ನಿತ್ಯ ಬದುಕಿಗೆ ಯೋಗ ಅಳವಡಿಸಿಕೊಳ್ಳಿ: ಮಲ್ಲಪ್ಪ

KannadaprabhaNewsNetwork |  
Published : Dec 10, 2025, 12:30 AM IST
9 ಬೀರೂರು 1ಬೀರೂರು ಪಟ್ಟಣದ ಗುರುಭವನ ಮುಂಭಾಗದಲ್ಲಿರುವ ಡಾ. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಲಯನ್ಸ್ ಕ್ಲಬ್ ವತಿಯಿಂದಾ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಲಯನ್ಸ್ ಕ್ಲಬ್ ಬೀರೂರು ನಕ್ಷತ್ರದ ಅಧ್ಯಕ್ಷರಾದ ಮಲ್ಲಪ್ಪ ಮಾತನಾಡಿದರು. | Kannada Prabha

ಸಾರಾಂಶ

ಬೀರೂರುಸರಳ ಯೋಗಗಳ ಆಚರಣೆ ಮೂಲಕ ಜೀವನವನ್ನು ಹೆಚ್ಚು ಚೈತನ್ಯದಾಯಕವಾಗಿಸುವ ಹಾಗೂ ಉತ್ತಮ ಚಿಂತನೆಗೆ ಮನಸ್ಸನ್ನು ಹದಗೊಳಿಸುವ ಶಕ್ತಿಹೊಂದಿರುವ ದೇಹ ಹಾಗೂ ಮನಸ್ಸನ್ನು ಸದೃಢವಾಗಿಡುವ ಯೋಗಜೀವನವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇಂದು ಒದಗಿ ಬಂದಿದೆ ಎಂದು ಲಯನ್ಸ್ ಕ್ಲಬ್ ಬೀರೂರು ನಕ್ಷತ್ರದ ಅಧ್ಯಕ್ಷ ಮಲ್ಲಪ್ಪ ತಿಳಿಸಿದರು.

- ಆಹಾರ ಸೂತ್ರ ಅನುಸರಿಸಿ: ಆರೋಗ್ಯಯುತ ಜೀವನಕ್ಕೆ ಯೋಗದ ಕೊಡುಗೆ ಅಮೂಲ್ಯ

ಕನ್ನಡಪ್ರಭ ವಾರ್ತೆ, ಬೀರೂರು

ಸರಳ ಯೋಗಗಳ ಆಚರಣೆ ಮೂಲಕ ಜೀವನವನ್ನು ಹೆಚ್ಚು ಚೈತನ್ಯದಾಯಕವಾಗಿಸುವ ಹಾಗೂ ಉತ್ತಮ ಚಿಂತನೆಗೆ ಮನಸ್ಸನ್ನು ಹದಗೊಳಿಸುವ ಶಕ್ತಿಹೊಂದಿರುವ ದೇಹ ಹಾಗೂ ಮನಸ್ಸನ್ನು ಸದೃಢವಾಗಿಡುವ ಯೋಗಜೀವನವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇಂದು ಒದಗಿ ಬಂದಿದೆ ಎಂದು ಲಯನ್ಸ್ ಕ್ಲಬ್ ಬೀರೂರು ನಕ್ಷತ್ರದ ಅಧ್ಯಕ್ಷ ಮಲ್ಲಪ್ಪ ತಿಳಿಸಿದರು.ಪಟ್ಟಣದ ಗುರುಭವನ ಮುಂಭಾಗದಲ್ಲಿರುವ ಡಾ. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಲಯನ್ಸ್ ಕ್ಲಬ್ ನಿಂದ ಆಯೋಜಿಸಿದ್ದ ಯೋಗ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ನಮ್ಮ ಅಡುಗೆ ಮನೆಗಳು ಆರೋಗ್ಯ ಕೇಂದ್ರಗಳಾಗಿದ್ದವು ಇಂದು ಔಷಧಾಲಯಗಳು ಆ ಸ್ಥಾನ ಪಡೆದುಆಹಾರ ಔಷಧಿ ಬದಲಾಗಿ ಔಷಧಿಯೇ ಆಹಾರವಾಗಿ ಬದಲಾಗುತ್ತಿದೆ ಎಂದರು.

