ಹಗರಿಬೊಮ್ಮನಹಳ್ಳಿ ಜಲಾಶಯದ ಬಳಿ ಅಬಕಾರಿ ಪೊಲೀಸರ ದಾಳಿ: ಅಕ್ರಮ ಮದ್ಯ ವಾಹನ ಜಪ್ತಿ

KannadaprabhaNewsNetwork |  
Published : May 18, 2026, 02:15 AM IST
ಶ | Kannada Prabha

ಸಾರಾಂಶ

ವಾಹನ ವಶಪಡಿಸಿಕೊಂಡ ಘಟನೆ ಶನಿವಾರ ಸಂಜೆ ತಾಲೂಕಿನ ಹಗರಿಬೊಮ್ಮನಹಳ್ಳಿ ಜಲಾಶಯದ ಬಳಿ ನಡೆದಿದೆ.

ಹಗರಿಬೊಮ್ಮನಹಳ್ಳಿ: ಪಟ್ಟಣದ ಅಬಕಾರಿ ಪೊಲೀಸರು ದಾಳಿ ಮಾಡಿ ಸರಕು ವಾಹನದಲ್ಲಿ ಸಾಗಿಸುತ್ತಿದ್ದ ಅಕ್ರಮ ಮರ್ಧಐ ಮತ್ತು ವಾಹನ ವಶಪಡಿಸಿಕೊಂಡ ಘಟನೆ ಶನಿವಾರ ಸಂಜೆ ತಾಲೂಕಿನ ಹಗರಿಬೊಮ್ಮನಹಳ್ಳಿ ಜಲಾಶಯದ ಬಳಿ ನಡೆದಿದೆ.

ಅಬಕಾರಿ ನಿರೀಕ್ಷಕಿ ಎಸ್.ಬಿ. ಮಮತಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಕ್ರಮ ಮದ್ಯ ಮತ್ತು ಸರಕು ಸಾಗಾಣಿಕೆ ವಾಹನವನ್ನು ಜಪ್ತಿ ಮಾಡಲಾಗಿದೆ.

ಘಟನೆಯ ವಿವರಗಳನ್ನು ಕನ್ನಡಪ್ರಭದೊಂದಿಗೆ ಹಂಚಿಕೊಮಡಿರುವ ಮಮತಾ, ತಾಲೂಕಿನ ಎಲ್ಲೆಡೆ ನಡೆಯುತ್ತಿರುವ ಅಕ್ರಮ ಸಾಗಾಣಿಕೆ ಮತ್ತು ನಕಲಿ ಮದ್ಯ ಸಂಗ್ರಹ ಕುರಿತಂತೆ ಮಾಹಿತಿ ಸಂಗ್ರಹಿಸಿ ದಾಸ್ತಾನು ಮತ್ತು ಸಾಗಾಣಿಕೆ ವಿರುದ್ಧ ಇಲಾಖೆಯು ತಂಡಗಳನ್ನು ರಚಿಸಿಕೊಂಡು ದಾಳಿ ನಡೆಸುತ್ತಿದೆ ಎಂದರು.

ಕಳೆದ ಏಪ್ರಿಲ್ ನಿಂದ ಈ ವರ್ಷದ ಮಾರ್ಚ ವರೆಗೂ ೧೫೬ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು ೧೫೬ ಸಾವಿರ ಲೀಟರ್ ಅಕ್ರಮ ಮದ್ಯ ಮತ್ತು ೩೬ ಸಾವಿರ ಲೀಟರ್ ಬಿಯರ್ ವಶಪಡಿಸಿಕೊಂಡು ₹೧೫೮ ಕೋಟಿ ರಾಜಧನವನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ ಈ ಸಾಲಿನಲ್ಲಿ ೨೨ ಪ್ರಕರಣಗಳನ್ನು ದಾಖಲಿಸಿಕೊಂಡು ವಶಪಡಿಸಿಕೊಂಡಿರುವ ಅಕ್ರಮ ಮದ್ಯಗಳಿಂದ ₹೩೧ ಸಾವಿರ ರಾಜಧನವನ್ನು ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಸಾಗಾಣಿಕೆ ಮತ್ತು ದಾಸ್ತಾನು ಕುರಿತಂತೆ ಸಾರ್ವಜನಿಕರು ಮಾಹಿತಿ ಒದಗಿಸಬೇಕು ಎಂದು ಕೋರಿದರು.

ಅಬಕಾರಿ ಉಪ ನಿರೀಕ್ಷಕ ಮಹಾಂತೇಶ್, ಹನಮಂತಪ್ಪ, ಮುಖ್ಯ ಪೇದೆಗಳಾದ ಗುರುಬಸವರಾಜೇಂದ್ರ, ಚಿನ್ನಾಚಾರಿ, ವಾಹನ ಚಾಲಕ ಕಾಂತರಾಜ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಹಗರಿಬೊಮ್ಮನಹಳ್ಳಿ ತಾಲೂಕಿನ ಜಲಾಶಯದ ಬಳಿ ನಡೆಯುತ್ತಿದ್ದ ಅಕ್ರಮ ಮದ್ಯ ಸಾಗಾಣಿಕೆ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ ಸಾಗಾಣಿಕೆ ವಾಹನ ಮತ್ತು ಅಕ್ರಮ ಮದ್ಯ ಜಪ್ತಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಸಿದ್ದರಾಮಯ್ಯರದ್ದು ಮೂರು ವರ್ಷದ ಮಗುವಿನ ತುಂಟಾಟಿಕೆ
ಆ.2ರಂದು ಬಳ್ಳಾರಿಯಲ್ಲಿ ಸ್ಟೀಲ್ ಸಿಟಿ ರನ್; ಡಾ.ತಿಪ್ಪಾರೆಡ್ಡಿ