- ಸಚಿವ ದರ್ಶನಾಪುರ, ಶಾಸಕರಾದ ತುನ್ನೂರು, ಕಂದಕೂರ, ನಾಯಕ ಕಚೇರಿಯೆದುರ ತಮಟೆ ಚಳವಳಿ
- ಮಾದಿಗ, ಮಾದಿಗ ಉಪ ಜಾತಿಗಳ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು ಹಾಗೂ ಆಯಾ ಭಾಗದ ಶಾಸಕರು ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಆಗ್ರಹಿಸಿ ಮಾದಿಗ ಮತ್ತು ಮಾದಿಗ ಉಪ ಜಾತಿಗಳ ಸಂಘಟನೆಗಳ ಒಕ್ಕೂಟ ಜಿಲ್ಲಾ ಘಟಕವು ಸಚಿವ ದರ್ಶನಾಪುರ ಸೇರಿದಂತೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರುಗಳ ಕಚೇರಿಯೆದುರು ತಮಟೆ ಚಳವಳಿ ಪ್ರತಿಭಟನೆ ನಡೆಸಿ, ಗಮನ ಸೆಳೆದರು.ಸುಪ್ರೀಂಕೋರ್ಟ್ ಒಳ ಮೀಸಲಾತಿ-ಪರಿಶಿಷ್ಟ ಜಾತಿಗಳ 101 ಸಮುದಾಯಗಳಿಗೂ ಸಾಮಾಜಿಕ ನ್ಯಾಯ ನೀಡಲು ಸ್ಪಷ್ಟ ತೀರ್ಪನ್ನು ನೀಡಿದೆ. ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಲಾಗಿದೆ, ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಒಳ ಮೀಸಲಾತಿ ಶಿಫಾರಸ್ಸು ಮಾಡುವ ನಿರ್ಧಾರ ಮಾಡಿತ್ತು, ಈಗಾಗಲೇ ತೀರ್ಪು ಬಂದು 4 ತಿಂಗಳು ಕಳೆದಿದೆ, ರಾಜ್ಯ ಸರ್ಕಾರ ಈ ವಿಷಯದ ಮೇಲೆ ಹೆಚ್ಚಿನ ಗಮನ ಹರಿಸದೇ ಕಾಟಾಚಾರಕ್ಕೆ ನ್ಯಾ. ನಾಗಮೋಹನದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರುಗಳು, 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ತಿಳಿಸಿತ್ತಾದರೂ 45 ದಿನಗಳು ಕಳೆದರೂ ಆಯೋಗ ಕೆಲಸ ಆರಂಭಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸರ್ಕಾರದ ಮುಂದೆ ನ್ಯಾ. ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ವರದಿಯಿದೆ, ಮಾಧುಸ್ವಾಮಿಯವರ ಸಮಿತಿ ಏಕೆ (ಆದಿ ಕರ್ನಾಟಕ) ಏಡಿ (ಆದಿ ದ್ರಾವಿಡ) ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ, 2011ರ ಜನಗಣತಿಯ ಅಂಕಿ ಅಂಶಗಳ ಆಧಾರದಲ್ಲಿ ವರ್ಗಿಕರಣ ಮಾಡಿದೆ, ಮತ್ತೆ ಆಯೋಗಕ್ಕೆ ಅದೇ ಕೆಲಸ ನೀಡಲಾಗಿದೆ, ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರಕ್ಕೆ ಇಚ್ಚಾಶಕ್ತಿ ಕೊರತೆ ಇರುವುದು