ವಿವಿಧ ನಿಗಮಗಳಲ್ಲಿ ಗಂಗಾಕಲ್ಯಾಣ ಯೋಜನೆ ಜಾರಿ ಹೆಮ್ಮೆ ವಿಷಯ

KannadaprabhaNewsNetwork |  
Published : Jul 15, 2025, 01:00 AM IST
14ಕೆಕೆಡಿಯು1 | Kannada Prabha

ಸಾರಾಂಶ

ಕಡೂರು, ಗಂಗಾಕಲ್ಯಾಣ ಯೋಜನೆ ಅಳವಡಿಕೆ ಕುರಿತು ತಾವು ಸದನದಲ್ಲಿ ಪ್ರಸ್ತಾಪಿಸಿದ ನಂತರ ಸರ್ಕಾರದ ಬಹುತೇಕ ನಿಗಮಗಳು ಜಾರಿಗೆ ತಂದಿವೆ ಎಂಬ ಹೆಮ್ಮೆ ನನಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಸಲಕರಣೆ ವಿತರಣೆಯಲ್ಲಿ ಶಾಸಕ ಕೆ.ಎಸ್.ಆನಂದ್

ಕನ್ನಡಪ್ರಭ ವಾರ್ತೆ. ಕಡೂರು

ಗಂಗಾಕಲ್ಯಾಣ ಯೋಜನೆ ಅಳವಡಿಕೆ ಕುರಿತು ತಾವು ಸದನದಲ್ಲಿ ಪ್ರಸ್ತಾಪಿಸಿದ ನಂತರ ಸರ್ಕಾರದ ಬಹುತೇಕ ನಿಗಮಗಳು ಜಾರಿಗೆ ತಂದಿವೆ ಎಂಬ ಹೆಮ್ಮೆ ನನಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ತಾಲೂಕು ಘಟಕದಿಂದ ಗಂಗಾಕಲ್ಯಾಣ ಯೋಜನೆ ಪರಿಶಿಷ್ಟ ಜಾತಿಯ 45 ಫಲಾನುಭವಿಗಳಿಗೆ ಸಲಕರಣೆ, ಮೋಟರ್, ಪೈಪ್‌ಗಳನ್ನು ಡಾ.ಅಂಬೇಡ್ಕರ್ ಭವನದಲ್ಲಿ ವಿತರಣೆ ಮಾಡಿ ಮಾತನಾಡಿದರು. ಈ ಹಿಂದೆ ಅಂಬೇಡ್ಕರ್ ನಿಗಮದಿಂದ ಮಾತ್ರ ಗಂಗಾಕಲ್ಯಾಣ ಯೋಜನೆ ಜಾರಿಯಲ್ಲಿತ್ತು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ನಿಗಮಗಳು ಸಹ ಆಯಾ ನಿಗಮದಡಿ ಬರುವ ಜಾತಿ ವರ್ಗಗಳ ರೈತರನ್ನು ಗಂಗಾಕಲ್ಯಾಣ ಯೋಜನೆಗೆ ಸೇರ್ಪಡಿಸಲು ಸದನದಲ್ಲಿ ಮನವಿ ಮಾಡಿದ್ದರ ಫಲವಾಗಿ ಬಹುತೇಕ ನಿಗಮಗಳು ಇದನ್ನು ಜಾರಿಗೊಳಿಸಿವೆ ಎಂದರು.

