ಆರೋಗ್ಯವೇ ಭಾಗ್ಯ ಸರ್ವಕಾಲಿಕ ಸತ್ಯ: ಡಾ.ಮನೋಹರ

KannadaprabhaNewsNetwork |  
Published : Jul 02, 2024, 01:30 AM IST
೧ಬಿಎಸ್ವಿ೦೧- ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ವೈದ್ಯರಿಗೆ ಸಿಹಿ ತಿನ್ನಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬ ಮಾತು ಸರ್ವಕಾಲಿಕ ಸತ್ಯವಾಗಿದೆ. ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಔಷಧಿ ನೀಡಿ ಗುಣ ಪಡಿಸುವುದು ವೈದ್ಯರ ಕರ್ತವ್ಯ ಎಂದು ತಾಲೂಕು ಸರ್ಕಾರಿ ಆಸ್ಪತ್ರೆಯ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ ಸಿಂಹಾಸನ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬ ಮಾತು ಸರ್ವಕಾಲಿಕ ಸತ್ಯವಾಗಿದೆ. ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಔಷಧಿ ನೀಡಿ ಗುಣ ಪಡಿಸುವುದು ವೈದ್ಯರ ಕರ್ತವ್ಯ ಎಂದು ತಾಲೂಕು ಸರ್ಕಾರಿ ಆಸ್ಪತ್ರೆಯ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ ಸಿಂಹಾಸನ ಹೇಳಿದರು.ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಸೋಮವಾರ ಹಮ್ಮಿಕೊಂಡಿದ್ದ ವೈದ್ಯ ದಿನ ಕಾರ್ಯಕ್ರಮದ ಮಾತನಾಡಿದ ಅವರು, ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸುವುದು ವೈದ್ಯರ ಕಾಯಕ. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ವೈದ್ಯರೊಂದಿಗೆ ಉಳಿದ ಸಿಬ್ಬಂದಿಗಳ ಪಾತ್ರವೂ ಬಹುಮುಖ್ಯವಾಗಿದೆ. ಎಲ್ಲರ ಸಹಕಾರದೊಂದಿಗೆ ಜನರಿಗೆ ಉತ್ತಮ ಸೇವೆ ನೀಡುವುದು ತುಂಬಾ ಅಗತ್ಯವಿದೆ ಎಂದರು.

ಆಸ್ಪ್ರತ್ರೆಯ ಡಾ.ಶಾಕೀರ ಪಟೇಲ ಹಾಗೂ ಡಾ.ಬಸವರಾಜ ಮುತ್ತತ್ತಿ ಅವರು ಮಾತನಾಡಿ, ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಗಳಾಗಿದ್ದ ಡಾ.ಬಿ.ಸಿ.ರಾಯ್ ಅವರ ಸ್ಮರಣೆಯಲ್ಲಿ ಪ್ರತಿವರ್ಷ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಡಾ.ಬಿ.ಸಿ.ರಾಯ್ ಅವರೊಬ್ಬ ಅಸಾಧಾರಣ ವೈದ್ಯರು. ಅವರು ದೂರದೃಷ್ಟಿ ನಿಲುವುಗಳಿಂದ ವೈದ್ಯಲೋಕಕ್ಕೆ ಅಪರೂಪದ ಕೊಡುಗೆ ನೀಡಿದ್ದಾರೆ. ಡಾ.ಬಿ.ಸಿ.ರಾಯ್ ಅವರು ವೈದ್ಯರಿಗೆ ಮಾದರಿಯಾಗಿದ್ದಾರೆ ಎಂದು ವಿವರಿಸಿದರು.

ಡಾ.ಬಸವರಾಜ ಝಳಕಿ ಮಾತನಾಡಿದರು. ಡಾ.ಸಂಜಯ ಸಂಗಾವಿ, ಡಾ.ಪಾರ್ಥ ನಾಝ್, ಡಾ.ಹಜರಾ ಬೇಗಂ, ಡಾ.ಮುತ್ತಣ್ಣ ಮನಹಳ್ಳಿ, ಆಸ್ಪತ್ರೆಯ ಸಿಬ್ಬಂದಿ ಐ.ಎಂ.ಕೊಣ್ಣೂರ, ಶಾಂತಾ ಕೋಲಕಾರ, ಅರ್ಚನಾ ನಾಟೀಕಾರ, ಬಸವರಾಜ ಧನ್ಯಾಳ, ನಿರ್ಮಲಾ ವಸ್ತ್ರದ, ವೆಂಕಟೇಶ ವಡ್ಡರ, ಪರಶುರಾಮ ಬಡಿಗೇರ, ಹಾಸೀಂ, ಬಸವರಾಜ ಪಟ್ಟಣಶೆಟ್ಟಿ ಇತರರು ಇದ್ದರು. ಗುರುರಾಜ ಕುಲಕರ್ಣಿ ಸ್ವಾಗತಿಸಿದರು. ಅಣ್ಣಪ್ಪ ಬಿದ್ನಾಳ ನಿರೂಪಿಸಿ, ವಂದಿಸಿದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ವೈದ್ಯರಿಗೆ ಸಿಹಿ ತಿನ್ನಿಸಿ ಶುಭಕೋರಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