ಎದ್ದು ಕಾಣುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್ ತೀರ್ಪು ಬಂದ ವಾರದಲ್ಲಿಯೇ ಒಳ ಮೀಸಲಾತಿಯನ್ನು ಜಾರಿ ಮಾಡಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸುತ್ತೇವೆ ಎಂದು ತಿಳಿಸಿದ್ದರೂ, ಮುಖ್ಯಮಂತ್ರಿಗಳು ಏಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಒಳ ಮೀಸಲಾತಿ ಜಾರಿಯಾಗುವವರೆಗೆ ಸರ್ಕಾರ ಯಾವುದೇ ಉದ್ಯೋಗ, ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿತ್ತು, ಆದರೆ, ವಿವಿಧ ಇಲಾಖೆಗಳಿಂದ ನೇಮಕಾತಿಯ ಘೋಷಣೆಗಳು ಬರುತ್ತಲ್ಲಿವೆ, ಇದು ಖಂಡನಾರ್ಹವಾಗಿದೆ, ಸರ್ಕಾರದ ಮೇಲೆ ಮಾದಿಗ ಸಮಾಜ ಮತ್ತು ಉಪ ಜಾತಿಗಳ ಸಂಘಟನೆಗಳ ಒಕ್ಕೂಟದಿಂದ ಡಿ. 16ರಂದು ಸೋಮವಾರ ಬೆಳಗಾವಿಯಲ್ಲಿ ಬೃಹತ್ ಹಕ್ಕೋತ್ತಾಯ ಸಮಾವೇಶ ನಡೆಸಲು ನಿರ್ಧರಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ತಿಳಿಸಿದರು.ಸಮುದಾಯದ ನ್ಯಾಯಯುತ ಬೇಡಿಕೆ ಈಡೇರಿಸಲು ನಾನೂ ಬೆಳಗಾವಿಯಲ್ಲಿ ಜೊತೆಯಲ್ಲಿರುತ್ತೇನೆ, ಈ ವಿಷಯದ ಬಗ್ಗೆ ಸದನದಲ್ಲಿ ಮಾತನಾಡಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ಯಾದಗಿರಿಯಲ್ಲಿ ಶಾಸಕದ್ವಯರ ಕಚೇರಿ ಬಳಿ ನಡೆದ ಚಳವಳಿಯಲ್ಲಿ ಮಾದಿಗ ಸಮಾಜದ ಮುಖಂಡರಾದ ದೇವಿಂದ್ರನಾಥ್ ನಾದ, ಮಲ್ಲಣ್ಣ ದಾಸನಕೇರಿ, ಶಾಂತರಾಜ ಮೋಟನಳ್ಳಿ, ಲಿಂಗಪ್ಪ ವಡ್ನಳ್ಳಿ. ಹಣಮಂತ ಇಟಗಿ, ಸ್ಯಾಮಸನ್ ಮಾಳಿಕೇರಿ, ಎಂ. ಕೆ. ಬೀರನೂರ, ಸ್ವಾಮಿದೇವ ದಾಸನಕೇರಿ, ಪರಮರಡ್ಡಿ ಕಂದಕೂರ, ತಾಯಪ್ಪ ಬದ್ದೆಪಲ್ಲಿ, ಮಂಜುನಾಥ ದಾಸನಕೇರಿ, ಬಸವರಾಜ ನಾಯ್ಕಲ್, ಅನೀಲ್ ಕರಾಟೆ, ರಾಜಶೇಖರ ಎದುರುಮನೆ, ಮಲ್ಲಿಕಾರ್ಜುನ್ ದೊಡ್ಮನಿ, ದುರ್ಗಪ್ಪ ಅರಿಕೇರಿ, ಮಲ್ಲು ಹಲಗಿ ಕುರಕುಂದಿ, ಶರಣು ಮೋಟನಳ್ಳಿ, ಸಾಬಣ್ಣ ಸೈದಾಪೂರ, ಸಾಬು ಹೋರುಂಚಾ, ಕಾಶಪ್ಪ ಹೆಗ್ಗಣಗೇರಾ, ಶಿವರಾಜ ದಾಸನಕೇರಿ, ಮಲ್ಲಿಕಾರ್ಜುನ ಜಲ್ಲಪ್ಪನೋರ, ಭೀಮರಾಯ ಬಂದಳ್ಳಿ, ಚಂದ್ರಶೇಖರ ಕಡೇಚೂರ, ಆಶಣ್ಣ ಬುದ್ದ, ಕೆ. ದೇವದಾಸ ಗುರುಮಠಕಲ್ ಉಪಸ್ಥಿತರಿದ್ದರು......ಬಾಕ್ಸ್:1......
