂದು ಸುಳ್ಳು ಹೇಳಿ ಪಂಚಾಯಿತಿ ಅಭಿವೃದ್ದಿಗೆ ಅಡ್ಡಿಯಾಗಿದ್ದಾರೆ. ಇವರ ವಿರುದ್ದ ಕ್ರಮ ವಹಿಸಬೇಕು. ಕಳೆದ ಎರಡು ವರ್ಷಗಳಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳಿಗ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸದಸ್ಯ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಗ್ರಾಪಂ ಉಪಾಧ್ಯಕ್ಷೆ ನೀಲಮ್ಮ, ಸದಸ್ಯರಾದ ನಾಗಮಣಿ, ಹಳೇಪುರ ಬಸವಣ್ಣ, ಮಂಜುನಾಥ್, ಉಮೇಶ್, ಇತರರು ಇದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