ಇದೀಗ ಅಂಬೇಡ್ಕರ್, ಆದಿ ಜಾಂಬವ, ಭೋವಿ ನಿಗಮಗಳಿಂದ ಸುಮಾರು 45 ಫಲಾನುಭವಿಗಳಿಗೆ ತಲಾ ಒಬ್ಬರಿಗೆ ₹3.50 ಲಕ್ಷ ರು. ಮೋಟರ್, ಪೈಪ್ ಮತ್ತಿತರ ಸಲಕರಣೆ ನೀಡಲಾಗಿದ್ದು ಅಂದಾಜು ₹1.75 ಕೋಟಿ ವೆಚ್ಚವಾಗಿದೆ ಎಂದರು.ಗಂಗಾ ಕಲ್ಯಾಣ ಯೋಜನೆ ಈ ಹಿಂದೆ ನಿಜವಾದ ಫಲಾನುಭವಿಗಳಿಗೆ ದೊರಕದೆ ಏಜೆಂಟರ್‌ಗಳ ಮೂಲಕ ₹50 ಸಾವಿರ ಲಕ್ಷಕ್ಕೆ ಮಾರಾಟವಾಗುತ್ತಿತ್ತು. ಆದರೆ ನಾನು ಸ್ಥಳೀಯ ಪರಿಶಿಷ್ಟ ಜಾತಿ, ಪಂಗಡಗಳ ವರ್ಗದವರನ್ನು ಕರೆಸಿ ಅದರಲ್ಲಿ ಬಡವ ರನ್ನು ಗುರುತಿಸಿ ಆಯ್ಕೆ ಮಾಡಿ ನೀಡಲಾಗಿದೆ ಎಂದರು.ಪ್ರತಿಯೋರ್ವ ಬಡ ರೈತನಿಗೂ ಜೀವನದಲ್ಲಿ ಬೋರ್‌ವೆಲ್ ಕೊರೆಸಬೇಕೆಂಬ ಮಹದಾಸೆ ಇರುತ್ತದೆ. ಆದರೆ ಹಣಕಾಸಿನ ಸಮಸ್ಯೆ ಬಿಡದೆ ಕಾಡುತ್ತಿರುತ್ತದೆ. ಇಂತಹ ರೈತರನ್ನು ಗುರುತಿಸಿ ಅವರಿಗೆ ಆದ್ಯ ತೆ ನೀಡಿದ್ದೇನೆ ಎಂದರು.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಕಳೆದ 3 ವರ್ಷಗಳ ಅವಧಿಯ ಫಲಾನುಭವಿಗಳಾದ ಸುಮಾರು 45 ಜನರಿಗೆ ತಲಾ ₹3.5 ಲಕ್ಷ ರು. ಮೌಲ್ಯದ ಪರಿಕರಗಳನ್ನು ಶಾಸಕರು ವಿತರಿಸಿದ್ದು ಇದಕ್ಕಾಗಿ ಶಾಸಕರು ನಿಗಮಗಳ ಎಂಡಿ ಗಳಿಗೆ ಒತ್ತಡ ಹಾಕಿ ತಂದಿರುವುದಕ್ಕೆ ನಿಮ್ಮೆಲರ ಪರವಾಗಿ ಅಭಿನಂದಿಸುತ್ತೇನೆ ಎಂದರು.ತಾಪಂ ಮಾಜಿ ಸದಸ್ಯ ಪಂಚನಹಳ್ಳಿ ಪ್ರಸನ್ನ, ಬಳ್ಳೆಕೆರೆ ಸಂತೋಷ್, ಪ್ರಮೋದ್, ಲಕ್ಷ್ಮಣ್, ತಮ್ಮಯ್ಯ, ಸಚಿನ್ ಸೇರಿದಂತೆ ರೈತರು ಹಾಗೂ ಫಲಾನುಭವಿಗಳು ಇದ್ದರು.14ಕೆಕೆಡಿಯು1.ಕಡೂರು ಅಂಬೇಡ್ಕರ್ ಅಭಿವೃದ್ಧಿ, ಆದಿ ಜಾಂಬವ ಮತ್ತು ಭೋವಿ ನಿಗಮದಿಂದ ಬಡ ರೈತರಿಗೆ ಗಂಗಾಕಲ್ಯಾಣ ಯೋಜನೆ ಪರಿಕರಗಳನ್ನು ಶಾಸಕ ಕೆ.ಎಸ್.ಆನಂದ್ ವಿತರಣೆ ಮಾಡಿದರು.

PREV

Latest Stories

ಮಧ್ಯಸ್ಥಿಕೆದಾರರೇ ವಿಶೇಷ ಅಭಿಯಾನ ಯಶಸ್ವಿಗೊಳಿಸಿ: ನ್ಯಾ. ರಾಜೇಶ್ವರಿ ಹೆಗಡೆ ಕರೆ
ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ ವಿಜ್ಞಾನ, ಸಂಶೋಧನೆ
ಕೊನೆ ಆಷಾಢ ಶುಕ್ರವಾರ ಶಕ್ತಿ ದೇವತೆಗಳಿಗೆ ಭಕ್ತರಿಂದ ವಿಶೇಷ ಪೂಜೆ