* ಚುನಾವಣೆಗಳು ಬಂದಾಗ ಮಾತ್ರ ಮೀಸಲಾತಿ ಮಾತು, ಮೋಸ !ಕನ್ನಡಪ್ರಭ ವಾರ್ತೆ ಶಹಾಪುರ
ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶರಣಬಸಪ್ಪಗೌಡ ದರ್ಶನಾಪುರ ಅವರ ಶಹಾಪುರ ನಿವಾಸದ ಮುಂದೆ ತಮಟೆ ಬಾರಿಸುವ ಮೂಲಕ ಮನವಿ ಪತ್ರ ವನ್ನು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಒಳ ಮಿಸಲಾತಿ ಸಂಘಟನೆಗಳ ಒಕ್ಕೂಟದಿಂದ ಮನವಿ ಪತ್ರ ಸಲ್ಲಿಸಿದರು.ಒಳಮೀಸಲಾತಿ ಸಂಘಟನೆಗಳ ಒಕ್ಕೂಟದ ಮುಖಂಡ ಹಾಗೂ ನ್ಯಾಯವಾದಿ ವಾಸುದೇವ ಎಚ್. ಕಟ್ಟಿಮನಿ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ನಮಗೆ ಮೋಸ ಮಾಡುತ್ತಿವೆ. ಹೀಗಾಗಿ, ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಆದಷ್ಟು ಬೇಗ ಒಳ ಮೀಸಲಾತಿ ಜಾರಿ ಮಾಡಬೇಕು. ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿ ವಿಷಯ ಮಂಡನೆ ಮಾಡಬೇಕು ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗಡ ದರ್ಶನಾಪುರ ಅವರಿಗೆ ಮನವಿ ಮಾಡಿದರು.
ಭೀಮರಾಯ ಕಾಂಗ್ರೆಸ್ ಮಾತನಾಡಿ, ಶತಮಾನಗಳಿಂದಲೂ ಶೋಷಣೆ, ಹಿಂಸೆ, ದೌರ್ಜನ್ಯ, ಬಹಿಷ್ಕಾರ ಅನುಭವಿಸಿಕೊಂಡು ಬರುತ್ತಿರುವ ದಲಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿರುವುದರಿಂದ ರಾಜ್ಯ ಸರ್ಕಾರ ವಿಳಂಬ ಮಾಡದೆ ಒಳ ಮೀಸಲಾತಿ ಜಾರಿಗೆ ತರಬೇಕು. ಅಲ್ಲಿಯವರೆಗೂ ನಮ್ಮ ವಿವಿಧ ಪ್ರಕಾರ ಹಾಗೂ ವಿವಿಧ ಹಂತಗಳಲ್ಲಿ ನಮ್ಮ ಹೋರಾಟ ಮುಂದುವರೆದಿರುತ್ತದೆ ಎಂದು ಅವರು ತಿಳಿಸಿದರು.ಒಕ್ಕೂಟದ ಮುಖಂಡರಾದ, ಮಲ್ಲಪ್ಪ ಉಳ್ಳಂಡಗೇರಿ, ರಾಜಶೇಖರ್ ಗುತ್ತೇದಾರ್, ಶರಣಬಸವ ಕನ್ಯಕೋಳೂರು, ಶಿವಕುಮಾರ್ ದೊಡ್ಮನಿ, ಪ್ರದೀಪ್ ಅಣಬಿ, ಶರಣು, ಲಕ್ಷ್ಮಣ, ಶಾಂತಪ್ಪ, ಧರ್ಮರಾಜ್, ಭೀಮರಾಯ, ಹಣಮಂತ, ಭೀಮಾಶಂಕರ್, ಶಿವು, ಪರಶುರಾಮ್ ಮಹಲ್ರೋಜ, ನಾಗರಾಜ್ ಗುತ್ತಪೇಟೆ, ಮಲ್ಲಿಕಾರ್ಜುನ್ ಗುತ್ತಿಪೇಟೆ ಇದ್ದರು.
