ಬಣಜಿಗರ ಮುನ್ನುಗ್ಗುವ ಪ್ರವೃತ್ತಿ ರೂಢಿಸಿಕೊಳ್ಳಿ

KannadaprabhaNewsNetwork |  
Published : Jan 14, 2025, 01:01 AM IST
೧೩ ಇಳಕಲ್ಲ ೨ | Kannada Prabha

ಸಾರಾಂಶ

ಎಲ್ಲರನ್ನು ಪ್ರೀತಿಸುವ ಮತ್ತು ಎಲ್ಲರ ಗೌರವಕ್ಕೆ ಪಾತ್ರರಾಗಿರುವ ಲಿಂಗಾಯತ ಬಣಜಿಗರು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನುಗ್ಗುವ ಪ್ರವೃತ್ತಿ ರೂಢಿಸಿಕೊಳ್ಳಬೇಕಾಗಿದೆ ಎಂದು ಹಿರಿಯರಾದ ಸಿ.ಸಿ ಚಂದ್ರಾಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಎಲ್ಲರನ್ನು ಪ್ರೀತಿಸುವ ಮತ್ತು ಎಲ್ಲರ ಗೌರವಕ್ಕೆ ಪಾತ್ರರಾಗಿರುವ ಲಿಂಗಾಯತ ಬಣಜಿಗರು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನುಗ್ಗುವ ಪ್ರವೃತ್ತಿ ರೂಢಿಸಿಕೊಳ್ಳಬೇಕಾಗಿದೆ ಎಂದು ಹಿರಿಯರಾದ ಸಿ.ಸಿ ಚಂದ್ರಾಪಟ್ಟಣ ಹೇಳಿದರು.

ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಜಯಮಹಾಂತೇಶ ಬಡಾವಣೆಯ ನೂತನ ಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವಾ ನಿವೃತ್ತರಾದ ಹಾಗೂ ಇಳಕಲ್ಲ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ನಿರ್ದೇಶಕರಿಗೆ ಹಮ್ಮಿಕೊಂಡ ಗೌರವ ಸನ್ಮಾನ ಸಮಾರಂಭದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಮಾತನಾಡಿದರು. ಬುದ್ಧಿವಂತ ಸಮಾಜ ಎನಿಸಿಕೊಂಡವರು ಯಾವುದೇ ಕ್ಷೇತ್ರದಲ್ಲಿ ಪಾರದರ್ಶಕತೆಯಿಂದ ಕೆಲಸ ಮಾಡಿ ಸಮಾಜಕ್ಕೆ ಹೆಮ್ಮೆ ತರುವಂತೆ ಮಾಡಿರಿ ಎಂದು ತಿಳಿಸಿದರು.ವಾಣಿಜ್ಯೋಧ್ಯಮಿ ಗುರಣ್ಣ ಮರಟದ ಮಾತನಾಡಿ, ವ್ಯಾಪಾರ ಇಂದು ಸಂಕಷ್ಟದಲ್ಲಿದ್ದು, ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.ಬ್ಯಾಂಕ್ ನಿರ್ದೇಶಕ ಮಹಾಂತೇಶ ಅಂಗಡಿ ಮಾತನಾಡಿ, ನಮ್ಮ ಬ್ಯಾಂಕಿನಲ್ಲಿ ಯಾವುದೇ ಅಕ್ರಮಗಳು, ಲಪಡಾಗಳು ಆಗಲು ಸಾಧ್ಯವೇ ಇಲ್ಲ. ಸಿಬ್ಬಂದಿಯ ಪ್ರಾಮಾಣಿಕತೆ, ದಕ್ಷತೆಯೇ ಬ್ಯಾಂಕಿನ ಆಧಾರ ಸ್ತಂಭ ಎಂದರು.ಗೌರವ ಸನ್ಮಾನ ಸ್ವೀಕರಿಸಿದ ಇಳಕಲ್ಲ ಕೋ-ಆಪರೇಟಿವ್ ಬ್ಯಾಂಕ್‌ ನಿರ್ದೆಶಕ ಡಾ.ಅರುಣಾ ಅಕ್ಕಿ, ಮಹಾಂತೇಶ ಅಂಗಡಿ, ಮಂಜುನಾಥ ಶೆಟ್ಟರ ಮಾತನಾಡಿದರು.ಇದೇ ಸಂದರ್ಭದಲ್ಲಿ ಎಸ್.ವಿ.ಎಂ ಸಂಘದ ನಿರ್ದೆಶಕ ಮಲ್ಲಣ್ಣ ಹರವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮಹಾಂತೇಶ ಹಲಕುರ್ಕಿ, ನಿವೃತ್ತ ಉಪನ್ಯಾಸಕ ಮಹಾಂತೇಶ ಅರಳಿ, ಪಂಚಾಕ್ಷರಿ ಅಂಗಡಿ, ಅಶೋಕ ನೀರಲಕೇರಿ, ಸುರೇಶ ಅಂಗಡಿ, ಈರಣ್ಣ ನಂದಾಪೂರ, ನಿವೃತ್ತ ಉಪನ್ಯಾಸಕಿ ದ್ರಾಕ್ಷಾಯಿಣಿ ಗಡಾದ, ನಾಗರತ್ನಾ ಕಾಚಟ್ಟಿಯವರ, ಸವಿತಾ ಮಾಟೂರ, ಮಹಾದೇವಿ ತೊಂತನಾಳ, ಡಾ.ಬಸವರಾಜ ಅಂಗಡಿ, ಅಶೋಕ ವಾಲಿ ಹಾಗೂ ರೇವಣಸಿದ್ದಪ್ಪ ಮತ್ತು ಜಯಶ್ರೀ ದಂಪತಿಗಳನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂಗಣ್ಣ ಎಮ್ಮಿ ಪರಿವಾರದವರು ಹಾಗೂ ಎ.ಸ್.ಆರ್.ಕಂಠಿ ವೇದಿಕೆಯ ಸದಸ್ಯರೂ ಸಾಧಕ ಮಹನೀಯರಿಗೆ ಸನ್ಮಾನ ನೆರವೇರಿಸಿದರು. ವಿ.ಎಸ್.ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕದ ಅಧ್ಯಕ್ಷ ಗಂಗಾಧರ ಶೆಟ್ಟರ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುರುಗೇಶ ಪಾಟೀಲ, ಗುರುಬಸಪ್ಪ ಕೋಟಿ, ಪರುತಪ್ಪಗೌಡ ಪಟ್ಟಣಶೆಟ್ಟಿ, ಬಸಪ್ಪ ಅಂಗಡಿ, ಈರಣ್ಣ ಕರಡಿ, ಶಿವರುದ್ರಪ್ಪ ಗೊಂಗಡಶೆಟ್ಟಿ, ಮಹಾಂತಪ್ಪ ವಾಲಿ, ಡಾ.ಮಹಾಂತೇಶ ಅಕ್ಕಿ, ಸಂಗಮೇಶ ಪಟ್ಟಣಶೆಟ್ಟಿ, ಗುರುಬಸಪ್ಪ ತುಪ್ಪದ, ವೀರಣ್ಣ ಅಂಗಡಿ, ಗಂಗಾಧರ ಅಂಗಡಿ, ಶಿವಕುಮಾರ ಅಕ್ಕಿ, ಪ್ರಭು ಪಟ್ಟಣಶೆಟ್ಟಿ, ಪರಪ್ಪ ಕವಲಿ, ಬಸವರಾಜ ಗುಗ್ಗರಿ, ಅಡಿವೆಪ್ಪ ಅಂಗಡಿ, ಈರಪ್ಪ ಗೋನಾಳ ಮಲ್ಲಪ್ಪ ಅಂಗಡಿ, ಬಸವರಾಜ ಪಟ್ಟಣಶೆಟ್ಟಿ, ಮಲ್ಲು ನಿರಲಕೇರಿ, ಸಿದ್ದು ಅಂಗಡಿ, ಗಂಗಮ್ಮ ಎಮ್ಮಿ, ಕವಿತಾ ಬೆಲ್ಲದ, ಇಂದುಮತಿ ಅಂಗಡಿ, ಸುನಿತಾ ಅಂಗಡಿ, ವಿಜಯಲಕ್ಷ್ಮೀ ಕಂಠಿ ಮತ್ತಿತರಿದ್ದರು.ಕುಮಾರಿ ಸುಜಾತ ಅಂಗಡಿ ಮಹಾದೇವಿ ಬಾದಿಮನಾಳ ಪ್ರಾರ್ಥಿಸಿದರು. ನಿವೇದಿತಾ ಅಂಗಡಿ ವಚನ ಹಾಡಿದರು. ವಿ.ಬಿ.ಜೀರಗಿ ಸ್ವಾಗತಿಸಿದರು. ಚನ್ನಬಸಪ್ಪ ಲೆಕ್ಕಿಹಾಳ ನಿರೂಪಿಸಿದರು. ಮಂಜು ಅಂಗಡಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