ಯೋಗವಿದ್ಯೆಯನ್ನು ನಿತ್ಯಬದುಕಿನಲ್ಲಿ ಅಳವಡಿಸಿಕೊಳ್ಳದಿರುವುದು ನಮ್ಮ ಸನಾತನ ಆರೋಗ್ಯ ಸೂತ್ರಗಳನ್ನು ತಾತ್ಸಾರ ಭಾವದಿಂದ ನೋಡುತ್ತಿರುವುದು ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದನ್ನುನೆನಪಿಸಿ, ಯೋಗ ವಿದ್ಯೆಗೆ ಮಹತ್ವನೀಡಿ ಎಂದರು.ಯೋಗ ದೇಹಕ್ಕೆ ಆಗುವ ಮನಸ್ಸಿಗೆ ಆರೋಗ್ಯ ಕಲ್ಪಿಸುತ್ತದೆ ಇಂದಿನ ಕಲುಷಿತ ವಾತಾವರಣ ಕಲುಷಿತ ಆಹಾರ ಪದ್ಧತಿ ಕಲುಷಿತ ಸಾಮಾಜಿಕ ವ್ಯವಸ್ಥೆಯಲ್ಲಿ ಆರೋಗ್ಯ ಕಾಪಾಡಲು ಹಾಗೂ ಮನಸ್ಸನ್ನು ಏಕಾಗ್ರತೆಯಿಂದ ಇಟ್ಟುಕೊಳ್ಳಲು ಇತರರ ಮೂಲಕ ವೈಯಕ್ತಿಕ ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಯೋಗ ಎಲ್ಲರಿಗೂ ಅಗತ್ಯತೆ ಇದೆ ಎಂದರು.ಯೋಗ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿ ಡಾ. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯ ವಾರ್ಡನ್ ಪಿ ಎಸ್ ಮಂಜುನಾಥ್ ಮಾತನಾಡಿ, ನಮ್ಮ ವಿದ್ಯಾರ್ಥಿಗಳಿಗೆ ಈ ಶಿಬಿರ ವಿದ್ಯಾರ್ಥಿಗಳ ದೇಹ ಮತ್ತು ಮನಸ್ಸಿಗೆ ನೈರ್ಮಲ್ಯ ತಂದು ಕೊಡುತ್ತದೆ ಹಾಗೂ ಅವರ ಏಕಾಗ್ರತೆ ಹೆಚ್ಚಿಸುವ ಮೂಲಕ ಅವರ ಶಿಕ್ಷಣಕ್ಕೆ ಕಲಿಕೆಗೆ ತುಂಬಾ ಸಹಕಾರಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ.ಗವಿರಂಗಯಪ್ಪ, ಪ್ರತಿದಿನ ಯೋಗ ಮಾಡುವುದರಿಂದ ಮನುಷ್ಯನ ಆರೋಗ್ಯ ಸ್ವಾಸ್ಥ್ಯ ಕಾಪಾಡಬಹುದು ಇದರ ಮೂಲಕ ದೇಶದ ಆರೋಗ್ಯ ಸಂಪತ್ತು ವೃದ್ದಿಸಿದಂತಾಗುತ್ತದೆ ಎಂದು ತಿಳಿಸಿದರು ಡಾ. ವಿವೇಕಾನಂದ ಮಾತನಾಡಿ, ಯೋಗ ಮತ್ತು ಧ್ಯಾನ ವ್ಯಕ್ತಿಯ ಸಂಪೂರ್ಣ ಬೆಳವಣಿಗೆ ಹಾಗೂ ದೈಹಿಕ ಹಲವು ರೋಗ ಗಳಿಗೆ ಪರಿಹಾರ ಒದಗಿಸುತ್ತದೆ ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಲಯನ್ ಸಂಪತ್ ಕುಮಾರ್, ಯೋಗ ದೇಹ ಮತ್ತು ಮನಸ್ಸನ್ನು ಕೂಡಿಸುತ್ತದೆ. ಯೋಗ ಹಲವು ರೋಗಗಳಿಗೆ ರಾಮಬಾಣ ಯೋಗ ವಿದ್ಯಾರ್ಥಿಗಳ ಏಕಾಗ್ರತೆಗೆ ಸಹಕಾರಿ. ಯೋಗ ವಿದ್ಯಾರ್ಥಿಗಳ ಆದರ್ಶ ಬೆಳವಣಿಗೆಗೆ ಮಾರ್ಗ ತೋರಿಸುತ್ತದೆ. ಯೋಗ ದೇಹದ ಚೈತನ್ಯಕ್ಕೆ ಮೂಲ. ಯೋಗ ಸಮಾಜದ ಸಂಘಟನೆಗೆ ಸಹಕಾರಿ ಯೋಗ ಗುಣಪಡಿಸಲಾಗದ ದೇಹದ ನ್ಯೂನ್ಯತೆಗೆ ರಾಮಬಾಣ ಯೋಗ ದೇಹದ ಪ್ರಕೃತಿದತ್ತ ಹಲವು ರೋಗಗಳಿಗೆ ಪರಿಹಾರ ಒದಗಿಸುತ್ತದೆ ಎಂದು ತಿಳಿಸಿದರು. ಲಯನ್ಸ್ ಬ್ಲಾಸಮ್ ಅಧ್ಯಕ್ಷ ಸುವರ್ಣ ಒಡೆಯರ್ ಯೋಗ ಶಿಬಿರ, ವ್ಯಕ್ತಿತ್ವ ವಿಕಸನದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲಯನ್ ಓಂಕಾರಪ್ಪ , ಲಯನ್ ಸಿತಾರ, ಲಯನ್ ಶಬರೀಶ್ , ಲಯನ್ ಶಿರೋಳ ನಿರೂಪಿಸಿ ಲಯನ್ ಸುರೇಶಪ್ಪ, ಪುರಸಭೆ ಚೆಲುವರಾಜ್, ಹಾಸ್ಟೆಲ್‌ನ ತುರುವನಹಳ್ಳಿ ಶ್ರೀನಿವಾಸ್ ಹಾಗೂ ವಸತಿ ಶಾಲೆ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.9 ಬೀರೂರು 1ಬೀರೂರು ಪಟ್ಟಣದ ಗುರುಭವನ ಮುಂಭಾಗದ ಡಾ. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಲಯನ್ಸ್ ಕ್ಲಬ್ ನಿಂದ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಲಯನ್ಸ್ ಕ್ಲಬ್ ಬೀರೂರು ನಕ್ಷತ್ರದ ಅಧ್ಯಕ್ಷ ಮಲ್ಲಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