....... ಬಾಕ್ಸ್:2.......ಮೀಸಲಾತಿ ಹೋರಾಟದಲ್ಲಿ ನಾನೂ ಭಾಗಿಯಾಗುವೆ: ಶಾಸಕ ಕಂದಕೂರ
ಕನ್ನಡಪ್ರಭ ವಾರ್ತೆ ಗುರುಮಠಕಲ್ಸುಪ್ರೀಂಕೋರ್ಟಿನ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡಲು ಸರ್ಕಾರದ ಮೇಲೆ ಬೆಳಗಾವಿ ಅಧಿವೇಶನದಲ್ಲಿ ಒತ್ತಡ ಹೇರುವಂತೆ ಆಗ್ರಹಿಸಿ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದಿಂದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರ ಯಾದಗಿರಿ ನಗರದಲ್ಲಿರುವ ಶಾಸಕರ ಜನಸಂಪರ್ಕ ಕಚೇರಿ ಆವರಣದ ಎದುರಿಗೆ ತಮಟೆ (ಹಲಗೆ) ಬಾರಿಸುವ ಚಳವಳಿ ಮಾಡಿ ಒತ್ತಾಯಿಸಲಾಯಿತು.
ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್ ತೀರ್ಪು ಬಂದ ವಾರದಲ್ಲಿಯೇ ಒಳ ಮೀಸಲಾತಿಯನ್ನು ಜಾರಿ ಮಾಡಿದೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸುತ್ತೇವೆ ಎಂದು ತಿಳಿಸಿದ್ದರೂ, ಮುಖ್ಯಮಂತ್ರಿಗಳು ಏಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶರಣಗೌಡ ಕಂದಕೂರ, ಅಧಿವೇಶನದಲ್ಲಿ ವಿಷಯ ಪ್ರಸ್ತಾಪದ ವೇಳೆ ಮೀಸಲಾತಿ ಪರ ದನಿಯೆತ್ತುವುದಾಗಿ ಹೇಳಿದರಲ್ಲದೆ, ಅಂದು ಸಮಿತಿಯು ನಡೆಸುವ ಹೋರಾಟದಲ್ಲಿ ಸಮಯಾವಕಾಶ ದೊರೆತರೆ ತಾವೂ ಭಾಗಿಯಾಗುವುದಾಗಿ ಭರವಸೆ ನೀಡಿದರು.
======ಬಾಕ್ಸ್ :3=====ಒಳಮೀಸಲಾತಿ ಪರವಾಗಿ ಧ್ವನಿ ಎತ್ತುವಂತೆ ಶಾಸಕರಿಗೆ ಮನವಿ
ಕನ್ನಡಪ್ರಭ ವಾರ್ತೆ ಸುರಪುರಬೆಳಗಾವಿ ಸುರ್ವಣ ಸೌಧದಲ್ಲಿ ಜರುಗಿರುವ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಮಾದಿಗ ಮತ್ತು ಮಾದಿಗ ಉಪಜಾತಿಗಳ ಒಳಮೀಸಲಾತಿ ಜಾರಿ ಆದೇಶ ಮಾಡಲು ಒಳಮೀಸಲಾತಿಯ ಪರವಾಗಿ ಧ್ವನಿ ಎತ್ತುವಂತೆ ಆಗ್ರಹಿಸಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ನಿವಾಸದ ಮುಂದೆ ತಮಟೆ ಚಳುವಳಿ ನಡೆಸಿ ತಾಲೂಕು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮಾದಿಗ ಸಮುದಾಯದ ಮುಖಂಡರು, ಸುಪ್ರೀಂಕೋರ್ಟಿನ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೆ ಕಾಲಹರಣದ ರಾಜಕೀಯ ಮಾಡತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಡಿಸೆಂಬರ್ 16 ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.ಸರ್ಕಾರದ ಈ ಒಳಮೀಸಲಾತಿ ವಿರೋಧಿ ಧೋರಣೆ ಖಂಡಿಸಿ ಡಿಸೆಂಬರ್ 16 ರಂದು ಸೋಮವಾರ ಬೆಳಗಾವಿಯಲ್ಲಿ ಬಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಕರೆ ಕೊಡಲಾಗಿದೆ ಎಂದ ಅವರು, ಈ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಲು ಎಲ್ಲಾ ಶಾಸಕರ ನಿವಾಸದ ಮುಂದೆ ತಮಟೆ ಚಳುವಳಿ ನಡೆಸಿ ಮನವಿ ಸಲ್ಲಿಸಲಾಗಿದೆ ಎಂದರು.
