ಒಳ ಮೀಸಲಾತಿ ಜಾರಿಗೊಳಿಸಿ

KannadaprabhaNewsNetwork |  
Published : Mar 12, 2026, 01:30 AM IST
11ಕೆಕೆಆರ್3:ಕುಕನೂರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ರಾಜ್ಯ ಸರ್ಕಾರ ಕೂಡಲೇ ಒಳ ಮೀಸಲಾತಿ ಜಾರಿಗೆ ಮಾಡಬೇಕು ಎಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ  ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸುವ ಮೂಲಕ ಮಾದಿಗ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.  | Kannada Prabha

ಸಾರಾಂಶ

ಮಾದಿಗ ಸಮುದಾಯ ಸುಮಾರು 35 ವರ್ಷಗಳ ಕಾಲ ಸುದೀರ್ಘವಾಗಿ ಒಳ ಮೀಸಲಾತಿಗಾಗಿ ಬೀದಿಗಿಳಿದು ಹಲವು ರೀತಿಯಲ್ಲಿ ಹೋರಾಟ ಮಾಡುತ್ತಾ ಬಂದಿದ್ದೇವೆ.

ಕುಕನೂರು: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ರಾಜ್ಯ ಸರ್ಕಾರ ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸುವ ಮೂಲಕ ಮಾದಿಗ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ತಹಸೀಲ್ದಾರ ಕಚೇರಿಯಲ್ಲಿ ಶಿರೇಸ್ತೇದಾರ ಸುರೇಶ ಬಾಳೆಹೊಸೂರು ಹಾಗೂ ಆಹಾರ ಇಲಾಖೆ ಅಧಿಕಾರಿ ಮಂಜುನಾಥ ಹಲಗೇರಿಗೆ ಪ್ರಮುಖರು ಮನವಿ ಸಲ್ಲಿಸಿದರು.

ಮನವಿಯಲ್ಲಿ ಮಾದಿಗ ಸಮುದಾಯ ಸುಮಾರು 35 ವರ್ಷಗಳ ಕಾಲ ಸುದೀರ್ಘವಾಗಿ ಒಳ ಮೀಸಲಾತಿಗಾಗಿ ಬೀದಿಗಿಳಿದು ಹಲವು ರೀತಿಯಲ್ಲಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಕಳೆದ 2 ವರ್ಷಗಳ ಹಿಂದೆ ಆಗಸ್ಟ್ 1, 2024 ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯಲ್ಲಿ ಉಪ-ವರ್ಗೀಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಐತಿಹಾಸಿಕ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು 6:1 ಅನುಪಾತದಲ್ಲಿ ಅತಿ ಹಿಂದುಳಿದ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ರಾಜ್ಯಗಳು ಅಧಿಕೃತ ದತ್ತಾಂಶದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದೆ.

ಇದರ ಆಧಾರದ ಮೇಲೆ ಅತೀ ಹಿಂದುಳಿದ ಸಮುದಾಯ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೆ ಮಾಡಿ ನ್ಯಾಯ ಒದಗಿಸಿ ಕೊಡಬೇಕಾದ ಸರ್ಕಾರ ರೋಸ್ಟರ್ ನೆಪ ಮಾಡಿಕೊಂಡು ಪಟ್ಟಭದ್ರ ಹಿತಾಶಕ್ತಿಗಳಿಗೆ ಮಣಿದು, ಸುಪ್ರೀಂ ಕೋರ್ಟಿನ ತೀರ್ಪುನ್ನೇ ಉಲ್ಲಂಘನೆ ಮಾಡುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರ ಕೂಡಲೇ ಒಳ ಮೀಸಲಾತಿ ಜಾರಿಗೆ ತಂದು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಹಿಂದುಳಿದ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಇಡೀ ರಾಜ್ಯದ ಮಾದಿಗ ಸಮುದಾಯದ ಪರವಾಗಿ ವಿನಂತಿ ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿಂಗಪ್ಪ ಗೋರ್ಲೆಕೊಪ್ಪ, ಮಲಿಯಪ್ಪ ಅಣ್ಣಿಗೇರಿ, ಮಾರುತಿ ಭಂಡಾರಿ, ಚಂದ್ರಪ್ಪ ಆರುಬೆರಳಿನ, ಶರಣಪ್ಪ ಹಿರೇಮನಿ, ಮಲ್ಲಿಕಾರ್ಜುನ ಗೋರ್ಲೆಕೊಪ್ಪ, ಪ್ರಶಾಂತ್ ಆರುಬೆರಳಿನ, ಹನುಮಂತಪ್ಪ ರಾವಣಕೀ, ಶ್ರೀಧರ್ ಭಂಡಾರಿ, ಭೀಮಣ್ಣ ಬೂದಗುಂಪ, ಪ್ರಕಾಶ ಉಜ್ಜನವರ, ಶಂಕರ ಭಂಡಾರಿ, ಲೋಹಿತ್ ಹಿರೇಮನಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರ ಜತೆ ಮಾತುಕತೆ ವಿಫಲ: ಆಶಾ ಹೋರಾಟ ಮುಂದುವರಿಕೆ
ರಾಜ್ಯ ಸರ್ಕಾರದ 2027ರ ರಜಾದಿನಗಳ ಪಟ್ಟಿ ಪ್ರಕಟ