ಮಾದಿಗ ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ ಬಿಲ್ಲವ್, ದಾನಪ್ಪ ಕಡಿಮನಿ, ಭೀಮಾಶಂಕರ ಬಿಲ್ಲವ್, ಮರೆಪ್ಪ ಬಸ್ಸಾಪೂರ, ನಂದುಕುಮಾರ ಪಿ. ಬಾಂಬೆಕರ್, ಮಾನಪ್ಪ ದಾಡಿ, ಮಲ್ಲಿಕಾರ್ಜುನ ಮಂದಾಲೆ, ಬಾಬು ವಾಗಣಗೇರಾ, ಯಡಿಮಾಮ್, ಭೀಮಣ್ಣ ಕಡಿಮನಿ, ಬಸವರಾಜ ಹಗರಟಗಿ, ನಂದಪ್ಪ ಪಿರಾಪೂರ, ರಮೇಶ ಪೂಜಾರಿ, ಬಸವರಾಜ ಸಿ. ಹಾದಿಮನಿ, ಕಾಂತಪ್ಪ ದೀವಳಗುಡ್ಡ, ಭೀಮಣ್ಣ ಅಡೊಡಗಿ, ಭೀಮಣ್ಣ ಮ್ಯಾಗೇರಿ, ಸೋಮಶೇಖರ ಬನದೊಡ್ಡಿ, ಬಸವರಾಜ ಮುಷ್ಕಳ್ಳಿ, ಲಕ್ಷ್ಮಣ ಕಟ್ಟಿಮನಿ ಆಲ್ದಾಳ, ಮಹೇಶ ಜಾಲಿಬೆಂಚಿ ಸೇರಿದಂತೆ ಇತರರಿದ್ದರು.-
14ವೈಡಿಆರ್3 : ಯಾದಗಿರಿಯಲ್ಲಿ ನಡೆಸಿದ ತಮಟೆ ಚಳವಳಿಯಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮನವಿ ಪತ್ರ ಸ್ವೀಕರಿಸಿದರು.-
14ವೈಡಿಆರ್4 : ಶಹಾಪುರದಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ತಮಟೆ ಚಳವಳಿ ಮೂಲಕ ಒಳಮಿಸಲಾತಿ ಸಂಘಟನೆಗಳ ಒಕ್ಕೂಟದಿಂದ ಮನವಿ ಪತ್ರ ಸಲ್ಲಿಸಿದರು.-
14ವೈಡಿಆರ್5 : ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಯಾದಗಿರಿ ನಗರದಲ್ಲಿರುವ ಜನಸಂಪರ್ಕ ಕಚೇರಿಯಲ್ಲಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು.-
14ವೈಡಿಆರ್6: ಬೆಳಗಾವಿಯ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿ ಆದೇಶ ಮಾಡಲು ಒಳಮೀಸಲಾತಿಯ ಪರವಾಗಿ ಧ್ವನಿ ಎತ್ತುವಂತೆ ಆಗ್ರಹಿಸಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ನಿವಾಸದ ಮುಂದೆ ತಮಟೆ ಚಳುವಳಿ ನಡೆಸಿ ತಾಲೂಕು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು.---000---